ಕೆನಡಾ ನೆಲದಲ್ಲಿ ಮುಂದುವರಿದ ಖಲಿಸ್ತಾನಿ ಕಿರಿಕಿರಿ!
ಭಾರತದ ವಿರುದ್ಧ ಪಾಶ್ಚಿಮಾತ್ಯ ದೇಶಗಳು ಖಲಿಸ್ತಾನಿ ಅಸ್ತ್ರ ಬಳಸುವುದನ್ನ ಬಿಟ್ಟಿಲ್ಲ. ಈ ಪೈಕಿ ಕೆನಡಾ ಮುಂದೆ ಇದ್ದು, ಭಾರತದ ಜೊತೆಗೆ ಖಲಿಸ್ತಾನಿ ಕಿರಿಕ್ ಮುಂದುವರಿಸಿದೆ. ಈ ಪೈಕಿ ಈಗ, ಖಲಿಸ್ತಾನಿ ಬಂಡುಕೋರ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಭಾರತ ಮೂಲದ 4ನೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ ಕೆನಡಾ ಸರ್ಕಾರ.
ಕೆಲವು ದಿನಗಳ ಹಿಂದಷ್ಟೇ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಕೇಸ್‌ನ 4ನೇ ಆರೋಪಿಯನ್ನು ಕೆನಡಾ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ವಿಚಾರ ಮತ್ತಷ್ಟು ತಿಕ್ಕಾಟಕ್ಕೆ ದಾರಿಯನ್ನು ಮಾಡಿಕೊಟ್ಟಿತ್ತು. ಹೀಗಿದ್ದಾಗಲೇ ಖಾಲಿಸ್ತಾನಿ ಬಂಡುಕೋರ, ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕೇಸ್ ಸಂಬಂಧ ಬಂಧಿಸಲಾಗಿದ್ದ ಭಾರತ ಮೂಲದ 4ನೇ ಆರೋಪಿಯನ್ನ ಕೆನಡಾ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ. ಆರೋಪಿಯನ್ನು ಅಮನ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಯಿತು. ಭದ್ರತೆ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡಲಾಗಿದೆ ಎನ್ನಲಾಗಿದೆ.

ಉರಿಯುವ ಬೆಂಕಿಗೆ ತುಪ್ಪ?
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ 2023ರ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹಿಂಸಾಚಾರ & ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾದ ಆರೋಪ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು. ಆದ್ರೆ ಭಾರತದ ಏಜೆಂಟ್‌ಗಳು ಈ ಕೊಲೆ ಮಾಡಿದ್ದಾರೆ ಎನ್ನುತ್ತಿದೆ ಕೆನಡಾ. ಹೀಗಾಗಿಯೇ ಸೂಕ್ತ ಸಾಕ್ಷ್ಯ ಇಲ್ಲದೆ, ಇಂತಹ ಆರೋಪ ಸರಿಯಲ್ಲ ಎಂದು ಭಾರತ ವಾರ್ನಿಂಗ್ ಮಾಡುತ್ತಿದೆ. ಹೀಗಿದ್ದಾಗ ಭಾರತ ಮೂಲದ ಜನರನ್ನ ಕೆನಡಾ ಅರೆಸ್ಟ್ ಮಾಡುತ್ತಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತಿದೆ.
ಆರೋಪಿಯ ಸುದೀರ್ಘ ವಿಚಾರಣೆ?
ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಕೇಸ್ನಲ್ಲಿ ಅರೆಸ್ಟ್ ಆದ ಭಾರತ ಮೂಲದ 4ನೇ ಆರೋಪಿಯನ್ನು ಸುದೀರ್ಘವಾಗಿ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಯಿತು. ವಿಚಾರಣೆ ಬಳಿಕ ಮತ್ತಷ್ಟು ವಿವರಣೆ ಅಗತ್ಯ ಇದೆ ಎಂಬ ಕಾರಣಕ್ಕೆ, ಆರೋಪಿ ವಿಚಾರಣೆಯ ಮುಂದಿನ ವಾರಕ್ಕೆ ಮುಂದೂಡಲಾಗಿದೆ. ನಿಜ್ಜರ್ ಕೇಸ್ ಸಂಬಂಧ ಕರಣ್ ಬ್ರಾರ್ ಮತ್ತು ಕಮಲ್‌ಪ್ರೀತ್ ಸಿಂಗ್ ಸೇರಿ ಕರಣ್‌ಪ್ರೀತ್ ಸಿಂಗ್ ಅರೆಸ್ಟ್ ಆಗಿದ್ರು. ಇನ್ನು ಅಮನ್‌ದೀಪ್ ಸಿಂಗ್‌ನ ಮೇ 11ರಂದು ಬಂಧಿಸಲಾಗಿತ್ತು. ಇದೀಗ ವಿಚಾರಣೆ ಆರಂಭವಾಗಿದ್ದು, ಭಾರತ ಕೂಡ ಈ ಬಗ್ಗೆ ಎಚ್ಚರಿಕೆ ನಡೆ ಇಡುತ್ತಿದೆ. ಈ ಮೂಲಕ ಕೆನಡಾಗೆ ಸರಿಯಾಗಿ ಉತ್ತರ ನೀಡುತ್ತಿದೆ.












Click it and Unblock the Notifications