ರಾಷ್ಟ್ರಪತಿ ಆಯ್ಕೆಯಲ್ಲಿ ಬಿಜೆಪಿಗೆ ತಲೆ ಬೇನೆ ತರಲಿದೆಯೇ ಶಿವಸೇನೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜೂನ್ 20: ಶಿವಸೇನೆ ಬೆಂಬಲ ಇಲ್ಲದೆ ಬಿಜೆಪಿಯು ತನ್ನ ಆಯ್ಕೆಯ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಲು ಸಾಧ್ಯವೆ? ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಿರುವ ಶಿವಸೇನೆ ರಾಮ್ ನಾಥ್ ಕೋವಿಂದ್ ರ ಆಯ್ಕೆಗೆ ಬೆಂಬಲ ನೀಡುವ ಸಾಧ್ಯತೆ ತೀರಾ ಕಡಿಮೆ.

25,893 ಮತಗಳನ್ನು ಒಗ್ಗೂಡಿಸುವಲ್ಲಿ ಶಿವಸೇನೆ ಪಾತ್ರ ತುಂಬ ಮುಖ್ಯ. ಇಂಥ ಸಂದರ್ಭದಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ತೀರ್ಮಾನವನ್ನು ಶಿವಸೇನೆ ಇನ್ನೂ ಅಂತಿಮಗೊಳಿಸಿಲ್ಲ.

ಬಿಜೆಪಿಯಿಂದ ರಾಷ್ಟ್ರಪತಿ ಅಭ್ಯರ್ಥಿ ಘೋಷಣೆ: ಶಿವಸೇನೆ ಕಿಡಿ

ಇನ್ನು ಪ್ರತಿಪಕ್ಷಗಳು ಅಂಬೇಡ್ಕರ್ ರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿವೆ. ಶಿವಸೇನೆಗೆ ಈ ಆಯ್ಕೆ ಬಗ್ಗೆ ಹೆಚ್ಚಿನ ಒಲವು. ಏಕೆಂದರೆ ಪ್ರಕಾಶ್ ದಲಿತರು ಅನ್ನೋದು ಒಂದು ಕಾರಣ ಆದರೆ, ಅವರು ಮಹಾರಾಷ್ಟ್ರದವರು ಎಂಬುದು ಮತ್ತೊಂದು ಬಲವಾದ ಕಾರಣ.

ಈ ಹಿಂದೆ ಎನ್ ಡಿಎ ಮೈತ್ರಿಯನ್ನೂ ಬಿಟ್ಟಾಕಿ ಪ್ರತಿಭಾ ಪಾಟೀಲರನ್ನು ಶಿವಸೇನೆ ಬೆಂಬಲಿಸಿತ್ತು. ದಲಿತರ ಮತಕ್ಕಾಗಿ ಬಿಜೆಪಿ ಕೋವಿಂದ್ ಹೆಸರನ್ನು ಮುಂದು ಮಾಡಿದರೆ ಅದಕ್ಕೆ ನಮ್ಮ ಬೆಂಬಲವಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಈಗಾಗಲೇ ಹೇಳಿದ್ದಾರೆ.

ಅಮಿತ್ ಶಾ ನೀಡಿದ ಆಫರ್ ತಿರಸ್ಕರಿಸಿದ ಶಿವಸೇನೆ?

ಈ ನಿರ್ಧಾರವನ್ನು ಮಂಗಳವಾರವೇ ಘೋಷಣೆ ಮಾಡುತ್ತದೋ ಅಥವಾ ಪ್ರತಿಪಕ್ಷಗಳು ಗುರುವಾರ ಅಭ್ಯರ್ಥಿಯ ಹೆಸರು ಘೋಷಣೆ ಮಾಡುವವರೆಗೂ ಕಾಯುತ್ತದೋ ಎಂಬುದು ತಿಳಿಯಬೇಕಿದೆ. ತಾನು ಕಣಕ್ಕಿಳಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಿಸಿಕೊಳ್ಳಲು ಬಿಜೆಪಿಗೆ ಶಿವಸೇನೆ ಬೆಂಬಲ ಅತಿ ಮುಖ್ಯ.

ನಿತೀಶ್ ಕುಮಾರ್ ಬೆಂಬಲ

ನಿತೀಶ್ ಕುಮಾರ್ ಬೆಂಬಲ

ಶಿವಸೇನೆಯಿಂದ ಒಟ್ಟಾಗಿ ದೊರಕುವ ಮತಗಳ ಸಂಖ್ಯೆ 25,893. ಸದ್ಯದ ಸ್ಥಿತಿಯಲ್ಲಿ ಬಿಜೆಪಿಗೆ ಇಪ್ಪತ್ತು ಸಾವಿರ ಮತಗಳ ಕೊರತೆಯಾಗಬಹುದು. ತಮಿಳುನಾಡು ಹಾಗೂ ಒಡಿಶಾದಿಂದಲೂ ಬೆಂಬಲ ನಿರೀಕ್ಷಿಸಲಾಗುತ್ತಿದೆ. ಎಐಎಡಿಎಂಕೆ ಹಾಗೂ ಬಿಜೆಡಿ ಎನ್ ಡಿಎಗೆ ಬೆಂಬಲ ಸೂಚಿಸುವ ಸಾಧ್ಯತೆಗಳಿವೆ. ನಿತೀಶ್ ಕುಮಾರ್ ಕೂಡ ಬಿಜೆಪಿ ಬೆಂಬಲಿಸುವ ಮಾತಾಡಿದ್ದಾರೆ. ಆದರೆ ಪ್ರತಿಪಕ್ಷಗಳು ಯಾರನ್ನು ಕಣಕ್ಕಿಳಿಸುತ್ತವೆ ಎಂಬುದರ ಮೇಲೆ ಬಹಳ ಸಂಗತಿಗಳು ನಿರ್ಧಾರವಾಗಲಿದೆ.

ಮಹಾರಾಷ್ಟ್ರದ ಮತ ಲೆಕ್ಕಾಚಾರ

ಮಹಾರಾಷ್ಟ್ರದ ಮತ ಲೆಕ್ಕಾಚಾರ

ಒಂದು ವೇಳೆ ಬಿಜೆಪಿಗೆ ಶಿವಸೇನೆ ಬೆಂಬಲ ಕೊಡದಿದ್ದರೆ ಇಪ್ಪತ್ತು ಸಾವಿರ ಮತಗಳ ಕೊರತೆ ಬೀಳುತ್ತದೆ. ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಸಂಖ್ಯಾ ಬಲ 288. ಅದರಲ್ಲಿ ಬಿಜೆಪಿಗೆ 122 ಶಾಸಕರ ಬಲವಿದೆ. ಜತೆಗೆ ಇತರೆ 12 ಶಾಸಕರ ಬೆಂಬಲವಿದೆ. ಶಿವಸೇನೆಯ 63 ಶಾಸಕರಿದ್ದಾರೆ. ಮಹಾರಾಷ್ಟ್ರದ ಒಬ್ಬ ಶಾಸಕರ ಮತದ ಮೌಲ್ಯ 175.

ಶಿವಸೇನೆಯು ಕಾಂಗ್ರೆಸ್ ಬೆಂಬಲಿಸಿದರೆ

ಶಿವಸೇನೆಯು ಕಾಂಗ್ರೆಸ್ ಬೆಂಬಲಿಸಿದರೆ

ಇದರ ಅರ್ಥ ಶಿವಸೇನೆ ಬೆಂಬಲದ ಜತೆಗೆ ಬಿಜೆಪಿಯ ಒಟ್ಟು ಮತದ ಮೌಲ್ಯ 34,475. ಕಾಂಗ್ರೆಸ್ ನ ಮತ ಮೌಲ್ಯ 15,575. ಒಂದು ವೇಳೆ ಶಿವಸೇನೆಯು ಕಾಂಗ್ರೆಸ್ ಬೆಂಬಲಿಸಿದರೆ ಆಗ ಅದರ ಒಟ್ಟು ಮತ ಮೌಲ್ಯ 26,000 ಆಗುತ್ತದೆ.

ಮಹಾರಾಷ್ಟ್ರದಿಂದ 67 ಸಂಸದರು

ಮಹಾರಾಷ್ಟ್ರದಿಂದ 67 ಸಂಸದರು

ಮಹಾರಾಷ್ಟ್ರದಿಂದ 67 ಸಂಸದರಿದ್ದಾರೆ ಮತ್ತು 19 ರಾಜ್ಯಸಭಾ ಸದಸ್ಯರಿದ್ದಾರೆ, ಪ್ರತಿ ಸಂಸದರ ಮತದ ಮೌಲ್ಯ ತಲಾ 708 ಆಗುತ್ತದೆ. ಬಿಜೆಪಿ ಹಾಗೂ ಶಿವಸೇನೆ ಎರಡೂ ಸೇರಿ 52 ಸಂದರಾಗುತ್ತಾರೆ. ಮತ್ತು ಅವರೆಲ್ಲರ ಒಟ್ಟು ಮತದ ಮೌಲ್ಯ 36816. ಇನ್ನು ಕಾಂಗ್ರೆಸ್ ಹಾಗೂ ಅದರ ಮೈತ್ರಿ ಕೂಟ ಮಹಾರಾಷ್ಟ್ರದಲ್ಲಿ 10620 ಮತಗಳನ್ನು ಹೊಂದಿವೆ. ಒಂದು ವೇಳೆ ಶಿವಸೇನೆ ಬೆಂಬಲ ಕೊಟ್ಟರೆ ಕಾಂಗ್ರೆಸ್ ಪಾಲಿನ ಮತ 25488 ಆಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Can the BJP appoint the next President of India without the Shiv Sena? The BJP's alliance partner in Maharashtra has given very little out on whether it would back Ram Nath Kovind, the BJP's choice for Rashtrapati Bhavan.
Please Wait while comments are loading...