ಮೋದಿಯನ್ನು 'ನೀಚ ವ್ಯಕ್ತಿ' ಎಂದ ಎಎಪಿ: ಇದು 'ಗುಜರಾತ್‌ಗೆ ಅವಮಾನ' ಎಂದ ಬಿಜೆಪಿ

ಆಮ್ ಆದ್ಮಿ ಪಕ್ಷದ (ಎಎಪಿ) ಗುಜರಾತ್ ಘಟಕದ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಬಿಜೆಪಿ ಸೋಮವಾರ ಖಂಡಿಸಿದೆ. ಇದು ಭಾರತ ಮತ್ತು ರಾಜ್ಯದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಮಾಡಿದ ಅವಮಾನ ಎಂದು ಹೇಳಿದೆ.

ಬಿಜೆಪಿಯ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಅವರು ಭಾನುವಾರ ಟ್ವಿಟ್ಟರ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಎಎಪಿಯ ಗುಜರಾತ್ ಸಂಚಾಲಕ ಗೋಪಾಲ್ ಇಟಾಲಿಯಾ ಅವರು ಮೋದಿಯನ್ನು "ನೀಚ್ ಆದ್ಮಿ" (ನೀಚ ವ್ಯಕ್ತಿ) ಎಂದು ಕರೆಯುವುದನ್ನು ಕೇಳಬಹುದು. ವಿಡಿಯೋ 2019 ರ ಹಿಂದಿನದು ಮತ್ತು ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಮಾಡಲಾಗಿದೆ ಎಂದು ವರದಿಯಾಗಿದೆ.

ಸೋಮವಾರ ಬಿಜೆಪಿ ಪ್ರಧಾನ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ವಕ್ತಾರ ಸಂಬಿತ್ ಪಾತ್ರ, ಪ್ರಧಾನಿಯನ್ನು ಉಲ್ಲೇಖಿಸಿ ಎಎಪಿ ಬಳಸುವ ಭಾಷೆ "ಎಎಪಿಯ ನಿಜ ರೂಪವನ್ನು ತೋರಿಸುತ್ತದೆ ಮತ್ತು ಅವರ ಉದ್ದೇಶವನ್ನು ತೋರಿಸುತ್ತದೆ" ಎಂದು ಕುಟುಕಿದ್ದಾರೆ.

Calls it insult to Gujarat: BJP slams AAP for calling Modi ‘lowly person’

ಯಾವುದೇ ಪ್ರಧಾನ ಮಂತ್ರಿಯನ್ನು "ನೀಚ್ ಆದ್ಮಿ" ಎಂದು ಕರೆಯಲಾಗುವುದಿಲ್ಲ ಎಂದು ಪಾತ್ರ ಪ್ರತಿಪಾದಿಸಿದರು. ಏಕೆಂದರೆ "ಎಲ್ಲಾ ಪ್ರಧಾನ ಮಂತ್ರಿಗಳು ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿದ್ದಾರೆ. ಮತ್ತು ಅವರನ್ನು ನೀಚ್ ಆದ್ಮಿ (ನೀಚ ವ್ಯಕ್ತಿ) ಎಂದು ಕರೆಯುವುದು ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ... ದೇಶದ ಸಂಸದೀಯ ಪ್ರಕ್ರಿಯೆಗೆ ಮಾಡಿದ ಅವಮಾನವಾಗಿದೆ.

ಕಾಂಗ್ರೆಸ್‌ನ ನಾಯಕ ಮಣಿಶಂಕರ್ ಅಯ್ಯರ್ ಅವರು ಮೋದಿಯವರಿಗೆ ಅದೇ ರೀತಿಯ ಅವಮಾನವನ್ನು ಬಳಸಿದ ನಂತರ ಯಾವ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ ಎಎಪಿ ಅದೇ ಭವಿಷ್ಯವನ್ನು ಎದುರಿಸಲಿದೆ ಎಂದು ಹೇಳಿದ ಪಾತ್ರಾ, "ಪ್ರಧಾನಿ ಮೋದಿ ಗುಜರಾತ್‌ನಿಂದ ಬಂದವರು ಮತ್ತು ಅವರ ವಿರುದ್ಧ ಇಂತಹ ಟೀಕೆಗಳನ್ನು ಬಳಸುವುದು ಗುಜರಾತ್‌ಗೆ ಮಾಡಿದ ಅವಮಾನವಾಗಿದೆ" ಎಂದರು. ಇಡೀ ದೇಶದಲ್ಲಿ ಕಾಂಗ್ರೆಸ್ ಸ್ಥಿತಿಯನ್ನು ಎಲ್ಲರೂ ನೋಡಿದ್ದಾರೆ, ಅರವಿಂದ್ ಕೇಜ್ರಿವಾಲ್ ಅವರು ಇಂದು ಅದೇ ಭಾಷೆಯನ್ನು ಬಳಸುತ್ತಿದ್ದಾರೆ ಎಂದು ಅವರು ಹೇಳಿದರು.

Calls it insult to Gujarat: BJP slams AAP for calling Modi ‘lowly person’

ಅಂದರೆ ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸಿ ಎಲ್ಲೆಡೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸುತ್ತಿದೆ. ಅದೇ ರೀತಿ ಎಎಪಿ ಕೂಡ ಮುಂದಿನ ದಿನಗಳಲ್ಲಿ ಸೋಲನ್ನು ಅನುಭವಿಸುತ್ತದೆ ಎಂದು ಪಾತ್ರ ಕಿಡಿ ಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+