ಸುರಕ್ಷತೆ ಇಲ್ಲದಿದ್ದರೆ ಕೇಬಲ್ ಟಿವಿ ಪರವಾನಗಿ ರದ್ದು: ಸುಪ್ರಿಂ
ನವದೆಹಲಿ, ಜನವರಿ 12: ಸುರಕ್ಷತೆ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಕೇಬಲ್ ನೆಟ್‌ವರ್ಕ್ ಪರವಾನಗಿಯನ್ನು ರದ್ದು ಮಾಡಬಹುದು ಎಂದು ಸುಪ್ರಿಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುರಕ್ಷತೆ ಇಲ್ಲದ ಕೇಬಲ್ ನೆಟ್‌ವರ್ಕ್‌ಗಳಿಗೆ ನೋಟೀಸ್ ಸಹ ನೀಡದೇ ಪರವಾನಗಿ ನೀಡಬಹುದು ಎಂದು ಸುಪ್ರಿಂ ತನ್ನ ತೀರ್ಪಿನಲ್ಲಿ ಹೇಳಿದೆ. ಈ ವಿಷಯದಲ್ಲಿ ವಿಚಾರಣೆ ಸಹ ಅವಶ್ಯಕತೆ ಇಲ್ಲದೆ ಪರವಾನಗಿ ರದ್ದು ಮಾಡಬಹುದು, ವಿಚಾರಣೆಗೆ ನಂತರ ಅವಕಾಶ ನೀಡಲಾಗುವುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ತಿದ್ದುಪಡಿ ಆಗಿರುವ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯ್ದೆ ಪ್ರಕಾರ 2012 ರ ರೂಲ್ 11 ಸಿ ನಿಬಂಧನೆಗಳ ಪ್ರಕಾರ ಸುರಕ್ಷತೆ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಮನೋಹರ್ ಸಪ್ರೆ ಮತ್ತು ಇಂದು ಮಲ್ಹೋತ್ರಾ ಅವರಿದ್ದ ಪೀಠವು ಹೇಳಿದೆ.
ಕೇಬಲ್ ಟಿವಿ ಸುರಕ್ಷತೆ ಅನುಮೋದನೆ ನೀಡುವುದು ಸಂಬಂಧಪಟ್ಟ ಇಲಾಖೆ ಮತ್ತು ಪ್ರಾಧಿಕಾರದ ಅಧೀನದಲ್ಲಿರುತ್ತದೆ. ಪರವಾನಗಿ ನೀಡುವುದು ರದ್ದು ಮಾಡುವುದು ಸಹ ಅದೇ ಪ್ರಾಧಿಕಾರದ ಅಧಿಕಾರದಲ್ಲಿ ಇರುತ್ತದೆ ಎಂದು ಪೀಠ ಹೇಳಿದೆ.
2015 ರ ಸೆಪ್ಟೆಂಬರ್‌ನಲ್ಲಿ ಬಾಂಬೆ ಹೈಕೋರ್ಟ್ ಇದೇ ವಿಷಯವಾಗಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಡಿಜಿ ಕೇಬಲ್ ನೆಟ್‌ವರ್ಕ್ ಮತ್ತು ಇತರರು ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದರು. ಇಲ್ಲಿಯೂ ಅವರಿಗೆ ಸೋಲಾಗಿದೆ.
ಮಲ್ಟಿ ಸಿಸ್ಟಂ ಕಾರ್ಯಾಚರಣೆ ವ್ಯವಸ್ಥೆಯನ್ನು ಗೃಹ ಸಚಿವಾಲಯವು 2014ರಲ್ಲಿ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಡಿಜಿ ಕೇಬಲ್ ಬಾಂಬೆ ಹೈಕೋರ್ಟ್ ಮೆಟ್ಟಲಿರಿತ್ತು. ಆದರೆ ಅಲ್ಲಿ ಅವರ ಅರ್ಜಿಗೆ ಸೋಲಾಗಿತ್ತು. ಹಾಗಾಗಿ ಸುಪ್ರಿಂಗೆ ಅರ್ಜಿ ಸಲ್ಲಿಸಿದ್ದರು ಆದರೆ ಇಲ್ಲಿಯೂ ಸೋಲಾಗಿದೆ.












Click it and Unblock the Notifications