New Rail Projects: 4 ರಾಜ್ಯಗಳ 389 ಕಿಮೀ. ರೈಲು ಯೋಜನೆಗೆ ಕೇಂದ್ರ ಅಸ್ತು: ಕರ್ನಾಟಕದಲ್ಲಿ 65 ಕಿಮೀ ಜಾಲ, ಎಲ್ಲೆಲ್ಲಿ?
ನವದೆಹಲಿ: ಕರ್ನಾಟಕದ ಪ್ರಸಿದ್ಧ ಪ್ರವಾಸೋದ್ಯಮ ಸ್ಥಳ, ಇತರ ರಾಜ್ಯಗಳ ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕಿಸುವ ಮಾರ್ಗ ಸೇರಿದಂತೆ ಒಟ್ಟು 04 ರಾಜ್ಯಗಳ ಹಲವು ಜಿಲ್ಲೆಗಳ ಹೊಸ ಮೂರು ರೈಲು ಮಾರ್ಗಗಳ ಬಹುಕೋಟಿ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಪ್ರಮುಖ ಭಾಗಗಳಲ್ಲಿ ಸಂಪರ್ಕ ವೃದ್ಧಿಸಲಿದೆ. ಸಾರಿಗೆ, ಕೈಗಾರಿಕೆ, ಇತರ ವಲಯಗಳ ಅಭಿವೃದ್ಧಿ ಆಗಲಿದೆ ಎಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಶುಕ್ರವಾರ ರೈಲ್ವೆ ಸಚಿವಾಲಯ ವ್ಯಾಪ್ತಿಯಲ್ಲಿ ಬರೋಬ್ಬರಿ 389 ಕಿಲೋ ಮೀಟರ್ ರೈಲ್ವೆ ಜಾಲ ವಿಸ್ತರಣೆಗೆ ಮೂರು ರೈಲು ಯೋಜನೆಗಳಿಗೆ ಅನುಮೋದಿಸಲಾಗಿದೆ. ಇವು ಒಟ್ಟು ಅಂದಾಜು ರೂ. 18,509 ಕೋಟಿ ವೆಚ್ಚದ ಯೋಜನೆಗಳಾಗಿವೆ ಎಂದು ಅವರು ತಿಳಿಸಿದ್ದಾರೆ. ಸಂಪೂರ್ಣ ಮಾಹಿತಿ ಮುಂದಿದೆ..

ಮೂರು ರೈಲು ಯೋಜನೆಗಳು ಯಾವುವು?
1. ಕಸಾರಾ - ಮನ್ಮಾಡ್ 3 ನೇ ಮತ್ತು 4 ನೇ ಮಾರ್ಗ
2. ದೆಹಲಿ - ಅಂಬಾಲ 3 ನೇ ಮತ್ತು 4 ನೇ ಮಾರ್ಗ
3. ಬಳ್ಳಾರಿ - ಹೊಸಪೇಟೆ 3 ನೇ ಮತ್ತು 4 ನೇ ಮಾರ್ಗ
ರೈಲು ಮಾರ್ಗ ವಿಸ್ತರಣೆಯಿಂದ ಚಲನಶೀಲತೆ, ಸಾರಿಗೆ ಸಾಮರ್ಥ್ಯ ಹೆಚ್ಚಾಗುತ್ತದೆ. ಪರಿಣಾಮವಾಗಿ ಭಾರತೀಯ ರೈಲ್ವೆಗೆ ಸುಧಾರಿತ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಹೆಚ್ಚಲಿದೆ. ದಟ್ಟಣೆ ನಿವಾರಣೆ ಜೊತೆಗೆ ಹೆಚ್ಚುವರಿ ಟ್ರ್ಯಾಕ್‌ಗಳು ಸ್ಥಾಪನೆ ಆಗುವ ಕಾರಣ ರೈಲು ಕಾರ್ಯಾಚರಣೆಗಳು ಸುಗಮಗೊಳ್ಳಲಿವೆ. ಈ ಯೋಜನೆಗಳು ಪ್ರಧಾನಮಂತ್ರಿಗಳ ನವ ಭಾರತದ ದೃಷ್ಟಿಕೋನಕ್ಕೆ ಪೂರಕವಾಗಿವೆ.
4 ರಾಜ್ಯಗಳ 12 ಜಿಲ್ಲೆಗಳಿಗೆ ಬಹಳಷ್ಟು ಲಾಭ
ಕರ್ನಾಟಕ, ಹರಿಯಾಣ, ಮಹಾರಾಷ್ಟ್ರ ಮತ್ತು ದೆಹಲಿ ರಾಜ್ಯಗಳ ವ್ಯಾಪ್ತಿಯಲ್ಲಿ ಈ ಮೂರು ಪ್ರಮುಖ ರೈಲು ಯೋಜನೆಗಳೂ ಸಾಕಾರಗೊಳ್ಳಿವೆ. ಈ ನಾಲ್ಕು ರಾಜ್ಯಗಳ ಒಟ್ಟು 12 ಜಿಲ್ಲೆಗಳು ಅನೇಕ ಪ್ರದೇಶದಲ್ಲಿ ಯೋಜನೆಯಿಂದ ಸಮಗ್ರ ಅಭಿವೃದ್ಧಿ ಹೊಂದಲಿವೆ. ಸ್ಥಳೀಯವಗಿ ಉದ್ಯೋಗ/ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಾಗಲಿದೆ. ಈ ಭಾಗದಲ್ಲಿ ಒಟ್ಟು 389 ಕಿ.ಮೀ.ಗಳಷ್ಟು ರೈಲು ಜಾಲವು ವಿಸ್ತರಣೆ ಆಗುತ್ತದೆ.
ಇನ್ನೂ ಈ ಪ್ರಸ್ತಾವಿತ ಯೋಜನೆಗಳು ಮಲ್ಟಿ-ಟ್ರ್ಯಾಕಿಂಗ್ ಯೋಜನೆಯು ಸುಮಾರು 97 ಲಕ್ಷ ಜನಸಂಖ್ಯೆ ಹೊಂದಿರುವ ಸುಮಾರು 3,902 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಗ್ರಾಮೀಣ ಭಾಗದಲ್ಲಿ ರೈಲು ಸಾರಿಗೆ ಭವಿಷ್ಯದಲ್ಲಿ ಇನ್ನಷ್ಟು ಸುಧಾರಿಸಲಿದೆ ಎಂದು ಸಚಿವ ನಿತಿನ್ ಗಡ್ಕರಿ ವಿವರಿಸಿದರು.
ಜನರು, ಸರಕು ಸಾಗಾಣೆಗೆ ತಡೆ ಇಲ್ಲದ ಸಂಪರ್ಕ
ಸಮಗ್ರ ಯೋಜನೆ ಮತ್ತು ಪಾಲುದಾರರ ಸಮಾಲೋಚನೆಗಳ ಮೂಲಕ ಬಹು-ಮಾದರಿ ಸಂಪರ್ಕ ಮತ್ತು ಲಾಜಿಸ್ಟಿಕ್ ದಕ್ಷತೆಯನ್ನು ಹೆಚ್ಚಿಸುವತ್ತ ಕೇಂದ್ರ ಗಮನಹರಿಸಿದೆ. ಈ ಮೂಲಕ ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನಲ್ಲಿ ಯೋಜನೆಗಳನ್ನು ಯೋಜಿಸಿದೆ. ಈ ಯೋಜನೆಗಳು ಜನರು, ಸರಕುಗಳು ಮತ್ತು ಸೇವೆಗಳ ಚಲನೆಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತವೆ.
ಹೊಸ ಯೋಜನೆಗಳ ಸಂಪರ್ಕ ಎಲ್ಲಿಂದ ಎಲ್ಲಿಗೆ?
ಅನುಮೋದನೆ ಪಡೆದ ಈ ಮೂರು ರೈಲು ಮಾರ್ಗಗಳು ಭವ್ಲಿ ಅಣೆಕಟ್ಟು, ಶ್ರೀ ಘಟಾನ್ದೇವಿ, ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ, ಶ್ರೀ ಮಾತಾ ವೈಷ್ಣೋದೇವಿ, ಕತ್ರ/ಶ್ರೀನಗರ ಮತ್ತು ಹಂಪಿ (ಯುನೆಸ್ಕೋ ವಿಶ್ವ ಪರಂಪರೆಯ ತಾಣ), ಬಳ್ಳಾರಿ ಕೋಟೆ, ದರೋಜಿ ಕರಡಿ ಅಭಯಾರಣ್ಯ, ತುಂಗಭದ್ರಾ ಅಣೆಕಟ್ಟು, ಕೆಂಚನಗುಡ್ಡ ಮತ್ತು ವಿಜಯ ವಿಠಲ ದೇವಾಲಯ ಮುಂತಾದ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಒಳಗೊಂಡಂತೆ ದೇಶಾದ್ಯಂತ ಹಲವಾರು ಪ್ರಸಿದ್ಧಿ ಸ್ಥಳಗಳಿಗೆ ರೈಲು ಸಂಪರ್ಕ ಕಲ್ಪಿಸಿದಂತಾಗುತ್ತದೆ.
India’s first underwater twin TBM road-cum-rail tunnel—marking a major milestone in infrastructure development in the North East!
— Nitin Gadkari (@nitin_gadkari) February 14, 2026
Union Cabinet, chaired by Prime Minister Shri @narendramodi Ji, has approved the development of a 4-lane access-controlled greenfield National… pic.twitter.com/MQkIwHYFIz
ದಕ್ಷ ಸಾರಿಗೆ, ಅಧಿಕ ಲಾಭದ ನಿರೀಕ್ಷೆ
ಕಲ್ಲಿದ್ದಲು, ಉಕ್ಕು, ಕಬ್ಬಿಣದ ಅದಿರು, ಸಿಮೆಂಟ್, ಸುಣ್ಣದ ಕಲ್ಲು/ಬಾಕ್ಸೈಟ್, ಕಂಟೇನರ್, ಆಹಾರ ಧಾನ್ಯಗಳು, ಸಕ್ಕರೆ, ರಸಗೊಬ್ಬರಗಳು, ಪಿಒಎಲ್ ಮುಂತಾದ ಸರಕುಗಳ ಸಾಗಣೆ ಹೆಚ್ಚಾಗಲಿದೆ. ಇದರಿಂದ ಅಧಿಕ ಲಾಭವಾಗುತ್ತದೆ. ಸರಕು ಸಾಗಣೆ ಪ್ರಮಾಣ ಹೆಚ್ಚಾಗುತ್ತದೆ. ಸಾಮರ್ಥ್ಯ ವರ್ಧನೆ ಕಾರ್ಯ 96 ವಾರ್ಷಿಕ ಮಿಲಿಯನ್ ಟನ್ (MTPA) ಪ್ರಮಾಣದ ಹೆಚ್ಚುವರಿ ಸರಕು ಸಾಗಣೆ ಸಾಧ್ಯವಾಗುತ್ತದೆ.
ಸದ್ಯದ ರೈಲುಗಳು ಇಂಧನ ಚಾಲಿತ ಬದಲಾಗಿ ವಿದ್ಯುತ್ ಚಾಲಿತ ರೈಲುಗಳಾಗಿದ್ದು, ಇವು ಪರಿಸರಕ್ಕೆ ಪೂರಕವಾಗಿದೆ. ಸಾರಿಗೆ ರೈಲ್ವೆಗಳು ಪರಿಸರಸ್ನೇಹಿ ಆಗಿದೆ. ದೇಶದ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು, ತೈಲ ಆಮದು (22 ಕೋಟಿ ಲೀಟರ್) ಕಡಿಮೆ ಮಾಡಲು ಮತ್ತು CO2 ಹೊರ ಸೂಸುವಿಕೆ ಕಡಿಮೆ ಮಾಡಲು (111 ಕೋಟಿ ಕೆಜಿ) ಸಹಾಯ ಮಾಡುತ್ತದೆ. ಇದು ಸುಮಾರು 04 (ನಾಲ್ಕು) ಕೋಟಿ ಮರಗಳನ್ನು ನೆಟ್ಟರೆ ಸಿಗುವ ಲಾಭಕ್ಕೆ ಸಮಾನವಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
-
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು?












Click it and Unblock the Notifications