ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ಲಕ್ಷ ಕೋಟಿ ರೂ. ವೆಚ್ಚದ ಹೆದ್ದಾರಿ ಯೋಜನೆಗೆ ಕೇಂದ್ರ ಅನುಮೋದನೆ

By Sachhidananda Acharya
|
Google Oneindia Kannada News

ನವದೆಹಲಿ, ಅಕ್ಟೋಬರ್ 24: ಮಹತ್ವಾಕಾಂಕ್ಷೆಯ 'ಭಾರತ್‌ಮಾಲಾ' ಸೇರಿದಂತೆ 7 ಲಕ್ಷ ಕೋಟಿ ರೂಪಾಯಿ ವೆಚ್ಚ ಹೆದ್ದಾರಿ ನಿರ್ಮಾಣ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ.

ಮುಂದಿನ ಐದು ವರ್ಷಗಳಲ್ಲಿ ಸುಮಾರು 80,000 ಕಿ.ಮೀ. ಉದ್ದದ ಹೆದ್ದಾರಿಗಳನ್ನು ನಿರ್ಮಿಸುವ ಯೋಜನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ.

Cabinet approves mega highway project of Rs 7 lakh crore to develop 80,000 km roads

ಇತ್ತೀಚೆಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, "ಮೊದಲ ಹಂತದಲ್ಲಿ 20,000 ಕಿ.ಮೀ ಹೆದ್ದಾರಿಗಳನ್ನು ನಿರ್ಮಿಸುವ 'ಭಾರತ್‌ಮಾಲಾ' ಯೋಜನೆಗೆ ಕೇಂದ್ರ ಸರಕಾರ ಸದ್ಯದಲ್ಲೇ ಅನುಮೋದನೆ ನೀಡಲಿದೆ," ಎಂದು ಹೇಳಿದ್ದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎನ್ಎಚ್ ಡಿಆರ್) ನಂತರ ಜಾರಿಗೆ ಬರುತ್ತಿರುವ ಎರಡನೇ ಅತೀ ದೊಡ್ಡ ಯೋಜನೆ 'ಭಾರತ್‌ಮಾಲಾ' ಯೋಜನೆಯಾಗಿದೆ. ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಯೋಜನೆ ಇದಾಗಿದೆ.

ಮಂಗಳವಾರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವ ಯೋಜನೆಗಳಲ್ಲಿ ಎಕಾನಾಮಿಕ್ ಕಾರಿಡಾರ್ ಅಭಿವೃದ್ಧಿ ಯೋಜನೆಗಳೂ ಸೇರಿವೆ. ಈ ಹಿಂದೆ ಕೇಂದ್ರ ಸರ್ಕಾರ 21,000 ಕಿಲೋ ಮೀಟರ್‌ನ ಆರ್ಥಿಕ ಕಾರಿಡಾರ್‌ಗಳ ಅಭಿವೃದ್ಧಿಗೆ ಯೋಜನೆ ಹಾಕಿಕೊಂಡಿತ್ತು.

ಬೆಂಗಳೂರು-ಮಂಗಳೂರು, ಮುಂಬೈ-ಕೊಚ್ಚಿ-ಕನ್ಯಾಕುಮಾರಿ, ಹೈದರಾಬಾದ್-ಪಣಜಿ ಮತ್ತು ಸಾಂಬ್ಲಾಪುರ-ರಾಂಚಿ ಸೇರಿದಂತೆ ಇನ್ನೂ ಕೆಲವು ಆರ್ಥಿಕ ಕಾರಿಡಾರ್‌ಗಳು 'ಭಾರತ್‌ಮಾಲಾ' ಯೋಜನೆಯಲ್ಲಿ ಸೇರಿವೆ.

ಒಟ್ಟು 44 ಎಕಾನಾಮಿಕ್ ಕಾರಿಡಾರ್ ಗಳನ್ನು 'ಭಾರತ್‌ಮಾಲಾ' ಯೋಜನೆಗೆ ಗುರುತಿಸಲಾಗಿತ್ತು. ಇದರಲ್ಲಿ ಕೆಲವನ್ನು ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

English summary
The Union cabinet has approved a mega-highway project in order to develop and expand 83,000 km of the road at an investment of Rs 7 Lakh crore in the next five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X