ಬ್ರಿಟಿಷರ ಕಾಲದ ರೈಲು ನಿಲ್ದಾಣ ಪುನರ್ ನಿರ್ಮಾಣ: ಯುನೆಸ್ಕೋದಿಂದ ಏಷ್ಯಾ ಪೆಸಿಫಿಕ್ ಸಾಂಸ್ಕೃತಿಕ ಪರಂಪರೆ ಪ್ರಶಸ್ತಿ
ಮುಂಬೈ, ಜುಲೈ 25: 169 ವರ್ಷಗಳಷ್ಟು ಹಳೆಯದಾದ ಮಧ್ಯ ಮುಂಬೈನ ಬೈಕುಲ್ಲಾದಲ್ಲಿರುವ ಭಾರತದ ಅತ್ಯಂತ ಹಳೆಯ ರೈಲು ನಿಲ್ದಾಣವನ್ನು ಕಳೆದ 5 ವರ್ಷಗಳಲ್ಲಿ ಸಾಕಷ್ಟು ಕಠಿಣ ಪರಿಶ್ರಮದ ನಂತರ ಪುನಃಸ್ಥಾಪಿಸಲಾಗಿದೆ. ಇದು ಈಗ UNESCO ನಿಂದ ಏಷ್ಯಾ ಪೆಸಿಫಿಕ್ ಸಾಂಸ್ಕೃತಿಕ ಪರಂಪರೆಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಬೈಕುಲ್ಲಾ ರೈಲು ನಿಲ್ದಾಣವನ್ನು ಅದರ ಮೂಲ ಸಂರಚನೆಗೆ ತರಲುಪುನಶ್ಚೇತನ ಯೋಜನೆಯನ್ನು ಪ್ರಾರಂಭಿಸಿದ ಎಲ್ಲಾ ಮೂವರು ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಬೈಕುಲ್ಲಾ ರೈಲು ನಿಲ್ದಾಣದ ಮರುಸ್ಥಾಪನೆ ಯೋಜನೆಯು 2018 ರಲ್ಲಿ COVID-19 ಸಾಂಕ್ರಾಮಿಕ ರೋಗವು ಭಾರತಕ್ಕೆ ಆಗಮಿಸುವ ಮೊದಲು ಪ್ರಾರಂಭವಾಯಿತು. ಈ ಕಾಮಗಾರಿಯನ್ನು ಸುಮಾರು 650 ಕಾರ್ಮಿಕರು ಪೂರ್ಣಗೊಳಿಸಿದರು.
ಈ ಯೋಜನೆಯನ್ನು ಪ್ರಾರಂಭಿಸಿದ ಮೂವರು ಮಹಿಳೆಯರಲ್ಲಿ ಒಬ್ಬರಾದ ಬಿಜೆಪಿ ಸಂಸದೆ ಶೈನಾ ಎನ್‌ಸಿ ಮಾತನಾಡಿ, ಬೈಕುಲ್ಲಾ ನಿಲ್ದಾಣದ 169 ವರ್ಷಗಳ ಹಳೆಯ ಶಿಲ್ಪಕಲೆ ಮತ್ತು ನೋಟವನ್ನು ಪುನಃಸ್ಥಾಪಿಸುವುದು ಕಷ್ಟಕರವಾಗಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ನಾವು ಮಾಡಿದ ಕಠಿಣ ಪರಿಶ್ರಮದಿಂದ ಐತಿಹಾಸಿಕ ಸ್ಮಾರಕವನ್ನು ಪುನಃಸ್ಥಾಪಿಸಲು ನಾವು ಯಶಸ್ವಿಯಾಗಿದ್ದೇವೆ. ನಾವು ಬೈಕುಲ್ಲಾ ರೈಲು ನಿಲ್ದಾಣದಲ್ಲಿ ಗತವೈಭವದ ನೋಟವನ್ನು ಪುನಃಸ್ಥಾಪಿಸಿದ್ದೇವೆ ಎಂದು ಅವರು ಹೇಳಿದರು.
ದೇಶದ ಎಲ್ಲ ಜನರೊಂದಿಗೆ ನಾವು ಒಗ್ಗೂಡಿ ನಶಿಸಿ ಹೋಗುತ್ತಿರುವ ಐತಿಹಾಸಿಕ ಸ್ಮಾರಕಗಳನ್ನು ಸ್ವಚ್ಛಗೊಳಿಸಬೇಕು ಅಥವಾ ಪುನಃಸ್ಥಾಪಿಸಬೇಕು ಎಂದು ನಾವು ಮನವಿ ಮಾಡುತ್ತೇವೆ. ಬೈಕುಲ್ಲಾ ಇಂದು ಭಾರತದಲ್ಲಿರುವ ಅತ್ಯಂತ ಹಳೆಯ ರೈಲು ನಿಲ್ದಾಣವಾಗಿದೆ. ಐತಿಹಾಸಿಕ ಸ್ಮಾರಕವನ್ನು ಪುನಃಸ್ಥಾಪಿಸುವುದು ಬಹಳ ಮುಖ್ಯ. ಬೈಕುಲ್ಲಾ ರೈಲು ನಿಲ್ದಾಣವು ಸ್ಥಳೀಯ ಮುಂಬೈಕರ್ ಜನರ ಜೀವನಾಡಿಯಾಗಿದೆ ಎಂದು ಹೇಳಿದ್ದಾರೆ.
ಸೋಮವಾರ ಶೈನಾ ಎನ್‌ಸಿ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಭಾರತದ ಅತ್ಯಂತ ಹಳೆಯ ನಿಲ್ದಾಣಗಳಲ್ಲಿ ಒಂದಾದ ಮುಂಬೈನ ಬೈಕುಲ್ಲಾ ರೈಲು ನಿಲ್ದಾಣಕ್ಕೆ ಯುಎನ್‌ಎಸ್‌ಸಿಒ ಗೌರವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ನಮ್ಮ ನಗರ ಮುಂಬೈಗೆ ಗೌರವಾರ್ಥವಾಗಿ ನಮ್ಮ ಎನ್‌ಜಿಒ ಮೂಲಕ ಈ ಯೋಜನೆಯನ್ನು ರೈಲ್ವೆ ಮತ್ತು ಪ್ರಯಾಣಿಕರಿಗೆ ಸಂಪೂರ್ಣವಾಗಿ ಲೋಕಾರ್ಪಣೆ ಮಾಡಲಾಗಿದೆ. ಪರಂಪರೆ ಸಂರಕ್ಷಣಾ ವಾಸ್ತುಶಿಲ್ಪಿ ಅಭಾ ಲಂಬಾ ಮತ್ತು ಬಜಾಜ್ ಟ್ರಸ್ಟ್‌ನ ಮಿನಲ್ ಬಜಾಜ್ ಸಮುದಾಯಕ್ಕೆ ಹಿಂತಿರುಗಿಸಲು ನಮ್ಮೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications