By-Election Clash: ಪಂಜಾಬ್‌ನಲ್ಲಿ ಎಎಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ- ಯುಪಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ!

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತ್ತು ಜಾರ್ಖಂಡ್‌ನ ಎರಡನೇ ಹಂತದ ಚುನಾವಣೆ ಜತೆಗೆ 4 ರಾಜ್ಯಗಳ 15 ವಿಧಾನಸಭಾ ಸ್ಥಾನಗಳಿಗೂ ಇಂದು ಉಪಚುನಾವಣೆ ನಡೆಯುತ್ತಿದೆ. ಈ 15 ಸ್ಥಾನಗಳ ಪೈಕಿ ಪಂಜಾಬ್‌ನ 4 ಸ್ಥಾನಗಳು ಮತ್ತು ಉತ್ತರ ಪ್ರದೇಶದ 9 ಸ್ಥಾನಗಳೂ ಸೇರಿವೆ. ಎಲ್ಲ ಕ್ಷೇತ್ರಗಳಿಗೂ ಬುಧವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಆದರೆ ಮತದಾನದ ವೇಳೆ ಅಲ್ಲಲ್ಲಿ ಘರ್ಷಣೆಗಳಾಗಿರುವುದು ಕಂಡು ಬಂದಿದೆ.

ಈ ಕ್ಷೇತ್ರಗಳಲ್ಲಿ ಒಂದಾದ ಪಂಜಾಬ್‌ನ ಡೇರಾ ಬಾಬಾ ನಾನಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ( ಎಎಪಿ) ಕಾರ್ಯಕರ್ತರ ನಡುವೆ ಮುಂಜಾನೆ ಘರ್ಷಣೆ ಸಂಭವಿಸಿದ್ದು, ವಾತಾವರಣದಲ್ಲಿ ಉದ್ವಿಗ್ನತೆ ಉಂಟಾಗಿದೆ. ಡೇರಾ ಪಠಾಣ್ ಗ್ರಾಮದಲ್ಲಿ ಈ ಘರ್ಷಣೆ ನಡೆದಿದ್ದು, ಪರಿಸ್ಥಿತಿ ನಿಭಾಯಿಸಲು ಪೊಲೀಸರು 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದಾರೆ.

By-Elections Clash Clash between AAP-Congress workers in Punjab - Stones pelted at police in UP

ಈ ಮಧ್ಯೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮೀರಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟದ ವರದಿಯಾಗಿದೆ. ತಮ್ಮನ್ನು ಮತಗಟ್ಟೆಯಿಂದ ಬಲವಂತವಾಗಿ ಹೊರಹಾಕುತ್ತಿದ್ದಾರೆ ಮತ್ತು ಮತ ಚಲಾಯಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ. ನಂತರ ಪೊಲೀಸರು ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಂಜಾಬ್‌ನಲ್ಲಿ ಎರಡೂ ಕಡೆಯವರು ಪರಸ್ಪರ ಆರೋಪ

ಸ್ಥಳದಲ್ಲಿದ್ದ ಕಾಂಗ್ರೆಸ್ ಸಂಸದ ಸುಖ್ಜೀಂದರ್ ಸಿಂಗ್ ರಾಂಧವಾ ಮತ್ತು ಆಪ್ ಅಭ್ಯರ್ಥಿ ಗುರುದೀಪ್ ಸಿಂಗ್ ರಾಂಧವಾ ಇಬ್ಬರೂ ಕೂಡ ಪರಸ್ಪರ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕಾರಣಕ್ಕೆ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಬಳಿಕ ಅಭ್ಯರ್ಥಿಗಳು ಮಧ್ಯಪ್ರವೇಶಿಸಿ ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸಿ ಶಾಂತಿಯುತ ಮತದಾನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಎಎಪಿ ಕಾರ್ಯಕರ್ತರು ಕಾಂಗ್ರೆಸ್ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಖಜಿಂದರ್ ಸಿಂಗ್ ರಾಂಧವಾ ದೂರಿದ್ದಾರೆ. ನಮ್ಮ ಕಾರ್ಯಕರ್ತರನ್ನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಥಳಿಸಿದಾಗ ನಾನು ಇಲ್ಲಿಗೆ ತಲುಪಿದೆ ಎಂದು ಅವರು ಹೇಳಿದ್ದಾರೆ. ಈ ಘಟನೆಯ ಬಳಿಕ ಎಎಪಿಗೆ ಸಂಬಂಧಿಸಿದ ಹೊರಗಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅವರು ಆರೋಪಿಸಿದರು.

'ಡೇರಾ ಬಾಬಾ ನಾನಕ್‌ನಲ್ಲಿ ನಡೆದ ಗಲಾಟೆಗೆ ಕಾಂಗ್ರೆಸ್‌ ಕಾರಣ' ಎಂದು ಪೊಲೀಸರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಆದರೆ ಪೊಲೀಸರು ಎಎಪಿ ನಾಯಕರ ಮೇಲೆ ಆರೋಪಿಸಲು ಹಿಂಜರಿಯುತ್ತಿದ್ದಾರೆ ಎಂದು ರಾಂಧವಾ ಅವರು ಹೇಳಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಹೊರಗಿನವರು ಪ್ರಭಾವ ಬೀರುವ ಬಗ್ಗೆ ರಾಂಧವಾ ಕಳವಳ ವ್ಯಕ್ತಪಡಿಸಿದರು.

ಶಾಂತಿಯುತ ಮತದಾನಕ್ಕೆ ಕರೆ

ಮಾತಿನ ಚಕಮಕಿಯ ನಡುವೆಯೂ ಇಬ್ಬರೂ ಅಭ್ಯರ್ಥಿಗಳು ಶಾಂತಿಯುತ ಮತದಾನದ ಮಹತ್ವವನ್ನು ಒತ್ತಿ ಹೇಳಿದರು. ಇದೇ ವೇಳೆ ಗುರುದೀಪ್ ಸಿಂಗ್ ರಾಂಧವಾ ಅವರು ಎಎಪಿ ಗೆಲುವಿನ ಸಾಧ್ಯತೆಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತದಾರರು ಯಾವುದೇ ಭಯ ಅಥವಾ ಹಸ್ತಕ್ಷೇಪವಿಲ್ಲದೆ ಮತ ಚಲಾಯಿಸುವಂತೆ ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+