ಕೇರಳ, ಕರಾವಳಿಗೆ ಬಸ್‌ ಸಂಚಾರ ಆರಂಭ: ರೈಲು ಇನ್ನೂ ತಡ

ಬೆಂಗಳೂರು, ಆಗಸ್ಟ್ 18: ಭಾರಿ ಮಳೆಯಿಂದಾಗಿ ಕೇರಳ ಮತ್ತು ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಕುಂಠಿತಗೊಂಡಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕ್ರ‌ಮೇಣ ಆರಂಭಗೊಂಡಿದೆ. ಬೆಂಗಳೂರಿನಿಂದ ಕೇರಳ, ಕ್ಯಾಲಿಕಟ್‌, ಕೋಯಿಕ್ಕೊಡ್‌ಗೆ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಇದೀಗ ಶನಿವಾರದಿಂದ ಕೊಯಿಕ್ಕೋಡ್‌, ಕ್ಯಾಲಿಕಟ್‌ ನಿಂದ ಬೆಂಗಳೂರಿಗೆ ಒಟ್ಟು ನಾಲ್ಕು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭಗೊಂಡಿದೆ.ಪಾಲ್‌ಘಾಟ್‌, ತ್ರಿಶೂರ್‌, ಎರ್ನಾಕ್ಯುಲಮ್‌ ಮಾರ್ಗದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿರುವ ಕಾರಣ ಆ ಮಾರ್ಗದಲ್ಲಿ ಇನ್ನೂ ಬಸ್‌ಗಳ ಸಂಚಾರ ಆರಂಭವಾಗಿಲ್ಲ. ದಿನನಿತ್ಯ ಆ ಮಾರ್ಗದಲ್ಲಿ ರಾಜ್ಯದಿಂದ 13 ಬಸ್‌ಗಳು ಸಂಚರಿಸುತ್ತಿದ್ದವು.

ಶನಿವಾರ ಬೆಳಗ್ಗೆ 6ಗಂಟೆಗೆ 45 ಮಂದಿ ಪ್ರಯಾಣಿಕರನ್ನೊಳಗೊಂಡ ಮಲ್ಟಿ ಎಕ್ಸೆಲ್‌ ವೋಲ್ವೊ ಐರಾವತ ಕ್ಲಬ್‌ ಕ್ಲಾಸ್‌ ಬಸ್‌ ಬೆಂಗಳೂರಿನಿಂದ ಹೊರಟಿದೆ. ಏಳು ಗಂಟೆಗೆ 37 ಮಂದಿ ಪ್ರಯಾಣಿಕನ್ನು ಒಳಗೊಂಡ ಬಸ್‌ ಹಾಗೂ ಎಂಟು ಗಂಟೆಗೆ 42 ಮಂದಿ ಪ್ರಯಾಣಿಕರನ್ನು ಒಳಗೊಂಡ ಬಸ್‌ ಕೇರಳಕ್ಕೆ ತೆರಳಿದೆ. ಈ ಬಸ್‌ಗಳು ಆಗಸ್ಟ್ 15ರಿಂದ ಸಂಚಾರ ಸ್ಥಗಿತಗೊಳಿದ್ದವು.

Bus connectivity resumes to Kerala and Coastal districts

ಶನಿವಾರ ಬೆಂಗಳೂರು ಕನ್ಯಾಕುಮಾರಿ, ಯಶವಂತಪುರ-ಕಣ್ಣೂರು, ಬೆಂಗಳೂರು-ಕಣ್ಣೂರು ರೈಲುಗಳು ಕಾರ್ಯಾಚರಣೆಗೊಳಿಸಲು ನಿರ್ಧರಿಸಿತ್ತು ಆದರೆ ರದ್ದುಗೊಳಿಸಲಾಯಿತು. ಕೊಯಮತ್ತೂರ್‌-ಬೆಂಗಳೂರು ಎರ್ನಾಕ್ಯುಲಮ್‌-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಕಾರ್ಯಚರಣೆಯನ್ನೂ ಸ್ಥಗಿತಗೊಳಿಸಲಾಗಿದೆ.

ಅಷ್ಟೇ ಅಲ್ಲದೆ ಯಶವಂತಪುರ-ಕಾರವಾರ, ಹಾಸನ-ಕಾರವಾರ ರೈಲನ್ನು ಕೂಡ ಆಗಸ್ಟ್ 21ರವರೆಗೆ ಸ್ಥಗಿತಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+