ಅಧಿಕಾರಿಗಳೇ ರಾಜಕಾರಣಿ ಹೇಳಿದ್ದನ್ನು ಕೇಳಬೇಡಿ: ಸುಪ್ರೀಂ

'ರಾಜಕೀಯ ಕೈವಾಡದಿಂದ ಅಧಿಕಾರಶಾಹಿ ಕಾರ್ಯತತ್ಪರತೆ ಕ್ಷೀಣಿಸುತ್ತಿದೆ' ಎಂದಿರುವ ಸುಪ್ರೀಂಕೋರ್ಟ್ 'ನಿಶ್ಚಿತ ಅವಧಿವರೆಗೆ ಒಂದು ಕಡೆ ಅಧಿಕಾರಿಗಳಿಗೆ ಸೇವಾಭಾಗ್ಯ ಕಲ್ಪಿಸಿದರೆ ಅದರಿಂದ ವೃತ್ತಿಪರತೆ, ದಕ್ಷತೆ ಮತ್ತು ಉತ್ತಮ ಆಡಳಿತವನ್ನು ಪೋಷಿಸಿದಂತಾಗುತ್ತದೆ' ಎಂದು ಅಭಿಪ್ರಾಯಪಟ್ಟಿದೆ.
ಅಷ್ಟೇ ಅಲ್ಲ. ಇನ್ನು 3 ತಿಂಗಳಲ್ಲಿ ಐಎಎಸ್/ ಐಪಿಎಸ್ ಅಧಿಕಾರಿಗಳಿಗೆ ಒಂದು ನಿರ್ದಿಷ್ಟ ಸೇವಾವಧಿ ನಿಗದಿಪಡಿಸಿ, ತನಗೆ ಮಾಹಿತಿ ನೀಡುವಂತೆಯೂ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಇದರಿಂದ ಅಧಿಕಾರಿಗಳ ಮೇಲಿದ್ದ ಬಹುದೊಡ್ಡ ಹೊರೆಯನ್ನು ಇಳಿಸಿದಂತಾಗಿದ್ದು, ಅಧಿಕಾರಶಾಹಿ ನಿಟ್ಟುಸಿರುಬಿಡುವಂತಾಗಿದೆ. ನಿವೃತ್ತ ಸಂಪುಟ ಕಾರ್ಯದರ್ಶಿ ಟಿಎಸ್ಸಾರ್ ಸುಬ್ರಮಣಿಯನ್ ಅವರು ಸಲ್ಲಿಸಿದ್ದ PIL ವಿಚಾರಣೆ ಸಂದರ್ಭದಲ್ಲಿ ಜಸ್ಟೀಸ್ ಕೆಎಸ್ ರಾಧಾಕೃಷ್ಣನ್ ನೇತೃತ್ವದ ಸುಪ್ರೀಂ ನ್ಯಾಯಪೀಠ ಈ ಆದೇಶ ನೀಡಿದೆ.
ಒಂದು ವೇಳೆ ಆಡಳಿತಾರೂಢ ರಾಜಕಾರಣಿಗಳೇನಾದರೂ ಮೌಕಿಕ ಆದೇಶ ನೀಡಿದರೆ ಅಧಿಕಾರಿಗಳು ತಕ್ಷಣ ಅದನ್ನು ಸಂಬಂಧಪಟ್ಟ ಫೈಲುಗಳಲ್ಲಿ ದಾಖಲಿಸಿಡಬೇಕು. ಮುಂದೊಂದು ದಿನ ವ್ಯತಿರಿಕ್ತ ಪರಿಸ್ಥಿತಿ ಎದುರಾದರೆ ಫೈಲಿನಲ್ಲಿ ದಾಖಲಾಗಿರುವ ಮೌಕಿಕ ಆದೇಶವನ್ನು ಮುಖದ ಮುಂದೆ ಎತ್ತಿ ಹಿಡಿಯಬೇಕು. ಇದರಿಂದ ಪಾರದರ್ಶಕತೆಯನ್ನು ಕಾಪಾಡಿದಂತಾಗುತ್ತದೆ. ಜತೆಗೆ, ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ಒದಗಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.












Click it and Unblock the Notifications