Bullet Train: ದೇಶದ ಮೊದಲ ಬುಲೆಟ್ ಟ್ರೈನ್ ನಿರ್ಮಾಣದಲ್ಲಿ ಮಹತ್ವದ ಬೆಳವಣಿಗೆ: ಅಶ್ವಿನಿ ವೈಷ್ಣವ್ ಅಪ್ಡೇಟ್ಸ್
ನವದೆಹಲಿ: ಕೇಂದ್ರ ರೈಲ್ವೆ ಇಲಾಖೆಯು ಬುಲೆಟ್ ಟ್ರೈನ್‌ಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ ಕೊಟ್ಟಿದೆ. ಗುರುವಾರವಷ್ಟೇ ದೇಶದ ಬಹು ನಿರೀಕ್ಷಿತ ರೈಲುಗಳಲ್ಲಿ ಒಂದಾಗಿರುವ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲಿನ ಬಗ್ಗೆ ಮಹತ್ವದ ಅಪ್ಡೇಟ್ಸ್ ಕೊಡಲಾಗಿತ್ತು. ಇದೀಗ ದೇಶದ ಪ್ರಮುಖ ಬುಲೆಟ್ ಟ್ರೈನ್‌ನ ಬಗ್ಗೆ ಅಪ್ಡೇಟ್ಸ್ ಕೊಡಲಾಗಿದೆ.
ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್‌ನ ಅಹಮದಾಬಾದ್ ಬುಲೆಟ್ ರೈಲಿನ ಇತ್ತೀಚಿನ ಅಪ್ಡೇಟ್ಸ್‌ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಶುಕ್ರವಾರ ಜನವರಿ 2ರಂದು ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಹೈ - ಸ್ಪೀಡ್ ರೈಲಿನ ಸುರಂಗ ಮಾರ್ಗ ಪ್ರಗತಿಯೊಂದಿಗೆ ಭಾರತದ ಮೊದಲ ಬುಲೆಟ್ ಟ್ರೈನ್ ಕಾರಿಡಾರ್ ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಮುಂಬೈ - ಅಹಮದಾಬಾದ್ ಬುಲೆಟ್ ಟ್ರೈನ್ ಕಾರಿಡಾರ್‌ನಲ್ಲಿ ಇದು ಮೊದಲ ಪರ್ವತ ಸುರಂಗ ಪ್ರಗತಿಯಾಗಿದೆ. 1.5 ಕಿಮೀ ಉದ್ದದ ಈ ಪರ್ವತ ಸುರಂಗವು ಪಾಲ್ಘರ್ ಜಿಲ್ಲೆಯ ಅತಿ ಉದ್ದವಾಗಿದ್ದು, ಇದು ವಿರಾರ್ ಮತ್ತು ಬೋಯಿಸರ್ ಬುಲೆಟ್ ರೈಲು ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ ಎಂದು ಹೇಳಲಾಗಿದೆ. ಈ ಮೂಲಕ ಬುಲೆಟ್ ಟ್ರೈನ್ ವಿಚಾರದಲ್ಲಿ ಪ್ರಮುಖ ಪ್ರಗತಿ ಸಾಧಿಸಲಾಗಿದೆ.

ಕಳೆದ ವರ್ಷ ರೈಲ್ವೆ ಸಚಿವಾಲಯವು ಥಾಣೆ ಮತ್ತು ಬಿಕೆಸಿ ನಡುವೆ 5 ಕಿಮೀ ಉದ್ದದ ಭೂಗತ ಸುರಂಗವನ್ನು ಪೂರ್ಣಗೊಳಿಸಿತು. ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ಲಿ. ಪ್ರಸ್ತುತ ಮುಂಬೈ ಮತ್ತು ಅಹಮದಾಬಾದ್ ನಡುವೆ ದೇಶದ ಮೊದಲ ಬುಲೆಟ್ ರೈಲು ಕಾರಿಡಾರ್ ಕಾರ್ಯಗತಗೊಳಿಸುತ್ತಿದೆ. ಇದು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಮುಂಬೈ ಬುಲೆಟ್ ರೈಲು ಭೂಗತ ನಿಲ್ದಾಣ ಮತ್ತು ಮಹಾರಾಷ್ಟ್ರದ ಶಿಲ್ಫಾಟಾ ನಡುವೆ ಭಾರತದ ಮೊದಲ 21 ಕಿ.ಮೀ ಉದ್ದದ ನೀರೊಳಗಿನ ಸುರಂಗ ಮಾರ್ಗವಾಗಿದೆ. ಇನ್ನು ಮುಂಬೈ - ಅಹಮದಾಬಾದ್ ಬುಲೆಟ್ ರೈಲು ಯೋಜನೆಯು ಮಧ್ಯಮ ವರ್ಗದವರಿಗೆ ಅನುಕೂಲಕರ ಪ್ರಯಾಣ ದರವನ್ನು ಒಳಗೊಂಡಿರಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತದ ಮೊದಲ ಬುಲೆಟ್ ರೈಲು ಆಗಸ್ಟ್ 15, 2027 ರೊಳಗೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ. ರೈಲ್ ಭವನದಲ್ಲಿ ಮಾತನಾಡಿದ ಅವರು, ಸೂರತ್-ಬಿಲಿಮೋರಾ ಮಾರ್ಗದಲ್ಲಿ ಮೊದಲ ಹೈಸ್ಪೀಡ್ ರೈಲು ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.
ಬುಲೆಟ್ ಟ್ರೈನ್ ಸುರಂಗ ಮಾರ್ಗದ ಮಹತ್ವದ ಬೆಳವಣಿಗೆ
ಇನ್ನು ಬುಲೆಟ್ ಟ್ರೈನ್ ಕಾಮಗಾರಿ ನಿರ್ಮಾಣ ವಿಚಾರದಲ್ಲಿ ಸುರಂಗ ಮಾರ್ಗ ಮುಕ್ತಾಯಗೊಂಡಿರುವುದು ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯಿಸಿದ ನಂತರ ಜನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚರಿಸುವುದು ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಪ್ರಮುಖ ನಗರಗಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಪರಿಚಯಿಸಲಾಗಿದೆ. ಮುಂದುವರಿದು ಬೆಂಗಳೂರು ಹಾಗೂ ಮಂಗಳೂರಿನ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯಿಸುವ ಬಗ್ಗೆ ಹೆಚ್ಚು ಚರ್ಚೆ ನಡೆದಿದ್ದು, ಕೇಂದ್ರ ಸಚಿವ ವಿ. ಸೋಮಣ್ಣ ಅವರು ಸಹ ಅಪ್ಡೇಟ್ಸ್ ಕೊಟ್ಟಿದ್ದಾರೆ.
ಮುಂಬೈ - ಅಹಮದಾಬಾದ್ ಬುಲೆಟ್ ರೈಲು ನಿಲ್ದಾಣಗಳು
ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ರೈಲು ಸಂಚಾರ ಹಲವು ವರ್ಷಗಳ ಕನಸಾಗಿದೆ. 508 ಕಿ.ಮೀ ಉದ್ದದ ಮುಂಬೈ - ಅಹಮದಾಬಾದ್ ಹೈ ಸ್ಪೀಡ್ ರೈಲು ಯೋಜನೆಯು ಒಟ್ಟು 12 ನಿಲ್ದಾಣಗಳನ್ನು ಒಳಗೊಂಡಿದೆ. ಮಹಾರಾಷ್ಟ್ರದ ಮುಂಬೈ, ಥಾಣೆ, ವಿರಾರ್, ಬೋಯಿಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್ ಮತ್ತು ಸಬರಮತಿ ನಿಲ್ದಾಣಗಳು ಇದರಲ್ಲಿ ಸೇರಿವೆ.












Click it and Unblock the Notifications