Bullet Train: ಬೆಂಗಳೂರು-ಚೆನ್ನೈ ಪ್ರಯಾಣ ಇನ್ನು ಒಂದೇ ಗಂಟೆ..

ಭಾರತದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಅಲ್ಲದೆ ವಿಶ್ವ ಮಟ್ಟದಲ್ಲಿ ತನ್ನನು ತಾನು ಗುರುತಿಸಿಕೊಳ್ಳಲು ಭಾರತ ಸಹ ಹಲವು ಕಸರತ್ತು ಮಾಡುತ್ತಿದೆ. ಹಲವು ಗಂಟೆಗಳ ದೂರವನ್ನು ಕೇವಲ ಗಂಟೆಗಳಿಗೆ ಇಳಿಸಲಾಗಿದ್ದು, ಈಗ ಜಗತ್ತಿನ ಚಿತ್ತ ಕದ್ದಿದೆ. ಬೇರೆ ದೇಶಗಳಲ್ಲಿ ಓಡುವಂತಹ ಬುಲೆಟ್‌ ಟ್ರೇನ್‌ಗಳು ಭಾರತದ ಹಳಿಗಳ ಮೇಲೂ ಓಡಾಡುತ್ತಿವೆ.

ಈಗಾಗಲೇ ವಾಣಿಜ್ಯ ನಗರಿ ಮುಂಬೈನಿಂದ ಅಹಮದಾಬಾದ್‌ ನಡುವೆ ಹೈಸ್ಪೀಡ್‌ ಬುಲೆಟ್‌ ಟ್ರೈನ್‌ ಓಡಟ ನಡೆಸಿದೆ. ಈ ಟ್ರೈನ್ ಓಡಾಡುತ್ತಿದ್ದಂತೆ ಮಹಾನಗರಳು ಸಹ ಹತ್ತಿರವಾದಂತೆ ಆಗಿವೆ. ಈ ಯಶಸ್ಸು ಸಿಕ್ಕ ಬೆನ್ನಲ್ಲೆ ಈಗ ರೈಲ್ವೆ ಇಲಾಖೆ ಹಲವು ದೊಡ್ಡ ನಗರಗಳಿಂದ, ದೊಡ್ಡ ನಗರಕ್ಕೆ ಸಂಕಲ್ಪ ಕಲ್ಪಿಸುವ ಯೋಜನೆಗೆ ರೆಕ್ಕೆ ಬಂದಿದೆ.

Bullet Train Bengaluru-Chennai Journey Now Just One Hour Away

ಈಗ ಮೈಸೂರು ಹಾಗೂ ಚೆನ್ನೈ ಮಧ್ಯೆ ಬುಲೆಟ್‌ ಟ್ರೈನ್‌ ಸಂಚಾರ ಆರಂಭಿಸುವ ಬಗ್ಗೆ ರೈಲ್ವೆ ಇಲಾಖೆಗೆ ಈಗಾಗಲೇ ಪ್ರಸ್ತಾಪನೆ ಸಲ್ಲಿಸಲಾಗಿದೆ. ಒಂದು ವೇಳೆ ಈ ಕನಸು ನನಸಾದರೆ, ಉಭಯ ನಗರಗಳ ಪ್ರಯಾಣದ ಅವಧಿ ಒಂದು ಗಂಟೆಗೆ ಇಳಿಕೆ ಆಗಲಿದೆ. ಈ ಪ್ಲ್ಯಾನ್‌ ಸಕ್ಸಸ್‌ ಆದರೆ, ಈ ಟ್ರೈನ್‌ ಮೂರು ರಾಜ್ಯಗಳನ್ನು ಹಾದು ಹೋಗಲಿದೆ.

ಈ ಯೋಜನೆಯ ಮೊದಲ ಹಂತದ ಕಾರ್ಯದಲ್ಲಿ ಬೆಂಗಳೂರಿನ ವರೆಗೆ ಕೆಲಸ ಪೂರ್ಣಗೊಳಿಸುವ ಬ್ಲ್ಯೂ ಪ್ರಿಂಟ್ ಹೊಂದಲಾಗಿದೆ. ಈ ದೂರ 306 ಕಿಲೋ ಮೀಟರ್‌ ದೂರ ಹೊಂದಿದೆ. ಇನ್ನು ಎರಡನೇ ಹಂತದಲ್ಲಿ ಬೆಂಗಳೂರು ಮೈಸೂರು ನಡುವಿನ 157 ಕಿಲೋಮೀಟರ್‌ ಕಾರ್ಯವನ್ನು ಒಳಗೊಂಡಿದೆ.

ಎಲ್ಲಿ ಎಲ್ಲಿ ನಿಲುಗಡೆ?

ಬುಲೆಟ್‌ ಟ್ರೈನ್‌ ಗಂಟೆಗೆ 350 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದೆ. ಬೆಂಗಳೂರು ಹಾಗೂ ಚೆನ್ನೈ ನಡುವಣ ಟ್ರೈನ್‌ಗೆ ಗ್ರೀನ್‌ ಸಿಕ್ಕಿದೆ ಆದಲ್ಲಿ ಈ ರೈಲು ಗಂಟೆಗೆ 250 ಕಿಲೋ ಮೀಟರ್‌ ದೂರ ಕ್ರಮಿಸಲಿದೆ. ಈ ಬುಲೆಟ್‌ ಟ್ರೈನ್‌ ಬೆಂಗಳೂರಿನಲ್ಲಿ ಮೂರು ಸೇರಿದಂತೆ 11 ನಿಲ್ದಾಣಗಳಲ್ಲಿ ನಿಲ್ಲುತ್ತದೆ.

ಈ ಟ್ರೈನ್‌ ಚೆನ್ನೈ, ಪೂನಮ್‌, ಚಿತ್ತೂರು, ಕೋಲಾರ, ಕೋಡಹಳ್ಳಿ, ವೈಟ್‌ಫೀಲ್ಡ್, ಬೈಯಪ್ಪನಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೆಂಗೇರಿ, ಮಂಡ್ಯ ಮತ್ತು ಮೈಸೂರುಗಳಲ್ಲಿ ಟ್ರೈನ್‌ ನಿಲ್ಲುವ ಸಾಧ್ಯತೆ ಇದೆ ಎಂದು ಟೈಮ್ಸ್ ಆಫ್‌ ಇಂಡಿಯಾ ವರದಿಲ್ಲಿ ತಿಳಿಸಿದೆ.

ಈ ಯೋಜನೆಯಲ್ಲಿ ಒಟ್ಟು 30 ಕಿಲೋ ಮೀಟರ್‌ ಸುರಂಗ ಮಾರ್ಗವನ್ನು ಕೊರೆಯಲಾಗುವ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+