ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 31ರಿಂದ ಬಜೆಟ್ ಅಧಿವೇಶನ; ಫೆ. 1ರಂದು ಬಜೆಟ್ ಮಂಡನೆ

|
Google Oneindia Kannada News

ನವದೆಹಲಿ, ಜನವರಿ 14; ಸಂಸತ್‌ನ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಮಂಗಳವಾರ ಬಜೆಟ್ ಮಂಡನೆ ಮಾಡಲಿದ್ದಾರೆ.

ಸಂಸತ್ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗಲಿದೆ. ಮೊದಲ ದಿನ ರಾಷ್ಟ್ರಪತಿ ರಾಮನಾಥ್ ಕೋವಿಡ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಜನವರಿ 1 ರಿಂದ ಏಪ್ರಿಲ್‌ 8 ರ ತನಕ ಸಂಸತ್ ಬಜೆಟ್ ಅಧಿವೇಶನ ನಡೆಯಲಿದೆ.

ಬಜೆಟ್ 2022; ಉದ್ಯೋಗ ಸೃಷ್ಟಿ ಜೊತೆಗೆ ಕೌಶಲ್ಯ ತರಬೇತಿಗೆ ಆದ್ಯತೆ ಬಜೆಟ್ 2022; ಉದ್ಯೋಗ ಸೃಷ್ಟಿ ಜೊತೆಗೆ ಕೌಶಲ್ಯ ತರಬೇತಿಗೆ ಆದ್ಯತೆ

Budget Session From January 31 And Union Budget On February 1

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಫೆಬ್ರವರಿ 11ರ ತನಕ ಮೊದಲ ಹಂತದ ಬಜೆಟ್ ಅಧಿವೇಶನ ನಡೆಯಲಿದೆ.

ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ, ಬಜೆಟ್ 2022 ನಂತರ ನಿರ್ಧರಿಸಿ ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ, ಬಜೆಟ್ 2022 ನಂತರ ನಿರ್ಧರಿಸಿ

ಒಂದು ತಿಂಗಳ ಬಳಿಕ ಬಜೆಟ್ ಅಧಿವೇಶನದ ಎರಡನೇ ಹಂತದ ಕಲಾಪ ಆರಂಭವಾಗಲಿದೆ. ಮಾರ್ಚ್ 14 ರಿಂದ ಏಪ್ರಿಲ್ 8ರ ತನಕ ಸಂಸತ್ ಬಜೆಟ್ ಅಧಿವೇಶನದ ಎರಡನೇ ಹಂತ ನಡೆಯಲಿದೆ.

 ಬಜೆಟ್ 2022: ಟಿಡಿಎಸ್ ಕಡಿತ ಮಿತಿ, ಐಟಿ ಸ್ಲ್ಯಾಬ್‌ ವ್ಯತ್ಯಯ ಸಾಧ್ಯವೇ? ಬಜೆಟ್ 2022: ಟಿಡಿಎಸ್ ಕಡಿತ ಮಿತಿ, ಐಟಿ ಸ್ಲ್ಯಾಬ್‌ ವ್ಯತ್ಯಯ ಸಾಧ್ಯವೇ?

ಕೋವಿಡ್ ಭೀತಿಯ ನಡುವೆಯೇ ಸಂಸತ್ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಸಂಸತ್ ಭವನದ ಸುಮಾರು 400 ಸಿಬ್ಬಂದಿಗಳಿಗೆ ಈ ತಿಂಗಳ ಮೊದಲ ವಾರದಲ್ಲಿ ಕೋವಿಡ್ ಸೋಂಕು ತಗುಲಿತ್ತು.

ಸತತ 4ನೇ ಬಜೆಟ್; ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ತಮ್ಮ ನಾಲ್ಕನೇ ಬಜೆಟ್ ಮಂಡಿಸಲಿದ್ದಾರೆ. ಇದುವರೆಗೂ ಭಾರತ 23 ಹಣಕಾಸು ಸಚಿವರನ್ನು ನೋಡಿದ್ದು, ಮೂವರು ಪ್ರಧಾನಿಗಳು ಹಣಕಾಸು ಖಾತೆ ತಮ್ಮ ಬಳಿಯೇ ಇಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದರು.

ಒಟ್ಟು 8 ಜನ ಹಣಕಾಸು ಸಚಿವರು ಮಾತ್ರ ಸತತ ನಾಲ್ಕು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿರುವ ನಿರ್ಮಲಾ ಸೀತಾರಾಮನ್‌ ಸತತ ನಾಲ್ಕು ಬಜೆಟ್ ಮಂಡನೆ ಮಾಡಲಿರುವ 9ನೆ ಹಣಕಾಸು ಸಚಿವರು ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಬಜೆಟ್ ಮೇಲೆ ಅಪಾರವಾದ ನಿರೀಕ್ಷೆ ಇದೆ. ಆರೋಗ್ಯ, ಉದ್ಯೋಗ, ಕಾರ್ಮಿಕ ವಲಯಕ್ಕೆ ಹಲವಾರು ಕೊಡುಗೆಗಳನ್ನು ನೀಡುವ ಸಾಧ್ಯತೆ ಇದೆ.

ಕೋವಿಡ್ ಪರಿಸ್ಥಿತಿಯಲ್ಲಿ ಕಂಪನಿಗಳು ವರ್ಕ್ ಫಂ ಹೋಂಗೆ ಆದ್ಯತೆ ನೀಡಿವೆ. ಈ ಹಿನ್ನಲೆಯಲ್ಲಿ ಚಿಕ್ಕ ಪುಟ್ಟ ಕಂಪನಿಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಉದ್ಯೋಗಿಗಳಿಗೆ ಹಲವು ಸೌಲಭ್ಯಗಳು ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ಭತ್ಯೆ ಘೋಷಣೆ ನಿರೀಕ್ಷೆ ಇದೆ. ಭಾರತೀಯ ಚಾರ್ಟೆಡ್ ಅಕೌಂಟ್ಸ್ ಸಂಸ್ಥೆ ಕೂಡಾ ವರ್ಕ್ ಫಂ ಹೋಂ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.

ಉದ್ಯೋಗ ಕ್ಷೇತ್ರದ ಮೇಲೆ ಕೋವಿಡ್ ಪರಿಸ್ಥಿತಿ, ಲಾಕ್‌ ಡೌನ್ ಭಾರೀ ಪರಿಣಾಮ ಉಂಟು ಮಾಡಿದೆ. ಉದ್ಯೋಗ ನಷ್ಟ, ವೇತನ ಕಡಿತ ಸೇರಿದಂತೆ ಹಲವಾರು ಸಂಕಷ್ಟಗಳನ್ನು ಉದ್ಯೋಗಿಗಳು ಎದುರಿಸುತ್ತಿದ್ದಾರೆ.

ಮನೆಯಿಂದಲೇ ಕಾರ್ಯ ನಿರ್ವಹಣೆ ಮಾಡುವುದರಿಂದ ಇಂಟರ್‌ ನೆಟ್ ಬಿಲ್, ಹೆಚ್ಚಿನ ವಿದ್ಯುತ್ ಬಿಲ್, ಪೀಠೋಪಕರಣಗಳ ಬಿಲ್ ಸೇರಿದಂತೆ ಉದ್ಯೋಗಿಗಳ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಎಲ್ಲಾ ಕಂಪನಿಗಳು ಸಹ ಬಿಲ್‌ಗಳನ್ನು ಮರುಪಾವತಿ ಮಾಡುವುದಿಲ್ಲ.

ಹಲವು ದೇಶಗಳಲ್ಲಿ ಉದ್ಯೋಗಿಗಳಿಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿದೆ. ಭಾರತದಲ್ಲಿಯೂ ಇಂತಹ ಘೋಷಣೆ ಮಾಡುವ ನಿರೀಕ್ಷೆ ಇದೆ. ತೆರಿಗೆ ಕಾಯ್ದೆ ಸೆಕ್ಷನ್ 16ರ ಅಡಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50 ಸಾವಿರದಿಂದ 1 ಲಕ್ಷಕ್ಕೆ ಏರಿಕೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇದೆ.

ಉದ್ಯೋಗದ ಮೇಲಿನ ವೃತ್ತಿ ತೆರಿಗೆ ಹೊರತುಪಡಿಸಿ ಉದ್ಯೋಗಕ್ಕೆ ಸಂಬಂಧಿಸಿದ ಅನೇಕ ವೆಚ್ಚಗಳನ್ನು ಸ್ಟ್ಯಾಂಡರ್ಡ್ ಡಿಡಕ್ಷನ್ ಕವರ್ ಮಾಡುತ್ತದೆ. 2005ರಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ರದ್ದುಗೊಳಿಸಲಾಗಿತ್ತು. 2017-18ರಲ್ಲಿ ಮತ್ತೆ ಪರಿಚಯಿಸಲಾಯಿತು.

English summary
Parliament budget session from January 31. Union finance minister Nirmala Sitharaman will present Budget 2022-23 on February 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X