Budget 2024: ಕೇಂದ್ರ ಬಜೆಟ್ ಯುವಕರ ಸಿಗಲಿದೆ ಸಿಹಿಸುದ್ದಿ
ನವದೆಹಲಿ, ಜುಲೈ 22: ಕೇಂದ್ರ ಸರ್ಕಾರ ಬಜೆಟ್ ಮಂಡನೆಗೆ ಕೆಲ ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ 3.0 ಸರ್ಕಾರ ಚೊಚ್ಚಲ ಬಜೆಟ್ ಇದಾಗಿರುವುದರಿಂದ ಆತ್ಮವಿಶ್ವಾಸದ ಹೆಜ್ಜೆ ಮತ್ತು ಹೊಸ ಭರವಸೆಯ ಹಾದಿ ತುಳಿಯುವ ನಿರೀಕ್ಷೆ ಹೆಚ್ಚಿದೆ.
ಪ್ರಧಾನಿ ನರೇಂದ್ರ ಮೋದಿ ಅವರ 3.0 ಸರ್ಕಾರ ಚೊಚ್ಚಲ ಬಜೆಟ್ ಸಂಬಂಧಿಸಿದಂತೆ ಸಾಕಷ್ಟು ನಿರೀಕ್ಷೆಗಳ ಜೊತೆ ಜೊತೆಗೆ ಸಾಕಷ್ಟು ಸವಾಲುಗಳು ಸಹ ಎದುರಾಗಿದೆ. ಜುಲೈ 23ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ನಲ್ಲಿ ಯುವಜನರ ಶಕ್ತಿ ಸಂಚಯಕ್ಕೆ ಪೂರಕವಾಗುವ ಯೋಜನೆಗಳ ನಿರೀಕ್ಷೆ ಇದೆ. ಈ ಬಾರಿ ಮೋದಿ ಬಜೆಟ್ ನಲ್ಲಿ ಯುವಕರಿಗೆ ಇನ್ನಷ್ಟು ಶಕ್ತಿಯಾಗ ಹಾಗೂ ನಿರುದ್ಯೋಗ ಸಮಸ್ಯೆಯನ್ನ ದೂರು ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗುವ ನಿರೀಕ್ಷೆ ಇದೆ.

ದೇಶದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡ ಬರುತ್ತಿದ್ದು, ಬಜೆಟ್ನಲ್ಲಿ ಉದ್ಯೋಗಸೃಷ್ಟಿಸಬಲ್ಲ ಕ್ಷೇತ್ರಗಳಿಗೆ ಒತ್ತು ಕೊಡಬಹುದಾದ ಸಾಧ್ಯತೆಗಳಿವೆ. ಯುವಶಕ್ತಿ ಪೂರ್ಣವಾಗಿ ಬಳಸಲು ಉದ್ಯೋಗಸೃಷ್ಟಿ ಸಾವಶ್ಯಕ ಇರಬೇಕು. ಅಲ್ಲದೇ ನವೋದ್ಯಮಗಳಿಗೆ ಉತ್ತೇಜನ ನೀಡುವ ಸ್ಟಾರ್ಟಪ್ ಸೀಡ್ ಫಂಡ್ ಸ್ಕೀಮ್ಗಳಿಗೆ ಹೆಚ್ಚು ಹಣ ವಿನಿಯೋಗ ಸೇರಿದಂತೆ ಹಲವು ಕ್ರಮಗಳನ್ನು ನಿರೀಕ್ಷಿಸಲಾಗಿದೆ.
ಮೋದಿ ಅವರ 3.0 ಸರ್ಕಾರ ಚೊಚ್ಚಲ ಬಜೆಟ್ ನಲ್ಲಿ ಯುವ ಸಮುದಾಯ ಹಲವು ಅವಕಾಶಗಳು ಸಿಗುವ ನಿರೀಕ್ಷೆಯಲ್ಲಿದೆ. ದೇಶದ ಆರ್ಥಿಕತೆ ಗರಿಷ್ಠವಾಗಿ ಬೆಳೆಯಬೇಕಾದರೆ ಉದ್ಯಮ ವಲಯ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಬೇಕು. ದೇಶದಲ್ಲಿ ನಿರುದ್ಯೋಗ ಇಲ್ಲದಂತೆ ಉದ್ದಿಮೆಗಳು ಬೆಳೆಯಬೇಕು. ಹೀಗಾಗಿ ಮೋದಿ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿವೆ.
ಯುವಕರ ಶಕ್ತಿ ಗರಿಷ್ಠವಾಗಿ ಬಳಕೆಯಾಗಬೇಕು. ಹೀಗಾಗಿ ಬಜೆಟ್ನಲ್ಲಿ ಯೋಜನೆಗಳು ಇರಬೇಕು ಎಂಬ ಆಶಯವನ್ನು ಉದ್ಯಮ ವಲಯ ಇಟ್ಟುಕೊಂಡಿದೆ. ನವೋದ್ಯಮಗಳಿಗೆ ಆರಂಭಿಕ ಉತ್ತೇಜನ ನೀಡುವಂತಹ ಸ್ಟಾರ್ಟಪ್ ಇಂಡಿಯಾ ಸೀಡ್ ಫಂಡ್ ಯೋಜನೆಗೆ ಹೆಚ್ಚು ಹಣ ವಿನಿಯೋಗಿಸಬೇಕು ಎನ್ನುವ ಸಲಹೆ ಕೇಳಿಬಂದಿದೆ. ಇನ್ನೂ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಸಾಕಷ್ಟು ಬೆಳವಣಿಗೆ ಹೊಂದಿದೆ. ಅಲ್ಲದೇ ಬಜೆಟ್ನಲ್ಲಿ ಸ್ಟಾರ್ಟಪ್ ಇಕೋಸಿಸ್ಟಂಗೆ ಪ್ರಾಧಾನ್ಯತೆ ಕೊಡಬಹುದು ಎಂದು ಭಾವಿಸಿರುವುದಾಗಿ ಕರ್ನಾಟಕದ ಎಂಜಿನಿಯರಿಂಗ್ ಪದವೀಧರೆಯೊಬ್ಬರ ಅಭಿಪ್ರಾಯವನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇನ್ನೂ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ನಂತಹ ವಿಶೇಷ, ಪರಿಣಿತ ಮತ್ತು ಉನ್ನತ ತಂತ್ರಜ್ಞಾನ ವಲಯಗಳಲ್ಲಿ ಗ್ಲೋಬಲ್ ಸಪ್ಲೈ ಚೈನ್ನ ಭಾಗವಾಗುವಂತಹ ಯೋಜನೆಗಳ ಮೇಲೆ ಬಜೆಟ್ ಗಮನ ಕೊಡಬೇಕು ಉನ್ನತ ಕೌಶಲ್ಯದ ಕೆಲಸಗಾರರನ್ನು ಸೃಷ್ಟಿಸುವಂತಹ ಕ್ಷೇತ್ರಗಳಲ್ಲಿ ನಾವೀನ್ಯತೆಗೆ ಉತ್ತೇಜಿಸಬೇಕು. ಈ ರೀತಿ ಪಾಲಿಸಿಗಳಿಗೆ ಬಜೆಟ್ ಆದ್ಯತೆ ಕೊಟ್ಟರೆ ಆಗ ಯುವಜನರು ಆರ್ಥಿಕತೆಯ ಬೆಳವಣಿಗೆಗೆ ಟೊಂಕ ಕಟ್ಟಿ ನಿಲ್ಲುತ್ತಾರೆ ಎಂದು ಬೆಂಗಳೂರಿನ ಎಸ್ಎಪಿ ಲ್ಯಾಬ್ಸ್ನ ಯುವ ಉದ್ಯೋಗಿ ಆಯುಷ್ ಕುಮಾರ್ ಅವರು ಹೇಳಿದ್ದಾರೆ.












Click it and Unblock the Notifications