ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2023 : ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಯಾವುದು ಏರಿಕೆ? ಯಾವುದು ಇಳಿಕೆ? ಇಲ್ಲಿದೆ ಸಂಪೂರ್ಣ ಪಟ್ಟಿ

2023-24ನೇ ಸಾಲಿನ ಬಜೆಟ್‌ ಅನ್ನು ನಿರ್ಮಲ ಸೀತಾರಾಮನ್‌ ಮಂಡಿಸಿದ್ದು, ಈ ಮೂಲಕ ಬೆಲೆ ಇಳಿಯುವ ಹಾಗೂ ದುಬಾರಿಯಾಗುವ ವಸ್ತುಗಳನ್ನು ಇಲ್ಲಿ ನೋಡೋಣ,

|
Google Oneindia Kannada News

ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರ ಬುಧವಾರ ಸಂಸತ್ತಿನಲ್ಲಿ 2023-24ರ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಜನವರಿ 31ರಂದು ಹಣಕಾಸು ಸಚಿವರು ಸಂಸತ್ತಿನಲ್ಲಿ 2022-23ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.

ಇದು ನಿರ್ಮಲಾ ಸೀತಾರಾಮನ್ ಅವರ ಐದನೇ ಕೇಂದ್ರ ಬಜೆಟ್. 2024ರಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ಪ್ರಸ್ತುತ ಸರ್ಕಾರದ ಕೊನೆಯ ಕೇಂದ್ರ ಬಜೆಟ್ ಆಗಿರುತ್ತದೆ. ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ, 2023 ರಲ್ಲಿ ಅನೇಕ ವಸ್ತುಗಳು ದುಬಾರಿಯಾಗುವ ಸಾಧ್ಯತೆಯಿದೆ. ಖಾಸಗಿ ಜೆಟ್‌ಗಳು, ಹೆಲಿಕಾಪ್ಟರ್‌ಗಳು, ಆಭರಣಗಳು, ಉನ್ನತ ಮಟ್ಟದ ಎಲೆಕ್ಟ್ರಾನಿಕ್ ವಸ್ತುಗಳು, ಹೈ ಗ್ಲಾಸ್ ಪೇಪರ್ ಮತ್ತು ವಿಟಮಿನ್‌ಗಳು ಸೇರಿದಂತೆ ಸುಮಾರು 35 ವಸ್ತುಗಳು ದುಬಾರಿಯಾಗಬಹುದು.

Budget 2023: ಮಕ್ಕಳು ಮತ್ತು ಹದಿಹರೆಯದವರಿಗಾಗಿ ನ್ಯಾಷನಲ್ ಡಿಜಿಟಲ್ ಲೈಬ್ರರಿ ಸ್ಥಾಪನೆ ಘೋಷಣೆBudget 2023: ಮಕ್ಕಳು ಮತ್ತು ಹದಿಹರೆಯದವರಿಗಾಗಿ ನ್ಯಾಷನಲ್ ಡಿಜಿಟಲ್ ಲೈಬ್ರರಿ ಸ್ಥಾಪನೆ ಘೋಷಣೆ

ಆದಾಗ್ಯೂ 2023ರ ಕೇಂದ್ರ ಬಜೆಟ್‌ನಲ್ಲಿ ಯಾವ ವಸ್ತುವು ಅಗ್ಗವಾಗಿದೆ ಎಂದು ತಿಳಿಯಲು ಜನರು ಹೆಚ್ಚು ಕಾತುರರಾಗಿದ್ದಾರೆ. ಕೇಂದ್ರ ಬಜೆಟ್ 2023ರಲ್ಲಿ ವಸ್ತುಗಳ ಬೆಲೆ ಏರಿಕೆ, ಇಳಿಕೆ ಪಟ್ಟಿ ತಯಾರಿಕೆಯಲ್ಲಿ ಸಚಿವರು ಹಲವಾರು ಮಾಹಿತಿ ನೀಡಿದ್ದಾರೆ. ವಿತ್ತ ಸಚಿವರು ಸಂಸತ್ತಿನಲ್ಲಿ ಎರಡು ವರ್ಷಗಳಿಂದ ಆರಂಭಿಸಿರುವ ಸಂಪ್ರದಾಯದಂತೆ ಕಾಗದರಹಿತ ಬಜೆಟ್ ಅನ್ನು ಮಂಡಿಸಿದ್ದಾರೆ.

Budget 2023: Full List of Cheaper and Costlier Items in Kannada

Income Tax Budget 2023: 7 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಘೋಷಿಸಿದ ಕೇಂದ್ರ- ನೌಕರರಿಗೆ ಸಿಹಿಸುದ್ದಿ, ಮಾಹಿತಿ Income Tax Budget 2023: 7 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಘೋಷಿಸಿದ ಕೇಂದ್ರ- ನೌಕರರಿಗೆ ಸಿಹಿಸುದ್ದಿ, ಮಾಹಿತಿ

ಕೇಂದ್ರ ಬಜೆಟ್ 2023-24: ದುಬಾರಿಯಾದ ವಸ್ತುಗಳು

ಕೇಂದ್ರ ಬಜೆಟ್ 2023ಗಾಗಿ ಜನರು ಕಾಯುತ್ತಿದ್ದು, ಇದು ಅವರ ದೈನಂದಿನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಗತ್ಯ ಮತ್ತು ಅಗತ್ಯವಲ್ಲದ ವಸ್ತುಗಳು ಅಗ್ಗವಾಗುವುದರಿಂದ ಅಥವಾ ದುಬಾರಿಯಾಗುವುದರಿಂದ ಅವು ಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರುತ್ತವೆ. ಸುಂಕದ ಹೆಚ್ಚಳ ಅಥವಾ ಇಳಿಕೆಯ ಆಧಾರದ ಮೇಲೆ ವಸ್ತುಗಳ ದರಗಳು ಅಗ್ಗವಾಗುತ್ತವೆ ಅಥವಾ ದುಬಾರಿಯಾಗುತ್ತವೆ.

1.ಆಭರಣಗಳು,
2.ಛತ್ರಿಗಳು
3.ಇಯರ್‌ಫೋನ್‌ಗಳಂತಹ ವಸ್ತುಗಳು,
4 ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನ್ಂ
5. ಸಿಗರೇಟ್‌,
6.ವಿದೇಶಿ ವಾಹನ,
7. ಬ್ರಾಂಡೆಡ್‌ ಬಟ್ಟೆ,
8.ಹೆಡ್‌ಫೋನ್‌, ಇಯರ್‌ಫೋನ್‌,
9.ಸ್ಮಾಟ್‌ ಮೀಟರ್‌ಗಳು, ಸೋಲಾರ್‌ ಸೆಲ್ಸ್‌, ಸೋಲಾರ್‌ ಮಾಡ್ಯೂಲ್ಸ್‌,
10. ಎಕ್ಸ್‌ರೇ ಮಿಷಿನ್‌, ವೈದ್ಯಕೀಯ ವಸ್ತುಗಳು, ಎಲೆಕ್ಟ್ರಾನಿಕ್‌ ಆಟದ ಸಾಮಾನು

ಕೇಂದ್ರ ಬಜೆಟ್ 2023-24: ಅಗ್ಗವಾದ ವಸ್ತುಗಳು

ಕೇಂದ್ರ ಬಜೆಟ್ 2023 ಆಹಾರ ಮತ್ತು ರಸಗೊಬ್ಬರಕ್ಕಾಗಿ ಸಬ್ಸಿಡಿಗಳಲ್ಲಿ $ 17 ಬಿಲಿಯನ್ ಇಳಿಕೆಯಾಗಬಹುದು. ಫ್ರೀ ಪ್ರೆಸ್ ಜರ್ನಲ್‌ನ ವರದಿಯ ಪ್ರಕಾರ 2023 ರಲ್ಲಿ ಆಹಾರ ಹಣದುಬ್ಬರವು ಇನ್ನಷ್ಟು ಹದಗೆಡಬಹುದು ಎನ್ನಲಾಗಿದೆ.

Budget 2023: Full List of Cheaper and Costlier Items in Kannada

1. ಸಿಮೆಂಟ್ ಮತ್ತು ಉಕ್ಕಿನ ಪೂರೈಕೆಗಳ ಮೇಲಿನ ಜಿಎಸ್‌ಟಿಯಲ್ಲಿ ಇಳಿಕೆ
2. ಮೊಬೈಲ್ ಫೋನ್‌ಗಳು,
3. ಎಲೆಕ್ಟ್ರಾನಿಕ್ ವಸ್ತುಗಳು
4. ಟಿವಿ,
5. ಎಲೆಕ್ಟಿಕ್‌ ವಾಹನ,
6. ಎಲೆಕ್ಟ್ರಿಕ್‌ ಚಿಮಣಿ,
7.ಕ್ಯಾಮರಾ ಲೆನ್ಸ್‌,
8. ಮೊಬೈಲ್‌,
9. ಚಾರ್ಜರ್‌,
10. ಇಂಗು, ಕೋಕೋ ಬೀನ್ಸ್,
11. ಮೀಥೈಲ್ ಆಲ್ಕೋಹಾಲ್,
12. ಕತ್ತರಿಸಿ ನಯಗೊಳಿಸಿದ ವಜ್ರಗಳು ಅಗ್ಗವಾಗಲಿದೆ ಎನ್ನಲಾಗಿದೆ

English summary
Union Budget 2023 has been presented by Finance Minister Nirmala Sitharaman, in this background let's know which items are expensive and which items are cheap.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X