Delhi Election 2025: ಮಹತ್ವದ ನಿರ್ಧಾರ ಪ್ರಕಟಿಸಿದ ಬಿಎಸ್‌ಪಿ ಮಾಯಾವತಿ
ನವದೆಹಲಿ, ಜನವರಿ 08: ರಾಷ್ಟ್ರ ರಾಜಧಾನಿ ದೆಹಲಿಯ ಬಹುನಿರಿಕ್ಷೆಯ ವಿಧಾನಸಭಾ ಚುನಾವಣೆ 2025ಕ್ಕೆ ದಿನಾಂಕ ಘೋಷಣೆ ಆಗಿದ್ದು, ರಾಜಕೀಯ ಪಕ್ಷಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ಮುಳುಗಿವೆ. ಇದಕ್ಕೂ ಮೊದಲು' ಬಹುಜನ ಸಮಾಜ ಪಕ್ಷ'ವು (ಬಿಎಸ್‌ಪಿ) ಚುನಾವಣಾ ನಿಮಿತ್ತ ಕೈಗೊಂಡ ನಿರ್ಧಾರ ಪ್ರಕಟಿಸಿದೆ. ದಹಲಿ ಚುನಾವಣೆಯಲ್ಲಿ ಮೈತ್ರಿ ಇಲ್ಲದೇ ಬಿಎಸ್‌ಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ ಎಂದು ತಿಳಿಸಿದೆ.
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು, ದೆಹಲಿ ಚುನಾವನೆಯಲ್ಲಿ ಬಡವರ ಹಾಗೂ ತುಳಿತಕ್ಕೆ ಒಳದಾದವರ ಪಕ್ಷ ಬಿಎಸ್‌ಪಿ ಹಣಬಲದಿಂದ ದೂರ ಇರಲಿದೆ. ದೆಹಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ಚುನಾವಣಾ ಆಯೋಗವು ಮತ ಯಂತ್ರಗಳ ದುರುಪಯೋಗ, ಕೋಮುವಾದ ಇನ್ನಿತರವುಗಳನ್ನು ಬಳಸಿ ಕೆಟ್ಟ ಪ್ರಚಾರ ಆಗದಂತೆ, ಸೂಕ್ತವಾಗಿ ಚುನಾವಣೆ ನಡೆಸುವ ಭರವಸೆ ನೀಡಿದೆ.

ದೆಹಲಿ ಚುನಾವಣೆ: ಬಿಎಸ್‌ಪಿ ಉತ್ತಮ ಪ್ರದರ್ಶನ ವಿಶ್ವಾಸ
ಈ ಬಾರಿ ದೆಹಲಿ ಚುನಾವಣೆಯಲ್ಲಿ ಬಿಎಸ್‌ಪಿ ಸ್ವಂತ ಬಲದ ಮೇಲೆ ಚುಜಾವಣೆ ಎದುರಿಸಲಿದೆ. ಅದಕ್ಕೆ ಬೇಕಾದ ಎಲ್ಲ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಪರಿಪೂರ್ಣ ಶಕ್ತಿಯನ್ನು ಚುನಾವಣೆಗೆ ವ್ಯಯಿಸಲಿದೆ. ದೆಹಲಿ ಚುನಾವಣೆ ಇತಿಹಾಸದಲ್ಲಿ ಬಿಎಸ್‌ಪಿ ಈ ಬಾರಿ ಉತ್ತಮ ಪ್ರದರ್ಶನ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಜಾಪ್ರಭುತ್ವದ ಬೆನ್ನೆಲುಬಾಗಿರುವ ಚುನಾವಣೆಗಳು ಹಣಬಲದಿಂದ, ಕೆಟ್ಟ ಪ್ರಚಾರದಿಂದ ನಡೆಯುತ್ತಿರುವುದಕ್ಕೆ ಮಾಯಾವತಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗ ಬದ್ಧವಾಗಿದೆ. ಆದರೆ ಕೋಮುವಾದ, ಅಸಯ್ಯ ಪ್ರಚಾರ ಕಲುಷಿತಗೊಂಡಿದೆ. ಇವಿಎಂ ಮಷಿನ್‌ಗಳು ದುರುಪಯೋಗ ಆಗುತ್ತಿವೆ ಎಂದು ಹೇಳಿದರು.
ಸ್ವತಂತ್ರವಾಗಿ ಸ್ಪರ್ಧಿಸಲು ತಯಾರಿ
ಸದ್ಯ ಅವರು ದೆಹಲಿಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಯಾವ ಪಕ್ಷದೊಂದಿಗೆ ಕೈ ಜೋಡಿಸದರಿಲು, ಆಸೆ ಆಮಿಷಗಳಿಗೆ ಒಳಗಾಗದಿರಲು ನಿರ್ಧರಿಸಿದ್ದಾರೆ. ಬುದ್ಧಿವಂತಿಕೆಯಿಂದ ಬಿಎಸ್‌ಪಿ ಪಕ್ಷವು ಪ್ರಬಲ ಸ್ಪರ್ಧಿಯಾಗಿಸಲು ಹೊರಟಿದ್ದಾರೆ.
ಬಿಎಸ್‌ಪಿ ಪಕ್ಷವು ಸಾರ್ವಜನಿಕ ಹಿತಾಸಕ್ತಿ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಮೀಸಲಾದ ಪಕ್ಷವಾಗಿದೆ. ನೀವು ಬಡವರ ಪರವಾದ ಪಕ್ಷಕ್ಕೆ ಮತ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಕೇವಲ ಬಿಎಸ್‌ಪಿ ಮಾತ್ರವಲ್ಲದೇ ಮತ್ತೊಮ್ಮೆ ಅಧಿಕಾರ ಹಿಡಿಯಲು ಹವಣಿಸುತ್ತಿರು ಎಎಪಿಗೆ ಮುಳ್ಳಾಗಲು ಬಿಜೆಪಿ ಹಾಗೂ ಕಾಂಗ್ರೆಸ್ ತೀರ್ಮಾನಿಸಿವೆ. ಕೆಲವು ಘಟನೆಗಳಿಂದ ಈ ಬಾರಿಯ ದೆಹಲಿ ಚುನಾವಣೆ ಪ್ರಮುಖ ಕೇಂದ್ರ ಬಿಂದು ಆಗಲಿದೆ.
ಫೆಬ್ರವರಿ 5 ರಂದು ದೆಹಲಿಯ ವಿಧಾನಸಭಾ ಚುನಾವಣೆ 2025 ನಡೆಯಲಿದೆ. ಮತದಾನ ಬಳಿಕ ಮೂರು ದಿನಕ್ಕೆ (ಫೆ.8) ಚುನಾವಣಾ ಫಲಿತಾಂಶ ನಡೆಯಲಿದೆ. ಜನವರಿ 17ರ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ.












Click it and Unblock the Notifications