BSNL Universal Sim: ಭೌಗೋಳಿಕ ನಿರ್ಬಂಧ ರಹಿತ 'ಸಿಮ್' ಪರಿಚಯ ಶೀಘ್ರ, ಏನಿದು?
ನವದೆಹಲಿ, ಆಗಸ್ಟ್ 10: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಜೊತೆಗೆ ಟಾಟಾ ಸಮೂಹ ಒಪ್ಪಂದ ಮಾಡಿಕೊಂಡಿದ್ದೇ ತಡ ನಿತ್ಯ ಒಂದೊಂದೆ ಅಪ್ಡೇಟ್, ಆಫರ್‌ಗಳು ಹೊರ ಬೀಳುತ್ತಿವೆ. ಇದೀಗ 4G ಮತ್ತು 5G-ಸಿಮ್ ಪ್ಲಾಟ್‌ಫಾರ್ಮ್ ಅನ್ನು ಹೊರತರುವ ಕುರಿತು ದೂರಸಂಪರ್ಕ ಇಲಾಖೆ ಶನಿವಾರ ಮಾಹಿತಿ ನೀಡಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಶೀಘ್ರದಲ್ಲೇ 4G ಮತ್ತು 5G-ಸಿಮ್ ಪ್ಲಾಟ್‌ಫಾರ್ಮ್ ಅನ್ನು ಹೊರತರಲಿದೆ ಎಂದು ದೂರಸಂಪರ್ಕ ಇಲಾಖೆ ಶನಿವಾರ ಮಾಹಿತಿ ನೀಡಿದೆ. ಈ ಕುರಿತು ಸಾಮಾಜಿಕ ಜಾತಲಾಣದಲ್ಲಿ ಮಾಹಿತಿ ನೀಡಿರುವ ಇಲಾಖೆಯು, ಬಳಕೆದಾರರನ್ನು ಗಮನಿಸಿ ಈ ಉಪಕ್ರಮ ತರುವುದಾಗಿ ಹೇಳಿದೆ.

ದೇಶದಲ್ಲಿನ BSNL 4G ಮತ್ತು 5G ನೆಟ್‌ವರ್ಕ್ ಮತ್ತು ಇಂಟರ್‌ನೆಟ್ ಬಳಕೆದಾರರು ಈ ಬಿಎಸ್‌ಎನ್‌ಎಲ್ ಮೊಬೈಲ್ ಸಂಖ್ಯೆಗಳನ್ನು ಆಯ್ಕೆ ಮಾಡಲು ಭೌಗೋಳಿಕ ಆಕ್ಷೇಪಣೆಗಳು, ನಿರ್ಬಂಧಗಳು ಇಲ್ಲದೇ ಸಿಮ್ ಬದಲಾಯಿಸಲು (ಪೋರ್ಟ್) ಈ ವೇದಿಕೆ ನೆರವಾಗಲಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ 4G ಮತ್ತು 5G ಹೊಂದಾಣಿಕೆಯ ಓವರ್-ದಿ-ಏರ್ (OTA) ಮತ್ತು ಯೂನಿವರ್ಸಲ್ ಸಿಮ್ (USIM) ಪ್ಲಾಟ್‌ಫಾರ್ಮ್ ಅನ್ನು ರಾಜ್ಯ-ರನ್ ಟೆಲಿಕಾಂ ಸಂಸ್ಥೆ ಲೋಕಾರ್ಪಣೆಗೊಳಿಸಲು ಸಜ್ಜಾಗಿದೆ. ಒಂದು ರೀತಿ ಎಲ್ಲೆಡೆ ಕಾರ್ಯ ನಿರ್ವಹಿಸುವ ಸಾರ್ವತ್ರಿಕ ಸಿಮ್ ಕಾರ್ಡ್ ಪರಿಚಯಿಸಲು ಮುಂದಾಗಿದೆ. ಈಸಿಮ್ ಕಾರ್ಡ್ ಯಾವುದೇ ಭೌಗೋಳಿಕ ನಿರ್ಬಂಧಗಳು ಇರುವುದಿಲ್ಲ ಎನ್ನಲಾಗಿದೆ.
BSNLಗೆ 89,047 ಕೋಟಿ ರೂ. ಪ್ಯಾಕೇಜ್
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಹಿಂದಿನ ವರ್ಷ ನಡೆದ ಸಚಿವ ಸಂಪುಟದಲ್ಲಿ BSNL ಪುನರುಜ್ಜೀವನಕ್ಕಾಗಿ ಒಟ್ಟು 89,047 ಕೋಟಿ ರೂ. ಪ್ಯಾಕೇಜ್ ಘೋಷಿಸಿತ್ತು. ಸರ್ವಾನುಮತದಿಂದ ಪ್ಯಾಕೇಜ್ ಅನ್ನು ಅನುಮೋದಿಸಿತ್ತು. ಈ ಮೂಲಕ ಸರ್ಕಾರಿ ಟೆಲಿಕಾಂ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಂಡಿತ್ತು. ಸದ್ಯ ಸರ್ಕಾರದ ಉದ್ದೇಶ ಈಡೇರಿಕೆ ಆಗುತ್ತಿದೆ.

ಸರ್ಕಾರದ ಈ BSNL ಪ್ಯಾಕೇಜ್ ನಲ್ಲಿ 4G ಮತ್ತು 5G ಸ್ಪೆಕ್ಟ್ರಮ್ ಹಂಚಿಕೆ ಸಹ ಒಳಗೊಂಡಿದೆ. ಪ್ಯಾಕೇಜ್ ಹಣ ಈ ಇದಕ್ಕೂ ಬಳಕೆ ಆಗಲಿದೆ. ಸರ್ಕಾರಿ ಪ್ಯಾಕೇಜ್ ಘೋಷಿಸಿದ ನಂತರ BSNL ಅಧಿಕೃತ ಬಂಡವಾಳವು 1,50,000 ಕೋಟಿಯಿಂದ 2,10,000 ಕೋಟಿಯಷ್ಟು ಏರಿಕ ಆಗಿದೆ ಎಂದು ಮೂಲಗಳು ತಿಳಿಸಿವೆ.
2019 ರಲ್ಲಿ ಪುನರುಜ್ಜೀವನದ ಮೊದಲ ಪ್ಯಾಕೇಜ್ ಒಪ್ಪಿಗೆ
ಅಭಿವೃದ್ಧಿಯಾಗದೇ ದಿನೇ ದಿನೆ ಕೆಳ ಹಂತಕ್ಕೆ ಹೋಗುತ್ತಿದ್ದ ಬಿಎಸ್‌ಎನ್‌ಲ್ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರದಿಂದ 2019 ರಲ್ಲಿ ಮೊದಲ ಪ್ಯಾಕೇಜ್‌ಗೆ ಅನುಮೋದನೆ ಸಿಕ್ಕಿತ್ತು. ಅಂದು ಸರ್ಕಾರಿ ಟೆಲಿಕಾಂ ಸಂಸ್ಥೆಗಾಗಿ 69,000 ಕೋಟಿ ರೂ., 2022 ಎರಡನೇ ಪ್ಯಾಕೇಜ್ ನಡಿ 1.64 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಅನ್ನು ಸರ್ಕಾರ ಅನುಮೋದಿಸಿತ್ತು. ಅಂದಿನ ಆ ಎಲ್ಲ ಉದ್ದೇಶಗಳು ಇದೀಗ ಹಂತ ಹಂತವಾಗಿ ಸಾಕಾರವಾಗುವ ವಿಶ್ವಾಸ ವ್ಯಕ್ತವಾಗಿದೆ.
ಇನ್ನೂ ಬಿಎಸ್‌ಎನ್‌ಎಲ್ ಸಾಲ FY 2021-22 ರಿಂದ ಈವರೆಗೆ ಮೊದಲಿಗಿಂತಲೂ ಕಡಿಮೆ ಅಂದರೆ 32,944 ಕೋಟಿ ರೂ. ಸಾಲದಿಂದ 22,289 ಕೋಟಿ ರೂ. ಸಾಲಕ್ಕೆ ಇಳಿಕೆ ಆಗಿದೆ.












Click it and Unblock the Notifications