BSNL Data Offer: ಬಿಎಸ್‌ಎನ್ಎಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಕೇವಲ 39 ರೂ.ಗೆ 20GB ಹೈ-ಸ್ಪೀಡ್ ಡೇಟಾ ಪ್ಯಾಕೇಜ್
BSNL Data Offer: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಗ್ರಾಹಕರ ಅನುಕೂಲಕ್ಕೆ ತಕ್ಕೆ ಹಾಗಾಗ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಲಿರುತ್ತದೆ. ಇದೀಗ ಮತ್ತೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಕೇವಲ 39 ರೂಪಾಯಿಗೆ 24 ಗಂಟೆಗಳ ಕಾಲ 20 ಜಿಬಿ ಹೈ-ಸ್ಪೀಡ್ ಡೇಟಾ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪ್ರಮುಖ ಟೆಲಿಕಾಂ ಸೇವಾ ಸಂಸ್ಥೆಯಾದ ಬಿಎಸ್‌ಎನ್‌ಎಲ್ ಹೆಚ್ಚಿನ ಪ್ರಮಾಣದ ಡೇಟಾ ಅಗತ್ಯವಿರುವ ಗ್ರಾಹಕರಿಗಾಗಿ 39 ರೂಪಾಯಿಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ಕೇವಲ ಒಂದು ದಿನದ ಅವಧಿಗೆ ಸೀಮಿತವಾಗಿದ್ದು, ಗ್ರಾಹಕರಿಗೆ 20 ಜಿಬಿ ಹೈ-ಸ್ಪೀಡ್ ಡೇಟಾ ಸಿಗಲಿದೆ. ಆದರೆ ಯಾವುದೇ ಕರೆ ಸೌಲಭ್ಯಗಳು ಇರುವುದಿಲ್ಲ, ಕೇವಲ ಡೇಟಾ ಮಾತ್ರ ಇರಲಿದೆ

ಈ ರೀಚಾರ್ಜ್‌ನಲ್ಲಿ ವಾಯ್ಸ್ ಕರೆ ಅಥವಾ ಎಸ್‌ಎಂಸ್ ಸೌಲಭ್ಯವಿಲ್ಲ, ಆದ್ದರಿಂದ ಒಂದು ದಿನಕ್ಕೆ ಹೆಚ್ಚುವರಿ ಡೇಟಾ ಅಗತ್ಯ ಇರುವವರಿಗೆ ಇದು ಸೂಕ್ತವಾಗಿದೆ. 24 ಗಂಟೆಗಳ ಅವಧಿ ಮುಗಿದ ನಂತರ, ಈ ಸೌಲಭ್ಯಗಳು ಮುಗಿಯಲಿವೆ. ಮತ್ತೆ ಬೇಕೆಂದರೆ ಪುನಃ ರಿಚಾರ್ಜ್ ಮಾಡಿಕೊಳ್ಳಬೇಕಿದೆ.
39 ರೂಪಾಯಿ ಡೇಟಾ ಪ್ಲಾನ್ ವಿವರ
* ಹೆಚ್ಚಿನ ಡೇಟಾ ಬಯಸುವ ಬಳಕೆದಾರರಿಗಾಗಿ ಬಿಎಸ್ಎನ್‌ಎಲ್ ಹೊಸ ಡೇಟಾ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಕೇವಲ 39 ರೂಪಾಯಿಗೆ 24 ಗಂಟೆಗಳ (1 ದಿನ) ಅವಧಿಗೆ 20GB ಹೈ-ಸ್ಪೀಡ್ ಇಂಟರ್ನೆಟ್ ಡೇಟಾ ಸಿಗಲಿದೆ.
* ಈ ಪ್ಯಾಕ್‌ನಲ್ಲಿ ಯಾವುದೇ ಉಚಿತ ಕರೆ ಅಥವಾ SMS ಸೌಲಭ್ಯ ಇರುವುದಿಲ್ಲ. ತಕ್ಷಣದ ತುರ್ತು ಡೇಟಾ ಅಗತ್ಯವಿರುವವರಿಗೆ ಇದು ಹೆಚ್ಚು ಸೂಕ್ತವಾಗಿದೆ.
ಬಿಎಸ್‌ಎನ್‌ಎಲ್‌ನ ಹಲವು ಯೋಜನೆಗಳು
ಹೊಸ ಬಳಕೆದಾರರಿಗಾಗಿ ಕಂಪನಿಯು 1 ರೂಪಾಯಿನ 'ಫ್ರೀಡಮ್ ಆಫರ್' ಅನ್ನು ಸಹ ನೀಡುತ್ತಿದೆ. ನೀವು ಅರ್ಹರಾಗಿದ್ದರೆ, 24 ದಿನಗಳ ಸೇವೆಯೊಂದಿಗೆ ಉಚಿತ ಬಿಎಸ್‌ಎನ್‌ಎಲ್ ಸಿಮ್ ಅನ್ನು ಪಡೆಯಬಹುದು. ಗ್ರಾಹಕರಿಗೆ ಅನಿಯಮಿತ ಕರೆಗಳು, ಉಚಿತ ರಾಷ್ಟ್ರೀಯ ರೋಮಿಂಗ್ ಮತ್ತು ಪ್ರತಿದಿನ ಒಂದು ಜಿಬಿ ಡೇಟಾ ಸಿಗುತ್ತದೆ. ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಬಳಕೆದಾರರಿಗೆ ಒಟ್ಟು 24 ಜಿಬಿ ಡೇಟಾ ಸಿಗುತ್ತದೆ ಮತ್ತು ಇದು 24 ದಿನಗಳವರೆಗೆ ಇರುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಅಂದರೆ ಈ ಕೊಡುಗೆಯು ಸೆಪ್ಟೆಂಬರ್ 12 (2026)ರವರೆಗೆ ಮಾತ್ರ ಲಭ್ಯವಿತ್ತು. ಈಗಾಗಲೇ ಇದು ಮುಕ್ತಾಯವಾಗಿದೆ.
ಇನ್ನು ವಾರ್ಷಿಕ ರೀಚಾರ್ಜ್ ಯೋಜನೆಯು ಈಗ ಹೆಚ್ಚುವರಿಯಾಗಿ 47 ದಿನಗಳ ಸೇವೆಯನ್ನು ನೀಡುತ್ತಿದೆ. 'ಫ್ರೀಡಮ್ ಆಫರ್'ನಿಂದಾಗಿ ಒಟ್ಟು 412 ದಿನಗಳ ಸೇವೆ ಲಭ್ಯವಾಗಲಿದೆ. ಈ ವಾರ್ಷಿಕ ಯೋಜನೆಯಲ್ಲಿ ಪ್ರತಿದಿನ ಎರಡು ಜಿಬಿ ಡೇಟಾ, 100 ಎಸ್‌ಎಂಎಸ್, ಅನಿಯಮಿತ ಕರೆಗಳು ಮತ್ತು ಉಚಿತ ರಾಷ್ಟ್ರೀಯ ರೋಮಿಂಗ್ ಸೌಲಭ್ಯಗಳು ಸೇರಿವೆ. ಇದು ಕೂಡ ಈಗಾಗಲೇ ಮುಕ್ತಾಯವಾಗಿದೆ.
ಬಿಎಸ್‌ಎನ್‌ಲ್ ಕೇವಲ ಈ ಸರಳ ಕೊಡುಗೆಗಳಿಗೆ ಸೀಮಿತವಾಗದೆ, ತನ್ನ ನೆಟ್‌ವರ್ಕ್ ವಿಸ್ತರಣೆ ಮಾಡುವತ್ತಲೂ ಗಮನಹರಿಸುತ್ತಿದೆ. ದೇಶಾದ್ಯಂತ ಬಳಕೆದಾರರಿಗೆ ವೇಗ ಮತ್ತು ಹೆಚ್ಚು ವಿಶ್ವಾಸಾರ್ಹ ನೆಟ್‌ವರ್ಕ್ ಸಂಪರ್ಕ ಒದಗಿಸುವ ಉದ್ದೇಶದಿಂದ ಈ ವರ್ಷ 1,00,000 ಹೊಸ 4G ಮತ್ತು 5G ಟವರ್‌ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.
ಗ್ರಾಮೀಣ ಪ್ರದೇಶಗಳಿಗಾಗಿ ಮಹತ್ವದ ಯೋಜನೆ
ಕೆಲವು ತಿಂಗಳ ಹಿಂದೆ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಯು ತನ್ನ 'ಗ್ರಾಮೀಣ ಪ್ರವೇಶ ಯೋಜನೆ'ಯನ್ನು ಪರಿಚಯಿಸಿತು. ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಹೈ-ಸ್ಪೀಡ್ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಹೆಚ್ಚು ಸುಲಭವಾಗಿ ಲಭ್ಯವಾಗಿಸುವ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ. ತಿಂಗಳಿಗೆ 259 ರೂಪಾಯಿ ದರವನ್ನು ಹೊಂದಿರುವ ಈ ಯೋಜನೆಯು, 25Mbps ವರೆಗಿನ ಬ್ರಾಡ್‌ಬ್ಯಾಂಡ್ ವೇಗ, ಅನಿಯಮಿತ ಧ್ವನಿ ಕರೆ, ಉಚಿತ ಇನ್‌ಸ್ಟಾಲೇಷನ್ ಮತ್ತು 'Waves' OTT ಸೇವೆಗಳ ಪ್ರವೇಶವನ್ನು ಒದಗಿಸುತ್ತದೆ. ಒಟ್ಟಿನಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಲಿರುತ್ತದೆ.


Click it and Unblock the Notifications
