BSNL ₹1 Plan: ಫ್ರೀಡಮ್ ಆಫರ್! ಒಂದು ರೂಪಾಯಿಯ ಭರ್ಜರಿ ಪ್ಲಾನ್, ಆಗಸ್ಟ್ 30 ಕೊನೆ ದಿನ
ದೇಶದ ಬೇರೆ ಬೇರೆ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಪ್ರಬಲ ಸ್ಪರ್ಧೆ ಒಡ್ಡುತ್ತಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇತ್ತೀಚೆಗೆ ತುಂಬಾ ಅಗ್ಗದ ರಿಚಾರ್ಜ್ ಪ್ಲಾನ್ ಅನ್ನು ಘೋಷಣೆ ಮಾಡಿದೆ. ಒಂದಂಕಿ ಬೆಲೆಗೆ ನೀವು ಈ ಹೊಸ ಪ್ಲಾನ್ ಖರೀದಿಸಬಹುದು. ಇದಕ್ಕೆ ಫ್ರೀಡಂ ಆಫರ್ ಎಂದು ಹೆಸರಿಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಈ ಕೊಡುಗೆ ನೀಡಲಾಗುತ್ತಿದೆ. ಇದೇ ಆಗಸ್ಟ್ 30 ಆಫರ್ ಅಂತ್ಯದ ಕೊನೆಯ ದಿನವಾಗಿದೆ. ಹಾಗಾದರೆ ಈ ಪ್ಲಾನ್ ವ್ಯಾಲಿಡಿಟಿ, ವಿಶೇಷತೆ ಮಾಹಿತಿ ಇಲ್ಲಿದೆ.
ಖಾಸಗಿ ಕಂಪನಿಗಳ ಮೇಲೆ ಮೊಬೈಲ್ ರಿಚಾರ್ಜ್ ವಿಚಾರವಾಗಿ ಬಿಎಸ್ಎನ್ಎಲ್ ಒತ್ತಡ ಹೆಚ್ಚಿಸಿದೆ. ಕೇಂದ್ರ ಸರ್ಕಾರಿ ಒಡೆತನದ ಕಂಪನಿಯೊಂದು ಹೀಗೆ ಕೈಗೆಟುಕುವ ಬೆಲೆಗೆ ಗ್ರಾಹಕ ಸ್ನೇಹಿ ಪ್ಲಾನ್ ಅನ್ನು ಘೋಷಿಸುತ್ತಿದೆ. ಬಿಎಸ್‌ಎನ್‌ಎಲ್ ಹೊಸ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಈ ಆಫರ್ ನೀಡುತ್ತಿದೆ. ದಿನಕ್ಕೆ 2 ಜಿಬಿ ಡೇಟಾ, ಅನಿಯಮಿತ ಮತ್ತು ಉಚಿತ ಎಸ್‌ಎಂಎಸ್ ಅನ್ನು ಕೇವಲ 4 ಪೈಸೆಗೆ ಪಡೆಯಬಹುದು. ಅರೇ ಹೌದಾ, ನಿಜವೇ ಎಂದು ನೀವು ಕೇಳಬಹುದು.ಅಲಿಗೆ ಇದು ಸತ್ಯ.

ದೇಶದ ಅತ್ಯಂತ ಅಗ್ಗದ ಮೊಬೈಲ್ ಪ್ಲಾನ್ ಯೋಜನೆ
ಬಿಎಸ್‌ಎನ್‌ಎಲ್ ತನ್ನ ಬಳಕೆದಾರರಿಗಾಗಿ ಈ ಅಗ್ಗದ ರೀಚಾರ್ಜ್ ಯೋಜನೆ ಆರಂಭಿಸಿದೆ. ಹೆಚ್ಚು ಹೆಚ್ಚು ಜನರನ್ನು ತಲುಪುವ ಉದ್ದೇಶಿದಂದ ಆಗಸ್ಟ್ 1 ರಿಂದ ಆಗಸ್ಟ್ 31 ರವರೆಗೆ 1 ರೂ. ರಿಚಾರ್ಜ್ ಯೋಜನೆ ಪರಿಚಯಿಸಿದೆ. ಹೊಸ ಸಿಮ್ ಖರೀದಿಸುವವರಿಗೆ ಈ ಆಫರ್ ಸಿಗಲಿದೆ. ಉಚಿತವಾಗಿ ಸಿಮ್ ಪಡೆದು ಒಂದು ರೂಪಾಯಿ ರಿಚಾರ್ಜ್ ಮಾಡಿಸಿದರೆ 30 ದಿನಗಳ ಮಾನ್ಯತೆ ಪಡೆಯಬಹುದು. ಇದರೊಂದಿಗೆ ಬಳಕೆದಾರರಿಗೆ ಹಲವು ಸೇವೆಗಳು ಲಭ್ಯವಾಗುತ್ತವೆ.
BSNL "ಫ್ರೀಡಂ ಆಫರ್" ಪ್ರಕಾರ, ಈ ಅಗ್ಗದ ರೀಚಾರ್ಜ್‌ನಿಂದ ಅನಿಯಮಿತ ಧ್ವನಿ ಕರೆಗಳು, 2 ಜಿಬಿ ದೈನಂದಿನ 4ಜಿ ಇಂಟರ್‌ನೆಟ್ ಸೇವೆ ಸಿಗುತ್ತದೆ. 100 ಎಸ್‌ಎಂಎಸ್ ಸಹ ಮಾಡಲು ಅವಕಾಶ ಇದ್ದು, ಆಗಸ್ಟ್ 30 ರವರೆಗೆ ಇದು ಮಾನ್ಯವಾಗಿರುತ್ತದೆ. 4ಜಿ ಸೇವೆ ಪಡೆಯಲು ಇಚ್ಛಿಸುವ ಗ್ರಾಹಕರು ಕೂಡಲೇ ಸಿಮ್ ಪಡೆದು ಒಂದು ರೂಪಾಯಿ ರಿಚಾರ್ಜ್ ಮಾಡಿಕೊಂಡು ಸೇವೆ ಆನಂದಿಸಬಹುದು.

ಬಳಕೆದಾರರಿಗೆ 2 ಜಿಬಿ ಹೈ ಸ್ಪೀಡ್ ಮತ್ತು ದಿನಕ್ಕೆ 10 ಎಸ್‌ಎಂಎಸ್ ನೀಡುತ್ತದೆ. ಈ ಯೋಜನೆಗೆ ರೂ. 1 ವೆಚ್ಚವಾಗುತ್ತದೆ, ಅಂದರೆ ಬಳಕೆದಾರರು ದಿನಕ್ಕೆ 3.4 ಪೈಸೆ ಖರ್ಚು ಮಾಡುತ್ತಾರೆ. ಬಿಎಸ್‌ಎನ್‌ಎಲ್ ಈ ಆಫರ್ ಜತೆಗೆ ಬಳಕೆದಾರರಿಗೆ BTV ಕೋಡ್ ಡೇಟಾ ಸಹ ನೀಡುತ್ತಿದೆ. ಇದರಲ್ಲಿ ನೀವು 350 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ.
336 ದಿನಗಳ ಹೊಸ ರಿಚಾರ್ಜ್ ಯೋಜನೆ
BSNL ಬಳಕೆದಾರರಿಗಾಗಿ ದೀರ್ಘಾವಧಿ ಮೊಬೈಲ್ ರಿಚಾರ್ಜ್ ಯೋಜನೆ ಪರಿಚಯಿಸಿದೆ. ಬಳಕೆದಾರರು 1499 ರೂಪಾಯಿ ರಿಚಾರ್ಜ್ ಮಾಡಿದರೆ 336 ದಿನಗಳ ಮಾನ್ಯತೆ ಪಡೆಯುತ್ತಾರೆ. ಯೋಜನೆಯಡಿ ನಿತ್ಯ 100 ಉಚಿತ ಎಸ್‌ಎಂಎಸ್, ಒಟ್ಟು 24 ಜಿಬಿ ಇಂಟರ್‌ನೆಟ್ ಡೇಟಾ, ಅನಿಯಮಿತ ಕರೆ ಪಡೆಯುತ್ತಾರೆ. ಈ ಯೋಜನೆ ಪಡೆದರೆ ನೀವು ತಿಂಗಳಿಗೆ 130 ರೂಪಾಯಿ ಖರ್ಚು ಮಾಡಿದಂತಾಗುತ್ತದೆ.












Click it and Unblock the Notifications