BSNL: ದೀಪಾವಳಿಗೆ ಕೈಗೆಟುಕುವ ಬೆಲೆಗೆ ಮೊಬೈಲ್ ರಿಚಾರ್ಜ್ ಪ್ಲಾನ್: ವ್ಯಾಲಿಡಿಟಿ ವಿವರ
BSNL New Plan: ಕೇಂದ್ರ ಸರ್ಕಾರಿ ಅಧೀನದ ಟೆಲಿಕಾಂ ಸಂಸ್ಥೆಯಾಗಿರುವ "ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)' ಇತರ ಖಾಸಗಿ ಟೆಲಿಕಾಂ ಸಂಸ್ಥೆಗಳಿಗಿಂತಲೂ ಪೂರಕ ರೀತಿಯಲ್ಲಿ ಜನಸ್ನೇಹಿ ಯೋಜನೆ ಜಾರಿಗೆ ತರುತ್ತಿದೆ. ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ನೀಡಲಾಗದ ಬೆಲೆಯಲ್ಲಿ 365 ದಿನಗಳ ಮಾನ್ಯತೆ ರಿಚಾರ್ಜ್ ಯೋಜನೆ ಘೋಷಿಸಿದೆ.
ಹೌದು, ಬಿಎಸ್‌ಎನ್‌ಎಲ್ ಮಾಸಿಕ 200 ರೂಪಾಯಿವೆಚ್ಚದಲ್ಲಿ 365 ದಿನಗಳ ಮಾನ್ಯತೆ ರೀಚಾರ್ಜ್ ಪ್ಲಾನ್ ಘೋಷಿಸಿದೆ. ಇಡೀ ವರ್ಷ ಸಿಮ್ ಸಕ್ರಿಯವಾಗಿರುತ್ತದೆ. ಅನಿಯಮಿತ ಧ್ವನಿ ಕರೆಗಳು, ದೈನಂದಿನ ಡೇಟಾ ಮತ್ತು SMS ಪ್ರಯೋಜನಗಳು ಸಹ ಇರಲಿವೆ. BSNL ಒಂದು ವರ್ಷದ ಸಿಮ್ ಸಕ್ರಿಯ ರೀಚಾರ್ಜ್‌ನ ಪ್ಲಾನ್ ವಿವರ ಮುಂದಿದೆ.

BSNL 4G ಸೇವೆ ನೀಡಲು ಆರಂಭಿಸಿದಾಗಿನಿಂದ ಕಂಪನಿಯ ರೀಚಾರ್ಜ್ ಯೋಜನೆಗಳು ಅತ್ಯುತ್ತಮ ಪ್ಲಾನ್‌ಗಳಾಗಿವೆ. 4G ಯೋಜನೆಗಳು ಹಿಂದಿನಂತೆಯೇ ಅದೇ ಬೆಲೆಗಳಲ್ಲಿ ಲಭ್ಯವಿದೆ. ಇದರಲ್ಲಿ, BSNL 2399 ರೂಪಾಯಿ ರೀಚಾರ್ಜ್ ಯೋಜನೆ ಹಾಕಿಸಿಕೊಂಡರೆ, ಮಾಸಿಕ ತಿಂಗಳಿಗೆ 200 ವೆಚ್ಚದಲ್ಲಿ ಇಡೀ ವರ್ಷದ ಪ್ಲಾನ್ ನಿಮ್ಮದಾಗಿಸಿಕೊಳ್ಳಬಹುದು. ಈ ಯೋಜನೆಯಲ್ಲಿ ಸಿಮ್ ಸಕ್ರಿಯತೆ, ಎಸ್‌ಎಂಎಸ್ ಹಾಗೂ ಅನಿಯಮಿತ ಕರೆಗಳಿಗೆ ಅವಕಾಶ ಇದೆ ಎಂದು ಕಂಪನಿ ತಿಳಿಸಿದೆ.
ಇದನ್ನು ದೀಪಾವಳಿ ಧಮಾಕಾ ಅಂತಲೂ ಕರೆಯಬಹುದಾಗಿದೆ. 12 ತಿಂಗಳ ವ್ಯಾಲಿಡಿಟಿ ಹೊಂದಿರುವ ಈ ಯೋಜನೆ ಪಡೆದರೆ ನೀವು ಮಾಸಿಕ ರೂ.200 ವ್ಯಯಿಸಿದಂತಾಗುತ್ತದೆ. ಇತರ ಕಂಪನಿಗಳ ಮಾಸಿಕ ರಿಚಾರ್ಜ್ ಪ್ಲಾನ್ 200 ರೂ.ಗೂ ಅಧಿಕವಾಗಿವೆ. ಆದ್ದರಿಂದ ಈ ಪ್ಲಾನ್ ವಿಶೇಷತೆಯಿಂದ ಕೂಡಿದೆ ಎನ್ನಬಹದು.
ವರ್ಷವಿಡೀ ಅನಿಯಮಿತ ಸ್ಥಳೀಯ, STD ಮತ್ತು ರೋಮಿಂಗ್ ಧ್ವನಿ ಕರೆಗಳು ಲಭ್ಯವಿದೆ. ದಿನಕ್ಕೆ 2ಜಿಬಿ ಇಂಟರ್‌ನೆಟ್ ಸೇವೆ ಸಿಗುತ್ತದೆ. 365 ದಿನಗಳ ಸಂಪೂರ್ಣ 730 ಜಿಬಿ ಡೇಟಾ ಸಿಗುತ್ತದೆ. ದೈನಂದಿನ 2ಜಿಬಿಎ ಡೇಟಾ ಖಾಲಿಯಾ ನಂತರವೂ, 40 ಕೆಬಿಪಿಎಸ್ ವೇಗದಲ್ಲಿ ಇಂಟರ್‌ನೆಟ್ ಸೇವೆ ಪಡೆಯಬಹುದು. ವರ್ಷಪೂರ್ತಿ ಪ್ರತಿ ದಿನ 100 ಎಸ್‌ಎಂಎಸ್ ಉಚಿತವಾಗಿರುತ್ತವೆ. ಒಂದು ರೀಚಾರ್ಜ್‌ನಿಂದ ವರ್ಷವಿಡಿ ಅನೇಕ ಪ್ರಯೋಜನೆ ಪಡೆಯಬಹುದಾಗಿದೆ.
BSNL ರೂ. 1499 ಪ್ಲಾನ್ ವಿವರ
ಒಂದು ವೇಳೆ ನೀವು ರೂ. 1499 ಪ್ಲಾನ್ ಪಡೆಯುವದಾದರೆ ನಿಮಗೆ 336 ದಿನಗಳ ಮಾನ್ಯತೆ ನೀಡುತ್ತದೆ. ಇದರಿಂದ ನೀವು ಸುಮಾರು 11 ತಿಂಗಳವರೆಗೆ ಪ್ರಯೋಜನ ಪಡೆಯಬಹುದು. ಮಾನ್ಯತೆಯ ದಿನದವರೆಗೆ ಒಟ್ಟು 24 ಜಿಬಿ ಇಂಟರ್‌ನೆಟ್ ಸೌಲಭ್ಯ ಸಿಗುತ್ತದೆ. ಇಷ್ಟು ಡೇಟಾ ಖಾಲಿಯಾದ ಬಳಿಕ 40 Kbps ಪೋಸ್ಟ್ ಸ್ಪೀಡ್ ಡೇಟಾ ಸಿಗಲಿದೆ. STD ಮತ್ತು ರೋಮಿಂಗ್ ಧ್ವನಿ ಕರೆಗಳ ಪ್ರಯೋಜನ ಜೊತೆಗೆ ನಿತ್ಯ 100 ಸಂದೇಶ ಕಳುಹಿಸಬಹುದು.












Click it and Unblock the Notifications