BSNL Affordable Plan: ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಅತೀ ಕಡಿಮೆ ದರದ ರಿಚಾರ್ಜ್ ಪ್ಲಾನ್, ಪ್ರಯೋಜನ
ಬೆಂಗಳೂರು, ಏಪ್ರಿಲ್ 09: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಟೆಲಿಕಾಂ ಕಂಪನಿಯು ಹೊಸ ಹೊಸ ಮೊಬೈಲ್ ರಿಚಾರ್ಜ್ ಯೋಜನೆ ಪರಿಚಯಿಸುತ್ತಲೇ ಇದೆ. ಪ್ರಿಪೇಯ್ಡ್ ಆಯ್ತು ಇದೀಗ ಕಡಿಮೆ ಬೆಲೆಗೆ, ಗ್ರಾಹಕ ಸ್ನೇಹಿ ಪೋಸ್ಟ್‌ಪೇಯ್ಡ್ ರಿಚಾರ್ಜ್ ಯೋಜನೆ ಸಹ ಜನರಿಗೆ ನೀಡಿದೆ. ಎಲ್ಲ ಹಂತದಲ್ಲೂ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಹತ್ತಿರವಾಗುತ್ತಿದೆ. ಈ ಕೈಗೆಟುಕುವ ಬೆಲೆ ಬಿಎಸ್‌ಎನ್‌ಎಲ್ ಯೋಜನೆ ಪ್ರಯೋಜನ, ಡೇಟಾ ಮಾಹಿತಿ ಇಲ್ಲಿದೆ.
ದೇಶಾದ್ಯಂತ 4 ಜಿ ಇಂಟರ್‌ನೆಟ್ ಸೇವೆ ಅಪ್‌ಗ್ರೇಡ್ ಆದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಟೆಲಿಕಾಂ ಸಂಸ್ಥೆ 399 ರೂಪಾಯಿಗೆ ಭರ್ಜರಿ ಪೋಸ್ಟ್‌ಪೇಯ್ಡ್ ಯೋಜನೆ ಘೋಷಿಸಿದೆ. ಈ ಯೋಜನೆ ನಿರ್ದಿಷ್ಟ ವರ್ಗದ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಬಿಡುಗಡೆ ಮಾಡಲಾಗಿದೆ.

ಯೋಜನೆಯ ಪ್ರಯೋಜನಗಳೇನು?
399 ರೂಪಾಯಿ ಪೋಸ್ಟ್‌ಪೇಯ್ಡ್ ಯೋಜನೆಯಡಿ ಗ್ರಾಹಕರು ಅನಿಯಮಿತ ಕರೆಗಳನ್ನು ಆನಂದಿಸಬಹುದು. ಪ್ರತಿ ನಿತ್ಯ 100 ಎಸ್‌ಎಂಎಸ್ ಕಳುಹಿಸಬಹುದು. ಯೋಜನೆಯಲ್ಲಿ ಒಟ್ಟು 70 ಜಿಬಿ ಇಂಟರ್‌ನೆಟ್ ಸೇವೆ ಸಿಗುತ್ತದೆ. 120 ಜಿಬಿ ವರೆಗೆ ನೀವು ಇಂಟರ್‌ನೆಟ್ ವಿಸ್ತರಣೆ ಮಾಡಿಕೊಳ್ಳಲು ಅವಕಾಶ ಇದೆ ಎಂದು ಸಂಸ್ಥೆ ತಿಳಿಸಿದೆ.
ಬಿಎಸ್‌ಎನ್‌ಎಲ್ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಈ ಹಿಂದೆ ಒಂದಷ್ಟು ಯೋಜನೆ ಘೋಷಿಸಲಾಗಿತ್ತು. ಇತ್ತೀಚೆಗೆ ಸಂಸ್ಥೆಯು ಜನಸ್ನೇಹಿ, ಕಡಿಮೆ ಬೆಲೆಗೆ ಸಾಕಷ್ಟು ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ಘೋಷಣೆ ಮಾಡಿದೆ. ಜನರಿಗೆ ಇಷ್ಟು ಕಡಿಮೆ ಬೆಲೆಗೆ ಬೇರಾವ ಟೆಲಿಕಾಂ ಕಂಪನಿಗಳು ಇಂತಹ ಸೇವೆ ಒದಗಿಸುವುದಿಲ್ಲ ಎನ್ನಬಹುದು.
ದುಬಾರಿ ರಿಚಾರ್ಜ್ ಯೋಜನೆಗಳು: BSNL ಉತ್ತಮ ಸೇವೆ
ಜಿಯೋ, ಏರ್‌ಟೆಲ್, ವಡಾಫೋನ್ ದುಬಾರಿ ರೀಚಾರ್ಜ್‌ಗಳ ಮಧ್ಯೆ ಬಿಎಸ್‌ಎನ್‌ಎಲ್ ತನ್ನ ಸೇವೆ, ದಕ್ಷತೆ, ಬಳಕೆದಾರ ಸ್ನೇಹಿ ಯೋಜನೆಗಳಿಂದ ಜನರಿಗೆ ಹತ್ತಿರವಾಗುತ್ತಿದೆ. TRAI ನಿರ್ದೇಶನ ಮೇರೆಗೆ ಟೆಲಿಕಾಂ ಸಂಸ್ಥೆಗಳು ಡೇಟಾ ಇಲ್ಲದೇ ಕೇವಲ ಧ್ವನಿ ಸೇವೆಯ ಯೋಜನೆಗಳು ನೀಡಿವೆ. ಒಂದೆರಡು ಕಡಿಮೆ ಬೆಲೆಯ ಯೋಜನೆಗಳನ್ನು ಪರಿಚಯಿಸಿವೆ.
BSNL ಒಂದು ಲಕ್ಷ ಟಾವರ್ ಸ್ಥಾಪಿಸುವ ಗುರಿ ಇಟ್ಟುಕೊಂಡಿದೆ. ಈಗಾಗಲೇ 70 ಸಾವಿರ ಸೈಟ್‌ಗಳಲ್ಲಿ ಟಾವರ್ ನಿರ್ಮಿಸಿದೆ. 3 ಜಿ ಅಂತರ್ಜಾಲ ಕಡಿತಗೊಳಿಸಿ ದೇಶಾದ್ಯಂತ 4ಜಿ ಸೇವೆ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಕಂಪನಿಯು 5 ಜಿಗೆ ಪರಿವರ್ತನೆಗೊಳ್ಳಲಿದೆ. ಅದರ ತಯಾರಿಯು ತೆರೆಮರೆಯಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.












Click it and Unblock the Notifications