ಅಕ್ರಮ ಬಯಲಿಗೆಳೆದ ಯೋಧ ಸೇವೆಯಿಂದ ವಜಾ
ನವದೆಹಲಿ, ಜು.3: ಭಾರತದ ಗಡಿಯಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಹಿರಂಗಗೊಳಿಸುವ ಸಿಡಿಯನ್ನು ಕನ್ನಡ ಖಾಸಗಿ ಸುದ್ದಿ ವಾಹಿನಿಗಳಿಗೆ ನೀಡಿದ್ದ ಬಿಎಸ್‌ಎಫ್ ಯೋಧ ಮಂಜುನಾಥ್‌ರನ್ನು ಸೇವೆಯಿಂದ ವಜಾಗೊಳಿಸಿ ಎಸ್‌ಎಸ್‌ಎಫ್ ಕೋರ್ಟ್ ಆದೇಶ ಹೊರಡಿಸಿದೆ.
ಗಡಿಯಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕೆಲ ಸೇನಾ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಹಾಗೂ ಯೋಧರಿಗೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನುಖಾಸಗಿ ಸುದ್ದಿ ವಾಹಿನಿಗಳ ಮೂಲಕ ಮಂಜುನಾಥ್ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸಮರಿ ಸೆಕ್ಯುರಿಟಿ ಫೋರ್ಸ್‌ನ ನ್ಯಾಯಾಧಿಕಾರಿ ಕಮಾಂಡೆಂಟ್ ವಿ. ಬಡೋಲಾ ಅವರು ಶಿವಮೊಗ್ಗ ಮೂಲದ ಯೋಧ ಮಂಜುನಾಥ್‌ರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸೇವೆಯಿಂದ ವಜಾಗೊಳಿಸಿದ ನಂತರ ಪ್ರತಿಕ್ರಿಯಿಸಿರುವ ಮಂಜುನಾಥ್, 'ತಾವು ನೀಡಿದ ದೇಶದ್ರೋಹದ ಆರೋಪಗಳ ಬಗ್ಗೆ ಸರಿಯಾಗಿ ತನಿಖೆ ಮಾಡದೇ ನಾನು ಮೇಲಾಧಿಕಾರಿಗಳ ಮೇಲೆ ಕೈಮಾಡಿದ್ದೇನೆ ಮತ್ತು ಕೆಟ್ಟ ಮಾತುಗಳಿಂದ ಬೈದಿದ್ದೇನೆ ಎಂಬ ಆರೋಪದ ಮೇಲೆ ವಿಚಾರಣೆ ನಡೆಸಿ ನನ್ನನ್ನು ವಜಾ ಮಾಡಿದ್ದಾರೆ' ಎಂದು ಮಂಜುನಾಥ್ ಆರೋಪಿಸಿದ್ದಾರೆ.

ಯೋಧ ಮಂಜುನಾಥ್ ಅವರು ಗಡಿಯಲ್ಲಿ ನಡೆಯುತ್ತಿದ್ದ ಅವ್ಯವಹರಗಳ ಕುರಿತಾಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ, ಹಿರಿಯ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಅಕ್ರಮ ನುಸುಳುವಿಕೆ, ಪ್ರಾಣಿಗಳ ಸಾಗಾಟ, ಕಿರಿಯ ಅಧಿಕಾರಿಗಳಿಗೆ ಕಿರುಕುಳ ಮುಂತಾದ ಗಂಭೀರವುಳ್ಳ ವಿಡಿಯೋವನ್ನು ಮಾಧ್ಯಮಗಳಿಗೆ ಯೋಧ ಮಂಜುನಾಥ್ ಕಳಿಸಿದ್ದರು.
ಹಿರಿಯ ಅಧಿಕಾರಿಗಳು ಗಡಿಯಲ್ಲಿ ನಡೆಯುವ ಅಕ್ರಮಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತದೊಳಗೆ ದನ ಹಾಗೂ ಒಂಟೆಗಳನ್ನು ಸಾಗಿಸುತ್ತಿರುವ ದೃಶ್ಯಾವಳಿಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಟಿವಿ9 ಸುದ್ದಿ ವಾಹಿನಿಗೆ ನೀಡಿದ್ದ ವಿಡಿಯೋ ತುಣುಕು ಹೀಗಿದೆ ನೋಡಿ...












Click it and Unblock the Notifications