10 ಗಂಟೆ ಏಣಿ ಮೇಲೆ ನಿಂತು ಬೈಕ್ ಓಡಿಸಿ ವಿಶ್ವದಾಖಲೆ
ನವದೆಹಲಿ, ಏಪ್ರಿಲ್ 25: ಮೋಟಾರ್ಬೈಕ್ಗೆ ಅಳವಡಿಸಿದ ಏಣಿ ಮೇಲೆ ನಿಂತು ನಿರಂತರವಾಗಿ 10 ಗಂಟೆ 37 ನಿಮಿಷ 27 ಸೆಕೆಂಡ್ ಬೈಕ್ ಓಡಿಸಿದ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧರು ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಬಿಎಸ್ಎಫ್ನ 'ಜನ್ಬಾಜ್' ತಂಡದ ಇನ್ಸ್ಪೆಕ್ಟರ್ ಅವದೇಶ್ ಕುಮಾರ್ ಸಿಂಗ್ ಮತ್ತು ಹೆಡ್ ಕಾನ್ಸ್ಟೆಬಲ್ ದುರ್ವೇಶ್ ಕುಮಾರ್ ಮಂಗಳವಾರ 350 ಸಿಸಿ ಸಾಮರ್ಥ್ಯದ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ಗೆ ಅಳವಡಿಸಿದ 16.5 ಅಡಿ ಎತ್ತರದ ಏಣಿಯಲ್ಲಿ ನಿಂತು ಸತತವಾಗಿ ಚಾಲನೆ ಮಾಡಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಹೆಸರು ದಾಖಲಿಸಿದ್ದಾರೆ.
Inspector Awdhesh Kumar Singh and Head Constable Durvesh Kumar of BSF motorcycle trick riding team "Janbaz" set a new world record when they rode for 10 hours 34 minutes 27 seconds continuously on a 16 feet 5 inch tall ladder fitted to their motorcycles pic.twitter.com/uXp5qLwVQq
— ANI (@ANI) 25 April 2018
ದೆಹಲಿಯ ಚಾವ್ಲಾ ಬಿಎಸ್ಎಫ್ ಶಿಬಿರದಲ್ಲಿ ಈ ದಾಖಲೆ ನಿರ್ಮಿಸಲಾಗಿದೆ. ಭಾರತದ ಸೇನಾ ಪಡೆಯೇ ಈ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಬಿಎಸ್ಎಫ್ ಮುರಿದಿದೆ. ಸೇನಾ ಪಡೆಯು 9 ಗಂಟೆ 4 ನಿಮಿಷ 5 ಸೆಕೆಂಡ್ ಬೈಕ್ ಓಡಿಸಿ ದಾಖಲೆ ಮಾಡಿತ್ತು.
ಏಪ್ರಿಲ್ 13ರಂದು 36 ಯೋಧರನ್ನು ಹೊತ್ತ ಮೂರು ಬೈಕ್ಗಳು ಒಂದು ಕಿ.ಮೀ. ದೂರವನ್ನು ಕೇವಲ 55.52 ಸೆಕೆಂಡ್ಗಳಲ್ಲಿ ಕ್ರಮಿಸಿದ್ದವು ಎಂದು ಬಿಎಸ್ಎಫ್ ಹೇಳಿಕೆ ತಿಳಿಸಿದೆ.
'ಜನ್ಬಾಜ್' ತಂಡವನ್ನು 1990ರಲ್ಲಿ ನಿರ್ಮಿಸಲಾಯಿತು. ಗುರುತ್ವಾಧಾರಿತ ಸ್ಟಂಟ್ಗಳನ್ನು ಮಾಡುವಲ್ಲಿ ಈ ತಂಡ ಪ್ರಸಿದ್ಧಿ ಪಡೆದಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications