ಯೋಧನನ್ನು ಬಲಿ ಪಡೆದ ಪಾಕ್ ಅಪ್ರಚೋದಿತ ಗುಂಡಿನ ದಾಳಿ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ಸೆಪ್ಟೆಂಬರ್ 15: ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಗಡಿ ಭದ್ರತಾ ಪಡೆಯ ಯೋಧರೊಬ್ಬರು ಅಸು ನೀಗಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿನ ಟಾಪ್ 5 ಉಗ್ರರ ಪಟ್ಟಿ

ಶುಕ್ರವಾರ ಮುಂಜಾಣೆ ಅರ್ನಿಯಾ ಭಾಗದಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿದ್ದು, ಗುಂಡು ತಾಗಿ ಬಿಎಸ್ಎಫ್ ಜವಾನ ಬ್ರಿಜೇಂದ್ರ ಬಹದ್ದೂರ್ ಗಂಭೀರ ಗಾಯಗೊಂಡಿದ್ದರು.

BSF jawan martyred in cease fire violation by Pakistan

ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಸಲಾಯಿತಾದರೂ ಅಷ್ಟರಲ್ಲಾಗಲೇ ಅಸುನೀಗಿದ್ದಾರೆ. ಇನ್ನು ಘಟನೆಯಲ್ಲಿ ನಾಗರೀಕರೊಬ್ಬರಿಗೂ ಗಾಯಗಳಾಗಿವೆ. ಪಾಕಿಸ್ತಾನದ ದಾಳಿಗೆ ಭಾರತವೂ ಪ್ರತಿಕ್ರಿಯೆ ನೀಡಿದ್ದು ವೈರಿ ರಾಷ್ಟ್ರದ ಯತ್ನವನ್ನು ಹಿಮ್ಮೆಟಿಸಿದೆ.

ಇನ್ನು ಜಮ್ಮು ಮತ್ತು ಕಾಶ್ಮೀರದ ಆರ್.ಎಸ್ ಪುರದಲ್ಲಿರುವ ಬ್ರಿಜೇಂದ್ರ ಬಹದ್ದೂರ್ ಮನೆಯಲ್ಲಿ ಮಗನನ್ನು ಕಳೆದುಕೊಂಡ ತಂದೆ ತಾಯಂದಿರ ರೋಧನೆ ಮುಗಿಲುಮುಟ್ಟಿದೆ.

ಚಳಿಗಾಲ ಸಮೀಪಿಸುತ್ತಿದ್ದಂತೆ ಈ ರೀತಿಯ ಘಟನೆಗಳ ಹೆಚ್ಚಾಗಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಕುತಂತ್ರಿ ಪಾಕಿಸ್ತಾನದ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಸೇನೆಯ ಗಮನವನ್ನು ಅತ್ತ ಸೆಳೆದು ಉಗ್ರರನ್ನು ಭಾರತದೊಳಕ್ಕೆ ನುಸುಳಲು ಸಹಾಯ ಮಾಡುತ್ತದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆಯಲ್ಲಿ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
One jawan has been martyred in Pakistan firing at the Arnia sector in Jammu and Kashmir. There was a cease fire violation reported early this morning.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ