ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭದ್ರತಾ ಸಿಬ್ಬಂದಿ
ಡ್ರಗ್ಸ್ ಹೊತ್ತು ಭಾರತದ ಗಡಿಯೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಡ್ರೋನ್ ಅನ್ನು ಭಾರತೀಯ ಗಡಿ ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಪಂಜಾಬ್‌ನ ಅಮೃತಸರ ಸೆಕ್ಟರ್‌ನಲ್ಲಿ ಡ್ರೋನ್ ಅನ್ನು ಹೊಡೆದುರುಳಿಸಿದ್ದು, ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಿಎಸ್ಎಫ್ ಪಂಜಾಬ್ ಫ್ರಾಂಟಿಯರ್ ಈ ಕಾರ್ಯಾಚರಣೆ ನಡೆಸಿದೆ. ಮಾದಕ ವಸ್ತುಗಳ ಮಾರಾಟಗಾರರು ಡ್ರೋನ್ ಮೂಲಕ ಭಾರತದೊಳಕ್ಕೆ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದ್ದು ಇದೇ ಮೊದಲನೇನಲ್ಲ ಹಲವು ಬಾರಿ ಇಂತಹ ಪ್ರಯತ್ನಗಳನ್ನು ಮಾಡಿದ್ದು, ಸೇನೆ ಅದನ್ನು ವಿಫಲಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದ 6ನೇ ಡ್ರೋನ್ ಇದಾಗಿದೆ.

24 ಗಂಟೆಗಳ ಹಿಂದಷ್ಟೇ ಮತ್ತೊಂದು ಡ್ರೋನ್ ವಶಸಕ್ಕೆ
ಇನ್ನು 24 ಗಂಟೆಗಳ ಹಿಂದಷ್ಟೇ ಮತ್ತೊಂದು ಡ್ರೋನ್ ಅನ್ನು ಭದ್ರತಾ ಸಿಬ್ಬಂದಿ ಪಡೆ ವಶ ಪಡಿಸಿಕೊಂಡಿತ್ತು. ಗ್ರಾಮದ ಕಡೆಗೆ ಮೂವರು ವ್ಯಕ್ತಿಗಳು ಓಡುತ್ತಿರುವುದನ್ನು ಕಂಡ ಭದ್ರತಾ ಸಿಬ್ಬಂದಿ ಅವರನ್ನು ಬೆನ್ನಟ್ಟಿದಾಗ, 3.4 ಕೆಜಿಯ ಮೂರು ಪ್ಯಾಕೆಟ್‌ಗಳ ಶಂಕಿತ ಮಾದಕವಸ್ತುಗಳ ಮತ್ತು ಡ್ರೋನ್ ಸಿಕ್ಕಿತ್ತು.
ಮೇ 20 ರಂದು ಕೂಡ ಅಮೃತಸರದಲ್ಲಿ ಡ್ರೋನ್ ಅನ್ನು ಹೊಡೆದುರುಳಿಸಲಾಗಿತ್ತು. ಕಳೆದ ವಾರ ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ಅಧಿಕಾರಿಗಳು ನಾಲ್ಕು ಪಾಕಿಸ್ತಾನಿ ಡ್ರೋನ್‌ಗಳನ್ನು ತಡೆದು ಅವುಗಳಲ್ಲಿ ಮೂರನ್ನು ಹೊಡೆದುರುಳಿಸಿದ್ದನ್ನು ಇಲ್ಲಿ ನೆನಪಸಿಕೊಳ್ಳಬಹುದು.
ಮೊದಲ ಡ್ರೋನ್ "ಡಿಜಿಐ ಮ್ಯಾಟ್ರಿಸ್ 300 ಆರ್ ಟಿಕೆ" ತಯಾರಿಕೆಯ ಕಪ್ಪು ಕ್ವಾಡ್ಕಾಪ್ಟರ್ ಆಗಿತ್ತು. ಎರಡನೆಯದು ಕೂಡ ಅದೇ ತಯಾರಿಕೆಯಾಗಿದ್ದು, ಅಮೃತಸರ ಜಿಲ್ಲೆಯ ರತ್ತನ್ ಖುರ್ದ್ ಗ್ರಾಮದಿಂದ ವಶಪಡಿಸಿಕೊಳ್ಳಲಾಗಿತ್ತು. ಮೂರನೇ ಡ್ರೋನ್ ಅನ್ನು ಹೊಡೆದುರುಳಿಸಲಾಯಿತು ಆದರೆ ಅದು ಪಾಕಿಸ್ತಾನದ ಕಡೆ ಬಿದ್ದಿದ್ದರಿಂದ ಅದನ್ನು ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ.












Click it and Unblock the Notifications