ವಿದ್ಯಾಭ್ಯಾಸಕ್ಕಾಗಿ ಯುಕೆಗೆ ಹೋಗುವ ಭಾರತೀಯರಿಗೆ ಬ್ರಿಟಿಷ್ ಸರ್ಕಾರದ ಗಿಫ್ಟ್
ನವದೆಹಲಿ, ಸೆಪ್ಟೆಂಬರ್ 11: ಬ್ರಿಟಿಷ್ ಸರ್ಕಾರವು ಯುಕೆಗೆ ಬಂದು ವಿದ್ಯಾಭ್ಯಾಸ ಮಾಡುವ ಕನ್ನಡಿಗರಿಗೆ ಹೊಸದೊಂದು ಅವಕಾಶ ಸೃಷ್ಟಿಸಿದೆ.
ಪದವಿ ಶಿಕ್ಷಣ ಮುಗಿದ ಮೇಲೂ ಎರಡು ವರ್ಷಗಳ ಕಾಲ ಯುಕೆಯಲ್ಲಿ ಕೆಲಸ ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಮೊದಲು ತಮ್ಮ ವಿದ್ಯಾಭ್ಯಾಸ ಮುಗಿದ ಕೂಡಲೇ ವಿದ್ಯಾರ್ಥಿಗಳು ಯುಕೆ ಬಿಟ್ಟು ಭಾರತಕ್ಕೆ ಬರಬೇಕಿತ್ತು. ಆದರೆ ಎರಡು ವರ್ಷಗಳ ಕಾಲ ಉದ್ಯೋಗ ಮಾಡಲು ಅವಕಾಶ ನೀಡಿರುವುದರಿಂದ ವಿದ್ಯಾರ್ಥಿಗಳು ದೇಶದ ಹಲವು ಕಡೆ ಸುತ್ತಾಡುವ ಅವಕಾಶವೂ ಲಭಿಸಲಿದೆ.

ಎರಡು ವರ್ಷಗಳ ಪೋಸ್ಟ್ ಸ್ಟಡಿ ವರ್ಕ್ ವೀಸಾವನ್ನು ಎಲ್ಲಾ ವಿದೇಶಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ. 2020-21ರಲ್ಲಿ ವಿದ್ಯಾಭ್ಯಾಸಕ್ಕಾಗಿ ಯಾರು ಯುಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಆ ವಿದ್ಯಾರ್ಥಿಗಳಿಗೆ ಈ ಅವಕಾಶ ದೊರೆಯಲಿದೆ.
2019ರವರೆಗೆ 22 ಸಾವಿರ ಭಾರತೀಯ ವಿದ್ಯಾರ್ಥಿಗಳು ಯುಕೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಈ ಕುರಿತು ಬ್ರಿಟಿಷ್ ಹೈ ಕಮಿಷನರ್ ಡೊಮೆನಿಕ್ ಆಸ್ಕ್ವಿತ್ ಮಾತನಾಡಿ, ಇದು ಭಾರತೀಯ ವಿದ್ಯಾರ್ಥಿಗಳಿಗೆ ಸಂತಸದ ವಿಚಾರವಾಗಿದೆ. ವಿದ್ಯಾರ್ಥಿಗಳು ಹೆಚ್ಚು ದಿನಗಳ ಕಾಲ ಯುಕೆಯಲ್ಲಿ ಕಳೆಯಬಹುದಾಗಿದೆ. ಜೊತೆಗೆ ಉತ್ತಮ ತರಬೇತಿ ಕೂಡ ದೊರೆಯಲಿದೆ ಎಂದಿದ್ದಾರೆ.












Click it and Unblock the Notifications