ಮಣಿಪುರ ಹಿಂಸಾಚಾರ ವಿಚಾರದಲ್ಲಿ ಪ್ರಧಾನಿ ಮೋದಿ ದೇಶದ ದಾರಿ ತಪ್ಪಿಸುತ್ತಿದ್ದಾರೆ: ಬೃಂದಾ ಕಾರಟ್ ಆರೋಪ

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸುವಂತೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ (ಸಿಪಿಐಎಂ) ನಾಯಕಿ ಬೃಂದಾ ಕಾರಟ್ ಒತ್ತಾಯಿಸಿದ್ದಾರೆ. ಮಣಿಪುರ ಜನಾಂಗೀಯ ಹಿಂಸಾಚಾರದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಹಲವು ತಿಂಗಳ ಹಿಂಸಾಚಾರದ ಪರಿಣಾಮ ಆರ್ಥಿಕತೆಯು ಸಂಪೂರ್ಣವಾಗಿ ಕುಸಿದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಮಣಿಪುರ ಹಿಂಸಾಚಾರದ ಬಗ್ಗೆ ಮಾತನಾಡಿದ ಬೃಂದಾ ಕಾರಟ್, "ಭಾರತದ ಜನರು ಮಣಿಪುರದ ಜನರೊಂದಿಗೆ ಇದ್ದಾರೆ ಎಂದು ಪ್ರಧಾನಿ ಹೇಳಿದರು. ವಾಸ್ತವದಲ್ಲಿ 'ಡಬಲ್ ಇಂಜಿನ್ ಸರ್ಕಾರ' ರಾಜ್ಯದ ಜನರ ಜೊತೆ ಅವರೊಂದಿಗೆ ಇಲ್ಲ. ರಾಜ್ಯವು ಭೌಗೋಳಿಕವಾಗಿ ಮತ್ತು ಭಾವನಾತ್ಮಕವಾಗಿ ಸಮುದಾಯಗಳ ನಡುವೆ ವಿಂಗಡಿಸಲಾಗಿದೆ" ಎಂದು ಆರೋಪಿಸಿದರು.

 Brinda Karat Accuses PM Narendra Modi of Misleading the Nation Regarding Manipur Violence

ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರು ಸತ್ಯವನ್ನು ಹೇಳುತ್ತಿಲ್ಲ ಮತ್ತು ಮಣಿಪುರದ ಜನರಿಗೆ ಅನ್ಯಾಯವನ್ನು ಮಾಡುತ್ತಿದ್ದಾರೆ, ಮಣಿಪುರ ಹಿಂಸಾಚಾರ ವಿಚಾರದಲ್ಲಿ ಡಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ, ಎಂದು ಅವರು ಹೇಳಿದರು.

ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ (ಎಐಡಿಡಬ್ಲ್ಯುಎ) ನಿಯೋಗವು ಮಣಿಪುರಕ್ಕೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾವು ನೋಡಿದ, ಕೇಳಿದ ವಿಚಾರಗಳನ್ನು ವಿವರಿಸಲು ಬೃಂದಾ ಕಾರಟ್ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ನೊಂದವರಿಗೆ ನ್ಯಾಯ ಸಿಗುತ್ತಿಲ್ಲ

ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಇನ್ನೂ ನ್ಯಾಯವನ್ನು ಒದಗಿಸಲು ಆಗಿಲ್ಲ ಮತ್ತು ಮಣಿಪುರ ಸಿಎಂ ಏನೂ ಮಾಡುತ್ತಿಲ್ಲ ಎಂದು ಬೃಂದಾ ಕಾರಟ್ ಹೇಳಿದರು. "ನಾವು ನೋಡಿದಂತೆ ಮಣಿಪುರದಲ್ಲಿ ನ್ಯಾಯಕ್ಕೆ ದೊಡ್ಡ ತಡೆಗೋಡೆ ಸಿಎಂ ಅವರೇ ಆಗಿದ್ದಾರೆ. ನಾವು ಮಾತನಾಡಿದ ಜನ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಭದ್ರತೆ ಇಲ್ಲವಾಗಿದೆ, ಮಣಿಪುರ ತೀವ್ರ ಸಂಕಷ್ಟದಲ್ಲಿದೆ. ಸಿಎಂ ತಪ್ಪನ್ನು ಪತ್ತೆ ಹಚ್ಚಬೇಕು. ಸರ್ಕಾರ, ಆಡಳಿತ ಮತ್ತು ಪೊಲೀಸರ ನಂಬಿಕೆ ದ್ರೋಹ ಜನರ ಮನಸ್ಸಿಗೆ ಧಕ್ಕೆ ತಂದಿದೆ. ಈ ಮುಖ್ಯಮಂತ್ರಿಯನ್ನು ತೆಗೆದುಹಾಕುವವರೆಗೂ ಜನರಿಗೆ ಯಾವ ಭರವಸೆಯೂ ಇರುವುದಿಲ್ಲ" ಎಂದು ಕಾರಟ್ ಹೇಳಿದರು.

ಸಿಪಿಐಎಂ ನಿಯೋಗವು ತನ್ನ ವರದಿಯನ್ನು ಸಲ್ಲಿಸಲು ಅಧ್ಯಕ್ಷೆ ದ್ರೌಪದಿ ಮುರ್ಮು ಅವರಿಂದ ಸಮಯಾವಕಾಶ ಕೇಳಿದೆ. ಕಾರಟ್ ಅವರು AIDWA ಅಧ್ಯಕ್ಷೆ ಪಿಕೆ ಶ್ರೀಮತಿ ಮತ್ತು ಪ್ರಧಾನ ಕಾರ್ಯದರ್ಶಿ ಮರಿಯಮ್ ಧನವಾಲೆ ಅವರೊಂದಿಗೆ ಮಣಿಪುರದಲ್ಲಿ ಮೂರು ದಿನಗಳ ಕಾಲ ಹಿಂಸಾಚಾರ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.

ಹಣ, ಆಹಾರ ಧಾನ್ಯ ನೀಡಲು ಒತ್ತಾಯ

ಮಣಿಪುರ ಪರಿಸ್ಥಿತಿಗೆ ರಾಜಕೀಯ ಪರಿಹಾರದ ಅಗತ್ಯವಿದೆ; ಒಳ್ಳೆಯ ಮಾತುಗಳನ್ನು ಆಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ, ಎಂದು ಅವರು ಹೇಳಿದರು. ಮಣಿಪುರದ ಆಧಾರ್ ಕಾರ್ಡ್ ಹೊಂದಿರುವವರಿಗೆ ನೇರ ನಗದು ವರ್ಗಾವಣೆ-ರಾಜ್ಯದಲ್ಲಿ ಉಚಿತ ಆಹಾರ ಧಾನ್ಯಗಳನ್ನು ವಿತರಿಸುವಂತೆ ಮನವಿ ಮಾಡಿದರು.

"ಅಲ್ಲಿನ ಹೆಚ್ಚಿನ ಕಾರ್ಮಿಕರು ಅಸಂಘಟಿತ ವಲಯದಿಂದ ಬಂದವರು. ರಸ್ತೆ, ಅಂಗಡಿಗಳನ್ನು ಮುಚ್ಚಲಾಗಿದೆ. ಕೆಲಸವಿಲ್ಲ. ಎರಡು ಕಡೆಯ ಹೆಂಗಸರು ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡ್ತಿದ್ದೀವಿ ಅಂತ ಹೇಳಿದ್ದಾರೆ. ಬೆಟ್ಟ/ಬುಡಕಟ್ಟು ಪ್ರದೇಶಗಳಲ್ಲಿ ಆಹಾರ ಧಾನ್ಯಗಳು ತಲುಪುತ್ತಿಲ್ಲ. ಟ್ರಕ್‌ಗಳು (ಆಹಾರ ಧಾನ್ಯಗಳನ್ನು ಸಾಗಿಸುವ) ಮಿಜೋರಾಂ ಮೂಲಕ ಬರಬೇಕು. ತಲುಪಲು 15 ಗಂಟೆ ತೆಗೆದುಕೊಳ್ಳುತ್ತದೆ. ಆರ್ಥಿಕ ರಂಗದಲ್ಲಿ ಕೆಲವು ರೀತಿಯ ತುರ್ತು ಪರಿಸ್ಥಿತಿ ಇದೆ," ಎಂದು ಮಣಿಪುರ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+