ಶ್ರೀಮಂತ ಉದ್ಯಮಿ ಅದಾನಿ ಸಂಸ್ಥೆಯ ಷೇರುಗಳು ಪಾತಾಳಕ್ಕೆ! ಕಾರಣ ತಿಳಿಯಿರಿ
ಭಾರತೀಯ ಷೇರು ಮಾರುಕಟ್ಟೆ ಮತ್ತೊಮ್ಮೆ ನಲುಗಿ ಹೋಗಿದೆ. ಪದೇ, ಪದೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿ ಆಗುತ್ತಿರುವುದು ಹೂಡಿಕೆ ಮಾಡುವವರಿಗೆ ಈ ಸಮಯದಲ್ಲಿ ನಿದ್ದೆಗೆಡಿಸಿದೆ. ಅದರಲ್ಲೂ ಭಾರತದ ಶ್ರೀಮಂತ ಉದ್ಯಮಿ ಅದಾನಿ ಸಂಸ್ಥೆಯ ಷೇರುಗಳು ಪಾತಾಳಕ್ಕೆ ಕುಸಿದು ಬಿದ್ದಿದ್ದು, ದೊಡ್ಡ ಸಮಸ್ಯೆ ತಲೆಮೇಲೆ ಬಂದಂತೆ ಆಗಿದೆ. ಹಾಗಾದ್ರೆ ಅದಾನಿ ಸಂಸ್ಥೆ ಷೇರುಗಳಿಗೆ ಏನಾಯ್ತು? ಎಷ್ಟು ಪ್ರಮಾಣದಲ್ಲಿ ಕುಸಿತ ಆಗಿದೆ? ಬನ್ನಿ ತಿಳಿಯೋಣ.
ಅಷ್ಟಕ್ಕೂ ಸೌರ ಶಕ್ತಿ ಗುತ್ತಿಗೆ ಒಪ್ಪಂದ ಸಂಬಂಧ ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಹೀಗೆ ಆರೋಪ ಕೇಳಿ ಬಂದ ನಂತರ ಸಂಚಲನ ಇದೀಗ ಸೃಷ್ಟಿಯಾಗಿದೆ. ಈ ಪ್ರಕರಣದಲ್ಲಿ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧ ಅಮೆರಿಕದ ಕೋರ್ಟ್ ಅರೆಸ್ಟ್ ವಾರೆಂಟ್ ಕೂಡ ಹೊರಡಿಸಿದೆ. ಇದೇ ವಿಚಾರ ಇದೀಗ ಭಾರತದ ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿ ಮಾಡಿಬಿಟ್ಟಿದೆ.

ಅದಾನಿ ಸಂಸ್ಥೆ ಷೇರುಗಳು ನೆಲಕ್ಕೆ!
ಭಾರತದ ಷೇರು ಪೇಟೆ ಇಂದು ತನ್ನ ವಹಿವಾಟು ಶುರು ಮಾಡಿದ ಸಮಯದಲ್ಲಿ ಪರಿಸ್ಥಿತಿ ಹೇಗೆ ಆಗಿತ್ತು ಅಂದ್ರೆ ಒಂದು ಸಮಯದಲ್ಲಿ ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ ಸೇರಿ ಅದಾನಿ ಸಂಸ್ಥೆಗೆ ಸೇರಿದ ಬಹುತೇಕ ಎಲ್ಲಾ ಷೇರುಗಳು ಲೋವರ್ ಸರ್ಕ್ಯೂಟ್ ಅಂದ್ರೆ ಕೆಳಕ್ಕೆ ಕುಸಿದು ಬಿದ್ದವು. ಹೀಗೆ ಸುಮಾರು ಶೇಕಡಾ 20 ರಿಂದ 25 ರಷ್ಟು ಷೇರುಗಳ ಕುಸಿತ ಇಡೀ ಮಾರುಕಟ್ಟೆಗೆ ಆಘಾತ ನೀಡಿದೆ. ಇತ್ತೀಚಿನ ಮಾಹಿತಿ ಪ್ರಕಾರ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಸುಮಾರು 2,234 ರೂಪಾಯಿ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿವೆ.
ಹಿಂಡನ್ ಬರ್ಗ್ ವರದಿಯ ಸಮಯದಲ್ಲೂ...
ಅದಾನಿ ಸಂಸ್ಥೆ ಷೇರುಗಳು ಈ ರೀತಿ ಕುಸಿದು ಬೀಳುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆ ಕೂಡ ಇದೇ ರೀತಿ ಅದಾನಿ ಸಂಸ್ಥೆ ಷೇರುಗಳು ಕುಸಿದು ಬಿದ್ದಿವೆ. ಅದರಲ್ಲೂ ಹಿಂಡನ್ ಬರ್ಗ್ ಸಂಸ್ಥೆ ಅದಾನಿ ಸಮೂಹ ಸಂಸ್ಥೆಗಳ ಬಗ್ಗೆ ನೀಡಿದ್ದ ವರದಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಅಲ್ಲದೆ ಆ ಸಮಯದಲ್ಲಿ ಕೂಡ ಅದಾನಿ ಸಂಸ್ಥೆ ಷೇರುಗಳು ಕುಸಿದು ಬಿದ್ದವು. ಇದೀಗ ಮತ್ತೆ ಅಂತಹದ್ದೇ ಪರಿಸ್ಥಿತಿ ಬಂದಿದೆ.
ಒಟ್ನಲ್ಲಿ ಭಾರತೀಯ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಇಂದು ದೊಡ್ಡ ಆಘಾತ ಎದುರಾಗಿ ತಲ್ಲಣ ಸೃಷ್ಟಿಯಾಗಿದೆ. ಹಾಗೇ ಈ ವಿಚಾರ ದೊಡ್ಡ ಚರ್ಚೆಗೆ ಕೂಡ ವೇದಿಕೆಯನ್ನ ಇದೀಗ ಸೃಷ್ಟಿ ಮಾಡಿದೆ. ಮತ್ತೊಂದು ಕಡೆ ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆದಾರರ ಹಣ ಕೊಚ್ಚಿಕೊಂಡು ಹೋಗಿದೆ.












Click it and Unblock the Notifications