BREAKING: ಪನಾಮಾ ಪೇಪರ್ಸ್ ಹಗರಣ: ಐಶ್ವರ್ಯಾ ರೈಗೆ ಇಡಿ ಸಮನ್ಸ್‌

ಮುಂಬೈ, ಡಿಸೆಂಬರ್‌ 20: ವಿಶ್ವದಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಪನಾಮ ಪೇಪರ್ಸ್ ಹಗರಣಕ್ಕೆ ಸಂಬಂಧಿಸಿ ಖ್ಯಾತ ನಟಿ ಐಶ್ವರ್ಯಾ ರೈ ಗೆ ಇಂದು ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್‌ ನೀಡಿದೆ. ಇಂದು ನಟಿ ಐಶ್ವರ್ಯಾ ರೈ ಲೋಕನಾಯಕ್‌ ಭವನದಲ್ಲಿ ಇಡಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವ ಸಾಧ್ಯತೆ ಇದೆ.

ಜಾರಿ ನಿರ್ದೇಶನಾಲಯವು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮನಿ ಲಾಂಡರಿಂಗ್ ತಡೆ ಕಾಯಿದೆ, 2002 (PMLA) ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿದೆ. ಪನಾಮಾ ಪೇಪರ್ಸ್ ಪ್ರಕರಣದಲ್ಲಿ ವಿದೇಶದಲ್ಲಿ ಸಂಪತ್ತನ್ನು ಸಂಗ್ರಹಿಸಿರುವ ಆರೋಪದ ಮೇಲೆ ನಟಿ ಐಶ್ವರ್ಯಾ ರೈಗೆ ಈಗ ಸಮನ್ಸ್‌ ನೀಡಲಾಗಿದೆ.

ಪನಾಮ ಪೇಪರ್ಸ್ ಎಂಬ ರಹಸ್ಯ ಪಟ್ಟಿಯಲ್ಲಿ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯಾ ಸೇರಿದಂತೆ ಸುಮಾರು 500 ಪ್ರಮುಖ ಭಾರತೀಯರ ಹೆಸರುಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರುಗಳಿವೆ. ಪನಾಮಾ ಪೇಪರ್ಸ್ ದಾಖಲೆಯಲ್ಲಿ ಸುಮಾರು 11.5 ಮಿಲಿಯನ್ ಗೌಪ್ಯ ದಾಖಲೆಗಳು ಇದೆ. ಮೊಸಾಕ್ ಫೋನ್ಸೆಕಾ ಎಂಬ ಕಾನೂನು ಸಂಸ್ಥೆಯು ಜಗತ್ತಿನ ನಾಲ್ಕನೇ ಅತಿ ದೊಡ್ಡ ಸಂಸ್ಥೆ. ಆ ಸಂಸ್ಥೆಯು ಈ ದಾಖಲೆಯನ್ನು ಬಹಿರಂಗ ಪಡಿಸಿದ್ದು ಹನ್ನೊಂದೂವರೆ ಮಿಲಿಯನ್ ನಷ್ಟು ಅವ್ಯವಹಾರದ ದಾಖಲೆಗಳು ಇದರಲ್ಲಿ ಇದೆ.

BREAKING: Panama Paper Leak Case: Aishwarya Rai Summoned by ED

ಈ ಎಲ್ಲ ದಾಖಲೆಗಳನ್ನು ಅಪರಿಚಿತ ಮೂಲಗಳಿಂದ ಜರ್ಮನ್ ನ ಪತ್ರಿಕೆಯೊಂದು ಪಡೆದಿದ್ದು, ಆ ನಂತರ ಅಂತರರಾಷ್ಟ್ರೀಯ ಮಟ್ಟದ ತನಿಖಾ ಪತ್ರಕರ್ತರ ಒಕ್ಕೂಟದ ಜತೆಗೆ ಹಂಚಿಕೊಂಡಿದೆ. ಆ ಒಕ್ಕೂಟವು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಜತೆಗೆ ಮಾಹಿತಿಯನ್ನು ಹಂಚಿಕೊಂಡಿದೆ. ಈ ಪಟ್ಟಿಯಲ್ಲಿ ಸುಮಾರು 500 ಪ್ರಮುಖ ಭಾರತೀಯರ ಹೆಸರುಗಳು ಇದೆ.

ಜಗತ್ತಿನ ನಾಲ್ಕನೇ ಅತಿ ದೊಡ್ಡ ಸಂಸ್ಥೆಯಾದ ಅಮೆರಿಕದ ಪನಾಮಾದ ಸಂಸ್ಥೆಯೊಂದು ವಿಶ್ವದಲ್ಲೆಡೆ ಇರುವ ಹಲವಾರು ಕ್ಷೇತ್ರದ ಗಣ್ಯರ ಪಟ್ಟಿಯನ್ನು ಕೆಲವು ವರ್ಷಗಳ ಹಿಂದೆ ಹೊರ ಹಾಕಿದೆ. ಪನಾಮ ದೇಶದ ಮೂಲದ ಕಾನೂನು ಸಂಸ್ಥೆಯಾದ ಮೊಸಾಕ್ ಫೋನ್ಸೆಕಾ ವಿದೇಶಗಳಲ್ಲಿ ಕಂಪೆನಿ ನೋಂದಣಿ ಮಾಡಿಸುವುದಕ್ಕೆ ಸೇವೆ ಒದಗಿಸುತ್ತದೆ. ವಾರ್ಷಿಕ ಶುಲ್ಕ ಪಡೆದು ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ಹಣಕಾಸು ನಿರ್ವಹಣೆ ಸೇವೆಯನ್ನೂ ಜತೆಗೆ ಒದಗಿಸುತ್ತದೆ. ಈ ಸಂಸ್ಥೆಯು ಈ ದಾಖಲೆಗಳನ್ನು ಹೊರಹಾಕಿದೆ. ಈ ಈ ಪಟ್ಟಿಯಲ್ಲಿ 500ಕ್ಕೂ ಅಧಿಕ ಭಾರತ ಮೂಲದ ಗಣ್ಯರ ಹೆಸರಿದೆ. ಪನಾಮಾದ ಸಂಸ್ಥೆ ಮೊಸಾಕ್ ಫೋನೆಸ್ಕಾ ಸಂಗ್ರಹಿಸಿರುವ 11.5 ಮಿಲಿಯನ್ ದಾಖಲೆ ಪ್ರಕಾರ ಅನೇಕ ಗಣ್ಯಾತಿಗಣ್ಯರ ವಿದೇಶಿ ಗುಪ್ತನಿಧಿ ಖಾತೆಗಳ ವಿವರ ಇದೆ. ಸುಮಾರು 35ದೇಶಗಳಲ್ಲಿ ತನ್ನ ಕೇಂದ್ರವನ್ನು ಮೊಸಾಕ್ ಸಂಸ್ಥೆ ಹೊಂದಿದ್ದು ಇದು ಬಹಿರಂಗಪಡಿಸಿದ ಪಟ್ಟಿಯಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್, ಇರಾಕ್ ನ ಮಾಜಿ ಉಪರಾಷ್ಟ್ರಪತಿ ಅಯಾದ್ ಅಲ್ಲವಿ, ಉಕ್ರೇನ್ ನ ರಾಷ್ಟ್ರಪತಿ ಪೆಟ್ರೋ ಪೊರೊಶೆಂಕೋ, ಈಜಿಪ್ಟ್ ನ ಮಾಜಿ ರಾಷ್ಟ್ರಪತಿಯ ಮಗ ಅಲಾ ಮುಬಾರಕ್, ಐಸ್ ಲ್ಯಾಂಡ್ ನ ಪ್ರಧಾನಿಯ ಹೆಸರುಗಳು ಇದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+