ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking news: ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಮಹಾರಾಷ್ಟ್ರದಿಂದ ಪಿಯೂಷ್

|
Google Oneindia Kannada News

ನವದೆಹಲಿ, ಮೇ 29: ಭಾರಿ ಕುತೂಹಲ ಕೆರಳಿಸಿದ್ದ ರಾಜ್ಯಸಭೆ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಭಾನುವಾರ (ಮೇ 29) ಸಂಜೆ ಪ್ರಕಟವಾದ ಪಟ್ಟಿಯಲ್ಲಿ ಅಚ್ಚರಿಯ ಆಯ್ಕೆ ಕಂಡು ಬಂದಿದೆ. ಮುಖ್ಯವಾಗಿ ಕರ್ನಾಟಕದಿಂದ ರಾಜ್ಯಸಭೆ ಚುನಾವಣೆ ಈ ಬಾರಿ ಕೇಂದ್ರ ವಿತ್ತ ಸಚಿವೆ ನಿರ್ಮಲಾರಿಗೆ ಟಿಕೆಟ್ ನೀಡಲಾಗುತ್ತದೆಯೇ? ಇಲ್ಲವೇ? ಎಂಬ ಕುತೂಹಲವಿತ್ತು. ಜೊತೆಗೆ ಬಿಜೆಪಿಯ ಮತ್ತೊಬ್ಬಅಭ್ಯರ್ಥಿ ಯಾರಾಗಬಹುದು ಎಂಬುದರ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಎಲ್ಲ ಊಹಾಪೋಹ ಸುದ್ದಿಗಳಿಗೆ ಗುದ್ದು ಕೊಟ್ಟಿರುವ ಬಿಜೆಪಿ ಹೈಕಮಾಂಡ್, ಕನ್ನಡದ ಖ್ಯಾತ ನಟ ಹಾಗೂ ನವರಸ ನಾಯಕ ಜಗ್ಗೇಶ್ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಟಿಕೆಟ್ ಘೋಷಿಸಿದೆ.

ರಾಜ್ಯಸಭೆ ಚುನಾವಣೆ ನಾಮಪತ್ರ ಸಲ್ಲಿಕೆಗೆ ಇನ್ನೂ ಮೂರು ದಿನ ಬಾಕಿ ಇರುವಂತೆ ಭಾರತೀಯ ಜನತಾ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕರ್ನಾಟಕವೂ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ.

Breaking: ಕರ್ನಾಟಕದಿಂದ ರಾಜ್ಯಸಭೆ ಜಗ್ಗೇಶ್, ನಿರ್ಮಲಾ ಸೀತಾರಾಮನ್‌ಗೆ ಬಿಜೆಪಿ ಟಿಕೆಟ್Breaking: ಕರ್ನಾಟಕದಿಂದ ರಾಜ್ಯಸಭೆ ಜಗ್ಗೇಶ್, ನಿರ್ಮಲಾ ಸೀತಾರಾಮನ್‌ಗೆ ಬಿಜೆಪಿ ಟಿಕೆಟ್

ಉತ್ತರ ಪ್ರದೇಶವೊಂದರಲ್ಲೇ 11 ಸ್ಥಾನಗಳಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ತಲಾ ಆರು ಸ್ಥಾನಗಳಿವೆ. ಬಿಹಾರದಲ್ಲಿ ಐದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ನಾಲ್ಕು ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಯಲಿದೆ. ಕರ್ನಾಟಕದಿಂದ ಬಿಜೆಪಿಯಿಂದ ಎರಡು ಸ್ಥಾನಗಳಿಗೆ ಸ್ಪರ್ಧಿಸಿರುವವರು ಆಯ್ಕೆಯಾಗುವುದು ಖಚಿತವಾಗಿದ್ದು, ಮತ್ತೊಂದು ಸ್ಥಾನವನ್ನು ಕಾಂಗ್ರೆಸ್ ಗಳಿಸಲು ಯತ್ನಿಸುತ್ತಿದ್ದು, ಜೆಡಿಎಸ್ ಬಾಹ್ಯ ಬೆಂಬಲದ ನಿರೀಕ್ಷೆಯಲ್ಲಿದೆ.

BJP releases Candidates list

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೀಗಿದೆ:
ರಾಜ್ಯ-ಅಭ್ಯರ್ಥಿ ಹೆಸರು
ಮಧ್ಯಪ್ರದೇಶ:
1. ಕವಿತಾ ಪಾಟೀದಾರ್

ಕರ್ನಾಟಕ:
2. ನಿರ್ಮಲಾ ಸೀತಾರಾಮನ್
3. ಜಗ್ಗೇಶ್

ಮಹಾರಾಷ್ಟ್ರ
4. ಪಿಯೂಷ್ ಗೋಯೆಲ್
5. ಡಾ. ಅನಿಲ್ ಸುಖ್ ದೇವ್ ರಾವ್ ಬೊಂಡೆ

Piyush goyal

ರಾಜಸ್ಥಾನ
6. ಘನಶ್ಯಾಮ್ ತಿವಾರಿ

ಉತ್ತರ ಪ್ರದೇಶ
7. ಡಾ. ಲಕ್ಷ್ಮಿಕಾಂತ್ ವಾಜಪೇಯಿ
8. ಡಾ. ರಾಧಾಮೋಹನ್ ಅಗರವಾಲ್
9. ಸುರೇಂದ್ರ ಸಿಂಗ್ ನಾಗರ್
10. ಬಾಬುರಾಮ್ ನಿಶಾದ್
11. ದರ್ಶನಾಸಿಂಗ್
12. ಸಂಗೀತಾ ಯಾದವ್

ಉತ್ತರಾಖಂಡ್
13. ಡಾ. ಕಲ್ಪನಾ ಸೈನಿ

ಬಿಹಾರ
14. ಸತೀಶ್ ಚಂದ್ರ ದುಬೆ
15. ಶಂಭ ಶರಣ್ ಪಟೇಲ್

Recommended Video

ಇಡೀ ವೃತ್ತಿಜೀವನದಲ್ಲಿ ಮಾಡದೇ ಇರೋ ತಪ್ಪನ್ನ‌ಎಲ್ಲ ವಿರಾಟ್ ಈ ಸೀಸನ್ ನಲ್ಲಿ ಮಾಡಿದ್ದಾರೆ | OneIndia Kannada

ಹರ್ಯಾಣ
16. ಕೃಷ್ಣನ್ ಲಾಲ್ ಪನ್ವಾರ್

57 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ ಎಂಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ರಾಜಸ್ಥಾನದಲ್ಲಿ 2, ಛತ್ತೀಸ್‌ಗಡದಲ್ಲಿ 2, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದೊಂದು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ರಾಜಸ್ಥಾನದಲ್ಲಿ ಬಿಜೆಪಿಯೇತರ ಎಲ್ಲಾ ಪಕ್ಷಗಳ ಬೆಂಬಲ ಸಿಕ್ಕರೆ ಒಂದು ಹೆಚ್ಚುವರಿ ಸ್ಥಾನ ಕೂಡ ಕಾಂಗ್ರೆಸ್‌ಗೆ ದಕ್ಕಬಹುದು.

English summary
Breaking News: Rajya Sabha Elections 2022: BJP releases Candidates list, Nirama Sitharaman from Karnataka and Piyush Goyal from Maharashtra
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X