ಪಾಕ್ ಆಕ್ರಮಿತ ಕಾಶ್ಮೀರದ 12 ವರ್ಷದ ಬಾಲಕ ಸೇನೆ ವಶಕ್ಕೆ
ಪಾಕಿಸ್ತಾನದ ಉಗ್ರರು ಬಾಲಕರನ್ನೂ ತಮ್ಮ ದುಷ್ಕೃತ್ಯಕ್ಕೆ ಬಳಸುತ್ತಿದ್ದಾರಾ ಎಂಬ ಅನುಮಾನ ಬರುವಂತೆ ಪಾಕ್ ಅಕ್ರಮಿತ ಕಾಶ್ಮೀರದ ಹನ್ನೆರಡು ವರ್ಷದ ಬಾಲಕ ಗಡಿನಿಯಂತ್ರಣ ರೇಖೆ ಬಳಿ ಸಂಚರಿಸುವಾಗ ಸೇನೆ ಕೈಲಿ ಸಿಕ್ಕಿಬಿದ್ದಿದ್ದಾನೆ
ಶ್ರೀನಗರ್, ಮೇ 6: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸೇರಿದ ಹನ್ನೆರಡು ವರ್ಷದ ಬಾಲಕನನ್ನು ಜಮ್ಮು-ಕಾಂಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಬಂಧಿಸಲಾಗಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ಶನಿವಾರ ಮಾಹಿತಿ ನೀಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಬಾಲಕ ಗಡಿ ನಿಯಂತ್ರಣ ರೇಖೆ ದಾಟಿ ಬಂದಿದ್ದ ಆತನನ್ನು ಕಳೆದ ಸಾಯಂಕಾಲ ವಶಕ್ಕೆ ಪಡೆಯಲಾಗಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.
ಬಾಲಕನ ಹೆಸರು ಅಶ್ಫಾಕ್ ಅಲಿ ಚೌಹಾನ್. ದಂಗೆರ್ ಪೆಲ್ ಹಳ್ಳಿಯ ವಾಸಿ ಬಲೂಚ್ ರೆಜಿಮೆಂಟ್ ನ ನಿವೃತ್ತ ಯೋಧನ ಮಗ ಆತ. ಭಾರತಕ್ಕೆ ಸೇರಿದ ಪ್ರದೇಶದಲ್ಲಿ, ಗಡಿ ನಿಯಂತ್ರಣ ರೇಖೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಎಂದು ಮಾಹಿತಿ ನೀಡಲಾಗಿದೆ. ಸೇನೆ ಪಡೆಯನ್ನು ಕಂಡ ಕೂಡಲೇ ಅತ ಶರಣಾದ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.[ಪಾಕಿಸ್ತಾನೀಯರಿಗೆ ಕಸ ಗುಡಿಸಲೂ ಬರಲ್ವಾ, ಅದಕ್ಕೂ ಚೀನಾದಿಂದ ಬರ್ತಾರೆ!]

ಒಳನುಸುಳಲು ದಾರಿ ಕಂಡುಕೊಂಡು ಬರಲು ಪಾಕ್ ಸೇನೆ ಜತೆ ಸರೀಕಾಗಿ ಉಗ್ರರೇ ಈ ಹುಡುಗನನ್ನು ಗಡಿ ನಿಯಂತ್ರಣ ರೇಖೆ ಬಳಿ ಕಳಿಸಿರುವ ಶಂಕೆ ಇದೆ. ಪಾಕಿಸ್ತಾನವು ಸಣ್ಣ ವಯಸ್ಸಿನ ಹುಡುಗರನ್ನು ತನ್ನ ಕಾರ್ಯ ಸಾಧನೆಗೆ ಹೇಗೆ ಬಳಸುತ್ತದೆ ಎಂಬುದಕ್ಕೆ ಇದು ಉದಾಹರಣೆ. ಹುಡುಗನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ.












Click it and Unblock the Notifications