ಕೇರಳ ಪ್ರವಾಹದಲ್ಲಿ ಕೊಚ್ಚಿಹೋದ ಸರ್ಟಿಫಿಕೇಟ್, ವಿದ್ಯಾರ್ಥಿ ಆತ್ಮಹತ್ಯೆ
ತಿರುವನಂತಪುರಂ, ಆಗಸ್ಟ್ 20: ಕೇರಳದ ಪ್ರವಾಹದಲ್ಲಿ ತನ್ನ ಶಾಲಾ ಪ್ರಮಾಣಪತ್ರ ಕೊಚ್ಚಿಕೊಂಡು ಹೋಯಿತೆಂದು ಮನನೊಂದ 19 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಳಿಕೊಡೆ ಜಿಲ್ಲೆಯ ಕಾರಂತೂರ್ ನಲ್ಲಿ ನಡೆದಿದೆ.
ಕೈಲಾಶ್ ಎಂಬ 19 ವರ್ಷ ವಯಸ್ಸಿನ ಹುಡುಗ ಇಂಡಸ್ಟ್ರೀಯಲ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಓದಲು ಸೀಟು ಗಿಟ್ಟಿಸಿದ್ದ. ಆದರೆ ಕೇರಳದಲ್ಲಿ ಬಿದ್ದ ಭಾರೀ ಮಳೆಗೆ, ಪ್ರವಾಹ ಆರಂಭವಾದ್ದರಿಂದ ಈತನ ಮನೆಯೊಳಗೂ ನೀರಿ ಬಂದು ಮನೆ ಮುಳುಗಿದೆ. ಈ ಸಂದರ್ಭದಲ್ಲಿ ಇಡೀ ಕುಟುಂಬವನ್ನೂ ನಿರಾಶ್ರಿತರ ಶಿಬಿರಕ್ಕೆ ಕರೆತರಲಾಗಿತ್ತು.
ನೀರಿನ ಮಟ್ಟ ಕಡಿಮೆಯಾಗಿ, ಪ್ರವಾಹವೂ ನಿಂತ ಮೇಲೆ ಮನೆಗೆ ಹೋಗಿ ನೋಡಿದರೆ ಕೈಲಾಶ್ ನ ಶಾಲೆಯ ಸರ್ಟಿಫಿಕೇಟ್ ಗಳು ಒದ್ದೆಯಾಗಿ, ಸಂಪೂರ್ಣ ಹಾಳಾಗಿದ್ದವು. ಇದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೇರಳ ಪ್ರವಾಹದಿಂದಾಗಿ ಲಕ್ಷಾಂತರ ಜನ ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಆದರೆ ಶಾಲಾ ಸರ್ಟಿಫಿಕೇಟ್ ಕೊಚ್ಚಿಕೊಂಡು ಹೋಯಿತೆಂದು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿನ ದುಡುಕಿನ ಯೋಚನೆ ಸರಿಯಲ್ಲ ಎಂಬುದು ಆತನ ಪಾಲಕರದೇ ಮಾತು.












Click it and Unblock the Notifications