ಒಪ್ಪಂದಗಳಿಗೆ ಬದ್ಧ:ಶಸ್ತ್ರಾಸ್ತ್ರಗಳಿದ್ದರೂ ಪ್ರಯೋಗಿಸದೆ ಪ್ರಾಣತೆತ್ತ ಭಾರತೀಯ ಯೋಧರು
ಲಡಾಖ್, ಜೂನ್ 20: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಹಾಗೂ ಭಾರತದ ನಡುವೆ ನಡೆದ ಸಂಘರ್ಷದ ಸಂದರ್ಭದಲ್ಲಿ ಭಾರತೀಯ ಸೈನಿಕರ ಬಳಿಕ ಶಸ್ತ್ರಾಸ್ತ್ರಗಳಿದ್ದರೂ ಪ್ರಯೋಗಿಸದೆ ಪ್ರಾಣತೆತ್ತಿದ್ದಾರೆ.
ಭಾರತೀಯ ಯೋಧರು ಒಪ್ಪಂದಗಳನ್ನು ಮುರಿಯದೇ ಅವುಗಳಿಗೆ ಬದ್ಧರಾಗಿರಲು ತಮ್ಮ ಜೀವವನ್ನೇ ಅರ್ಪಿಸಿದ್ದಾರೆ.
ಆದರೆ 1996-2005 ರಲ್ಲಿ ಭಾರತ-ಚೀನಾ ನಡುವೆ ನಡೆದ ಒಪ್ಪಂದಗಳ ಪೈಕಿ ಉಭಯ ಪಕ್ಷದ ಸೈನಿಕರು ಮುಖಾಮುಖಿಯಾದಾಗ ಫೈರ್ ಆರ್ಮ್ಸ್ ನ್ನು ಬಳಕೆ ಮಾಡುವಂತಿಲ್ಲ ಎಂಬ ನಿಯಮವಿದೆ.

ಜೂ.15 ರಂದು ಭಾರತ-ಚೀನಾ ಯೋಧರ ನಡುವೆ ಸಂಘರ್ಷವೇರ್ಪಟ್ಟಾಗ ಈ ನಿಯಮಗಳನ್ನು ಉಲ್ಲಂಘನೆ ಮಾಡದೇ ಭಾರತೀಯ ಯೋಧರು ಚೀನಿಯರೊಂದಿಗೆ ಹೋರಾಡಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ.
ಚೀನಾ ಯೋಧರು ಕಬ್ಬಿಣದ ರಾಡ್ ಗಳು, ಮೊಳೆಗಳಿಂದಲೇ ತುಂಬಿದ್ದ ಬಡಿಗೆಗಳನ್ನು ತಂದು ಅವುಗಳಿಂದ ಭಾರತೀಯ ಯೋಧರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಈ ಘರ್ಷಣೆಯಲ್ಲಿ 20 ಯೋಧರು ಸಾವನ್ನಪ್ಪಿದ್ದಾರೆ.
ಚೀನಾ-ಭಾರತದ ನಡುವಿನ ಸಂಘರ್ಷದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಗಲ್ವಾನ್ ಕಣಿವೆಯಲ್ಲಿದ್ದ ಭಾರತೀಯ ಯೋಧರ ಬಳಿ ಶಸ್ತ್ರಾಸ್ತ್ರಗಳಿದ್ದವು ಎಂದು ಹೇಳಿದ್ದಾರೆ.
ಗಡಿಯಲ್ಲಿ ನಿಯೋಜನೆಗೊಂಡ ಯೋಧರ ಕೈಯಲ್ಲಿ ಶಸ್ತ್ರಾಸ್ತ್ರಗಳಿರುತ್ತವೆ ಎಂದು ತಿಳಿಸಿದ್ದಾರೆ.ಗುರುವಾರ ಕಮಾಂಡರ್ ಹಂತದ ಮಾತುಕತೆ ಅನಿಶ್ಚಿತತೆಯಲ್ಲಿ ಅಂತ್ಯಕಂಡಿದೆ.
ಜೂನ್ 15-16 ರಂದು ನಡೆದ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು, ಚೀನಾದ 43 ಕ್ಕೂ ಹೆಚ್ಚು ಸೈನಿಕರನ್ನು ಮೃತಪಟ್ಟಿದ್ದರು.
ಅದಕ್ಕೂ ಮುನ್ನ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ 3 ಮಂದಿ ಸಾವನ್ನಪ್ಪಿದ್ದರು.ಬುಧವಾರ ಭಾರತದ ಮೇಜರ್ ಜನರಲ್ ಮತ್ತು ಚೀನಾದ ಮಿಲಿಟರಿ ಅಧಿಕಾರಿ ಮಧ್ಯೆ ನಡೆದ ಮತ್ತೊಂದು ಸುತ್ತಿನ ಮಾತುಕತೆ ಯಾವುದೇ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿ ಅನಿಶ್ಚಿತತೆ ಮುಂದುವರಿದಿದೆ.
ಈವರೆಗೂ ಚೀನಾ ಸೈನ್ಯವನ್ನು ಹಿಂತೆಗೆದುಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಕಳೆದ ಸೋಮವಾರ ಘರ್ಷಣೆ ನಡೆದ ಸ್ಥಳದಲ್ಲಿಯೇ ಮಾತುಕತೆ ನಡೆಯಿತು. ಈ ಪ್ರದೇಶ ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಗೆ ಹತ್ತಿರವಾಗಿದೆ.
ಭಾರತದ ಗಡಿ ರಕ್ಷಣೆಗೆ ನಿಂತಿರುವ ಸೇನಾಪಡೆಗೆ ಪರಮಾಧಿಕಾರವನ್ನು ನೀಡಲಾಗಿದ್ದು, ಒಂದಿಂಚೂ ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಚೀನಾಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಭೂಪ್ರದೇಶದ ಒಂದಿಂಚೂ ಜಾಗದ ಮೇಲೆ ಯಾರೇ ಕಣ್ಣು ಹಾಕಿದರೂ ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.












Click it and Unblock the Notifications