ಉಬರ್‌ ಆ್ಯಪ್‌ನಲ್ಲಿ ರೈಲು ಟಿಕೆಟ್‌ ಬುಕ್ಕಿಂಗ್‌ ಸೇವೆ ಆರಂಭ : ಬುಕ್‌ ಮಾಡುವ ಸ್ಟೆಪ್‌ ಬೈ ಸ್ಟೆಪ್‌ ಮಾಹಿತಿ ಇಲ್ಲಿದೆ

ನಮ್ಮ ದೇಶದಲ್ಲಿ ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಸಲುವಾಗಿ ಅತಿ ಹೆಚ್ಚು ಬಳಸುವ ಸಾರಿಗೆ ಎಂದರೆ ರೈಲು. ರೈಲು ಪ್ರಯಾಣ ಬಹಳ ಆರಾಮದಾಯಕ. ಜೊತೆಯಲ್ಲಿ ಸಣ್ಣ ಮಕ್ಕಳು, ವಯಸ್ಸಾದವರು ಇದ್ದರಂತೂ ರೈಲು ಪ್ರಯಾಣವೇ ಬೆಸ್ಟ್.‌ ಇದು ಅಗ್ಗ ಕೂಡಾ. ಹಾಗಾಗಿಯೇ ದಿನಕ್ಕೆ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ.

ರೈಲು ಪ್ರಯಾಣ ಆರಾಮ ಎನ್ನುವುದೇನೋ ನಿಜ. ಆದರೆ, ಟ್ರೈನ್‌ ಟಿಕೆಟ್‌ ಸಿಗುವುದು ಮಾತ್ರ ಅಷ್ಟು ಸುಲಭ ಅಲ್ಲ. ಮೂರು ತಿಂಗಳ ಹಿಂದೆಯೇ ಟಿಕೆಟ್‌ ಬುಕ್‌ ಮಾಡಬೇಕಾಗುತ್ತದೆ. ಇದಕ್ಕಾಗಿ ರಿಸರ್ವೇಶನ್‌ ಕೌಂಟರ್‌ಗಳಿಗೆ ಹೋಗಿ ಅಲ್ಲಿ ಕ್ಯೂ ನಿಲ್ಲಬೇಕಾಗುತ್ತದೆ.

Book Train Ticket

ಉಬರ್ ಆ್ಯಪ್ ಮೂಲಕ ರೈಲು ಟಿಕೆಟ್‌ ಬುಕ್ಕಿಂಗ್‌

ಆದರೆ ಇದೀಗ ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿ ಇದೆ. ಇನ್ನು ಮುಂದೆ ನೀವು ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಮತ್ತು ಜರ್ನಿ ದಿನ ರೈಲ್ವೆ ನಿಲ್ದಾಣಕ್ಕೆ ಹೋಗಲು ಬೇರೆ ಬೇರೆ ಅಪ್ಲಿಕೇಶನ್‌ಗಳನ್ನು ಬಳಸಬೇಕಾಗಿಲ್ಲ. ರೈಡ್-ಶೇರಿಂಗ್ ಕಂಪನಿ ಉಬರ್ ನಿನ್ನೆಯಿಂದ ತನ್ನ ಅಪ್ಲಿಕೇಶನ್‌ನಲ್ಲಿ ರೈಲು ಟಿಕೆಟ್ ಬುಕಿಂಗ್ ಸೇವೆಯನ್ನು ಪ್ರಾರಂಭಿಸಿದೆ. ಇದಕ್ಕಾಗಿ, ಕಂಪನಿಯು ಆನ್‌ಲೈನ್ ಟ್ರಾವೆಲ್‌ ಪ್ಲಾಟ್‌ಫಾರ್ಮ್‌ ಇಕ್ಸಿಗೋ ಜೊತೆ ಪಾಲುದಾರಿಕೆ ಹೊಂದಿದೆ.

SWR: ಇಂದಿನಿಂದ ಈ ಮಾರ್ಗದ ರೈಲುಗಳು ಭಾಗಶಃ ರದ್ದು: SMVT ಬೆಂಗಳೂರಿನಿಂದ ಓಣಂ ವಿಶೇಷ ರೈಲು ಸೇವೆ
ಇನ್ನು ಮುಂದೆ ಪ್ರಯಾಣಿಕರು ಉಬರ್ ಅಪ್ಲಿಕೇಶನ್ ಮೂಲಕ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವುದು ಮತ್ತು ಪಿಎನ್‌ಆರ್ ಸ್ಟೇಟಸ್‌ ಚೆಕ್‌ ಮಾಡುವುದು ಸಾಧ್ಯವಾಗುತ್ತದೆ. ಅಲ್ಲದೆ, ಮನೆಯಿಂದ ರೈಲ್ವೆ ನಿಲ್ದಾಣಕ್ಕೆ ಮತ್ತು ನಿಲ್ದಾಣದಿಂದ ನಿಮ್ಮ ಮನೆಗೆ ಹೋಗಲು ಉಬರ್ ಅಪ್ಲಿಕೇಶನ್‌ನಿಂದ ನೇರವಾಗಿ ಆಟೋ, ಬೈಕ್ ಅಥವಾ ಕ್ಯಾಬ್ ಅನ್ನು ಸಹ ಬುಕ್ ಮಾಡಬಹುದು.

ರೈಲು ಟಿಕೆಟ್ ಬುಕಿಂಗ್ ಸೇರ್ಪಡೆ

ಭಾರತದಲ್ಲಿ ಇಂಟರ್‌ಸಿಟಿ ಪ್ರಯಾಣವನ್ನು ಸರಳಗೊಳಿಸಲು ಉಬರ್ ಈ ಕ್ರಮ ಕೈಗೊಂಡಿದೆ. ರೈಲು ಟಿಕೆಟ್ ಬುಕಿಂಗ್ ಸೇರ್ಪಡೆಯೊಂದಿಗೆ, ಉಬರ್ ಅಪ್ಲಿಕೇಶನ್ ಈಗ ಮಲ್ಟಿಮೋಡಲ್ ಮೊಬಿಲಿಟಿ ಪ್ಲಾಟ್‌ಫಾರ್ಮ್ ಆಗಿ ಕಾರ್ಯನಿರ್ವಹಿಸಲಿದೆ. ಪ್ರಯಾಣಿಕರು ಈಗ ಅಪ್ಲಿಕೇಶನ್‌ನಲ್ಲಿ ಮೋಟಾರ್‌ಬೈಕ್, ಆಟೋ, ಕಾರು, ಮೆಟ್ರೋ, ಇಂಟರ್‌ಸಿಟಿ ಕಾರು ಮತ್ತು ಇಂಟರ್‌ಸಿಟಿ ಬಸ್ ಟಿಕೆಟ್‌ಗಳ ಜೊತೆಗೆ ರೈಲು ಟಿಕೆಟ್‌ಗಳನ್ನು ಬುಕ್‌ ಮಾಡುವುದು ಕೂಡಾ ಸಾಧ್ಯವಾಗುತ್ತದೆ. ಅಂದರೆ ಆರಂಭದಿಂದ ಅಂತ್ಯದವರೆಗೆ ಇಡೀ ಪ್ರಯಾಣವನ್ನು ಒಂದೇ ಅಪ್ಲಿಕೇಶನ್ ಮೂಲಕ ಪ್ಲಾನ್‌ ಮಾಡಬಹುದು.

ಉಬರ್ ಆ್ಯಪ್ ನಿಂದ ರೈಲು ಟಿಕೆಟ್ ಬುಕ್ ಮಾಡುವುದು ಹೇಗೆ?

ಉಬರ್ ಆ್ಯಪ್ ಮೂಲಕ ರೈಲು ಟಿಕೆಟ್ ಬುಕ್ ಮಾಡುವ ಪ್ರಕ್ರಿಯೆಯು ತುಂಬಾ ಸುಲಭ.

1. ಮೊದಲು, ನಿಮ್ಮ ಫೋನ್‌ನಲ್ಲಿ ಉಬರ್ ಆಪ್ ತೆರೆಯಿರಿ.

2. ಹೋಮ್‌ ಪೇಜ್‌ನಲ್ಲಿ ಕಾಣಿಸುವ ಸರ್ವಿಸ್‌ ಸೆಕ್ಷನ್‌ನಲ್ಲಿ Bus & Train ಆಯ್ಕೆಯನ್ನು ಆರಿಸಿ.

3.ಇದಾದ ನಂತರ Train Tickets ಮೇಲೆ ಕ್ಲಿಕ್ ಮಾಡಿ.

4.ನೀವು ಪ್ರಯಾಣ ಶುರು ಮಾಡುವ ಸ್ಥಳ ಮತ್ತು ಹೋಗಬೇಕಾದ ಸ್ಥಳವನ್ನು ನಮೂದಿಸಿ.

5.ಪ್ರಯಾಣ ದಿನಾಂಕವನ್ನು ಆಯ್ಕೆಮಾಡಿ

6. ಈಗ ಲಭ್ಯವಿರುವ ರೈಲುಗಳ ಪಟ್ಟಿ ಕಾಣಿಸುತ್ತದೆ. ನಿಮ್ಮ ಆದ್ಯತೆಯ ರೈಲನ್ನು ಆಯ್ಕೆಮಾಡಿ.

7. ಪೇಮೆಂಟ್‌ ಮಾಡುವ ಮೂಲಕ ನಿಮ್ಮ ಟಿಕೆಟ್ ಬುಕಿಂಗ್ ಅನ್ನು ಕನ್‌ಫರ್ಮ್‌ ಮಾಡಿ.

ಟಿಕೆಟ್‌ ಬುಕಿಂಗ್ ಮಾಡಿದ ನಂತರ, ಉಬರ್ ಅಪ್ಲಿಕೇಶನ್‌ನಲ್ಲಿ ಟಿಕೆಟ್ ವಿವರಗಳು ಮತ್ತು PNR ಸ್ಟೇಟಸ್‌ ಅನ್ನು ಪರಿಶೀಲಿಸಬಹುದು.

ರೈಲು ಸಮಯವನ್ನು ಅವಲಂಬಿಸಿ ನಿಲ್ದಾಣವನ್ನು ತಲುಪಲು ಅಥವಾ ನಿಲ್ದಾಣದಿಂದ ಹಿಂತಿರುಗಿ ಮನೆ ಅಥವಾ ಇತರ ಸ್ಥಳಗಳನ್ನು ತಲುಪಲು ಉಬರ್ ಬುಕ್ ಮಾಡಬಹುದು.

ರೈಲು ನಿಲ್ದಾಣಗಳಲ್ಲಿಯೂ ಲಭ್ಯವಿರುವುದು ಸೌಲಭ್ಯ

ಉಬರ್ ಈಗಾಗಲೇ ದೇಶಾದ್ಯಂತ ಅನೇಕ ಪ್ರಮುಖ ರೈಲು ನಿಲ್ದಾಣಗಳಲ್ಲಿ ಮೀಸಲಾದ ಪಿಕಪ್ ಮತ್ತು ಡ್ರಾಪ್-ಆಫ್ ವಲಯಗಳನ್ನು ಹೊಂದಿದೆ. ಪ್ರಯಾಣಿಕರು ರೈಲ್ವೆ ಸ್ಟೇಷನ್‌ಗೆ ಬಂದ ಕೂಡಲೇ ಅಥವಾ ರೈಲಿನಿಂದ ಇಳಿದ ಕೂಡಲೇ ತಮ್ಮ ರೈಡ್‌ ತೆಗೆದುಕೊಳ್ಳುವುದು ಸುಲಭವಾಗುವುದು.

ಈ ಸೇವೆ ಪ್ರಯಾಣಿಕರಿಗೆ ಏಕೆ ವಿಶೇಷವಾಗಿದೆ?

ಉಬರ್ ಮತ್ತು ಇಕ್ಸಿಗೋ ನಡುವಿನ ಈ ಪಾಲುದಾರಿಕೆಯು ರೈಲು ಪ್ರಯಾಣಿಕರ ಪ್ರಯಾಣವನ್ನು ಸರಳಗೊಳಿಸುವತ್ತ ಒಂದು ಮಹತ್ವದ ಹೆಜ್ಜೆಯಾಗಿದೆ. ಪ್ರಯಾಣಿಕರು ಕ್ಯಾಬ್ ಅಥವಾ ಆಟೋ ಬುಕಿಂಗ್, ರೈಲು ಟಿಕೆಟ್‌ಗಳು ಮತ್ತು ಪಿಎನ್‌ಆರ್ ಸ್ಟೇಟಸ್‌ ಸೇರಿದಂತೆ ಬಹು ಸೇವೆಗಳನ್ನು ಒಂದೇ ಅಪ್ಲಿಕೇಶನ್‌ನಿಂದ ನಿರ್ವಹಿಸುವುದು ಸಾಧ್ಯವಾಗುತ್ತದೆ.

ಮನೆಯಿಂದ ನಿಲ್ದಾಣಕ್ಕೆ ಬಂದು ರೈಲು ಹಿಡಿಯುವುದು ಮತ್ತು ನಿಲ್ದಾಣದಿಂದ ನೀವು ಎಲ್ಲಿಗೆ ಹೋಗಬೇಕೋ ಆ ಜಾಗಕ್ಕೆ ಹೋಗಲು ರೈಡ್‌ ಬುಕ್‌ ಮಾಡುವುದು ಎಲ್ಲವನ್ನೂ ಒಂದೇ ಪ್ಲಾಟ್‌ಫಾರಂನಲ್ಲಿ ಮಾಡಬಹುದಾಗಿದೆ. ಇದು ನಿಮ್ಮ ಪ್ರಯಾಣ ಯೋಜನೆಯನ್ನು ಮೊದಲಿಗಿಂತ ಸುಲಭ ಮತ್ತು ಹೆಚ್ಚು ಅನುಕೂಲಕರವಾಗಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+