Get Updates
Get notified of breaking news, exclusive insights, and must-see stories!

ಬಾಂಬ್‌ ಬೆದರಿಕೆ: ದಿಢೀರನೆ ಮಾರ್ಗ ಬದಲಾಯಿಸಿದ ನವದೆಹಲಿ ವಿಮಾನ, ರೋಮ್ ನಲ್ಲಿ ಲ್ಯಾಂಡಿಂಗ್

ನವದೆಹಲಿ, ಫೆಬ್ರವರಿ 24: ನ್ಯೂಯಾರ್ಕ್ ನ ಜಾನ್ ಎಫ್ ಕೆ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಟ್ಟಿದ್ದ ಅಮೆರಿಕದ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ನಂತರ ರೋಮ್ ನಲ್ಲಿ ಭಾನುವಾರ ಸಂಜೆ ತುರ್ತು ಭೂ ಸ್ಪರ್ಶ ಮಾಡಿದೆ.

ಬಾಂಬ್ ಬೆದರಿಕೆ ಬಂದ ನಂತರ ಈ ವಿಮಾನವು ತಪಾಸಣೆಗಾಗಿ ರೋಮ್ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ರೋಮ್ ವಿಮಾನ ನಿಲ್ದಾಣದಲ್ಲಿ ಭದ್ರತಾ ಅನುಮತಿ ಪಡೆದ ನಂತರ ವಿಮಾನ ದೆಹಲಿಗೆ ತೆರಳಲಿದೆ ಎಂದು ಮೂಲಗಳು ತಿಳಿಸಿವೆ. 280 ಪ್ರಯಾಣಿಕರಿದ್ದ ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನ ಕ್ಯಾಸ್ಪಿಯನ್ ಸಮುದ್ರದ ಮೇಲೆ ಪಶ್ಚಿಮಕ್ಕೆ ಹೋಗುವ ಮೊದಲು ಇಟಲಿಯ ಕಡೆಗೆ ತನ್ನ ಮಾರ್ಗವನ್ನು ತಿರುಗಿಸಿದೆ.

Bomb threat American Airline flight to New Delhi diverted to Rome

ನ್ಯೂಯಾರ್ಕ್ ನಿಂದ ದೆಹಲಿಗೆ ಕಾರ್ಯನಿರ್ವಹಿಸುತ್ತಿರುವ ಎಎ 292 ವಿಮಾನವನ್ನು ಸಂಭಾವ್ಯ ಭದ್ರತಾ ಬೆದರಿಕೆಯಿಂದಾಗಿ ರೋಮ್‌ ಗೆ ತಿರುಗಿಸಲಾಗಿದೆ. ಸ್ಥಳೀಯ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ವಿಮಾನಯಾನ ಸಂಸ್ಥೆ ಭರವಸೆ ನೀಡಿದೆ. ನ್ಯೂಯಾರ್ಕ್ ನಿಂದ ಶನಿವಾರ ರಾತ್ರಿ 8-30ರ ಸಮಯದಲ್ಲಿ ಟೇಕ್ ಆಫ್ ಆದ ವಿಮಾನ ಭಾರತದ ರಾಜಧಾನಿಯತ್ತ ನಿಗದಿತ 14 ಗಂಟೆಗಳ ಪ್ರಯಾಣಕ್ಕಾಗಿ ಹೊರಟಿತು. ಹಾರಾಟದ ಸುಮಾರು 10 ಗಂಟೆಗಳ ನಂತರ ವಿಮಾನವು ಕಪ್ಪು ಸಮುದ್ರದ ಬಳಿ ಹಠಾತ್ ಮಾರ್ಗವನ್ನು ಬದಲಾಯಿಸಿದ್ದು, ರೋಮ್‌ನ ಫಿಮಿಸಿನೊ ವಿಮಾನ ನಿಲ್ದಾಣದ ಕಡೆಗೆ ಹೊರಟಿದೆ.

ಇಟಾಲಿಯನ್ ವಾಯುಪ್ರದೇಶ ಸಮೀಪಿಸಿದ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಇಟಾಲಿಯನ್ ಯುದ್ದ ವಿಮಾನಗಳು ಬೆಂಗಾವಲು ಮಾಡಿದ್ದಾಗಿ ವರದಿಯಾಗಿದೆ. ಸಂಜೆ ಭಾನುವಾರ 5:30ರ ಸುಮಾರಿಗೆ ರೋಮ್‌ನಲ್ಲಿ ಸುರಕ್ಷಿತವಾಗಿ ಇಳಿದಿದೆ. ವಿಮಾನ ಹಾರಾಟದ ಮಧ್ಯದಲ್ಲಿ ಬಾಂಬ್ ಬೆದರಿಕೆಯನ್ನು ಸ್ವೀಕರಿಸಲಾಗಿದೆ ಎಂದು ಮೂಲಗಳು ಹೇಳಿವೆ. ವಿಮಾನವು ರಾತ್ರಿಯಿಡೀ ರೋಮ್‌ನಲ್ಲಿ ತಂಗಲಿದ್ದು, ಸಿಬ್ಬಂದಿಗೆ ಅಗತ್ಯವಿರುವ ವಿಶ್ರಾಂತಿ ಪಡೆಯಲು ಅವಕಾಶ ನೀಡಲಾಗುವುದು ಮತ್ತು ನಾಳೆ ಸಾಧ್ಯವಾದಷ್ಟು ಬೇಗ ದೆಹಲಿಗೆ ಪ್ರಯಾಣ ಬೆಳೆಸಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಹಿರಿಯ ಅಧಿಕಾರಿಯೊಬ್ಬರು ಎಬಿಸಿ ನ್ಯೂಸ್‌ಗೆ ನೀಡಿದ ಮಾಹಿತಿಯ ಪ್ರಕಾರ, ಈ ಬೆದರಿಕೆ ಇಮೇಲ್ ಮೂಲಕ ಬಂದಿದ್ದು, ನಂತರ ಅದು ಆಧಾರರಹಿತವಾಗಿದೆ ಎಂದು ತಿಳಿದುಬಂದಿದೆ. ರೋಮ್‌ನಲ್ಲಿ ವಿಮಾನ ಇಳಿದ ನಂತರ, ಪ್ರಯಾಣಿಕರು ಮತ್ತು ಸಿಬ್ಬಂದಿ ವಿಮಾನದಿಂದ ಕೆಳಗಿಳಿದರು. ವಿಮಾನ ಇಳಿಯುವಿಕೆಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ವಿಮಾನವು ಫೈಟರ್ ಜೆಟ್‌ಗಳಿಂದ ಬೆಂಗಾವಲು ಪಡೆಯುತ್ತಿರುವುದನ್ನು ತೋರಿಸಲಾಗಿದೆ.

ಇಟಾಲಿಯನ್ ವಾಯುಪಡೆಯ ಫೈಟರ್ ಜೆಟ್‌ಗಳು ವಿಮಾನವನ್ನು ರೋಮ್‌ಗೆ ಕರೆದೊಯ್ದವು, ಅಲ್ಲಿ ಅದು ಸುರಕ್ಷಿತವಾಗಿ ಇಳಿಯಿತು ಎಂದು ಇಟಾಲಿಯನ್ ರಾಜಧಾನಿಯ ಅಧಿಕಾರಿಗಳು ಎಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ .
ಮೂಲಗಳ ಪ್ರಕಾರ, ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನವು ಕ್ಯಾಸ್ಪಿಯನ್ ಸಮುದ್ರದ ಮೇಲೆ ಹಾರುತ್ತಿದ್ದಾಗ, ಸಿಬ್ಬಂದಿಗೆ ಬಾಂಬ್ ಬೆದರಿಕೆಯ ಬಗ್ಗೆ ಎಚ್ಚರಿಕೆ ನೀಡಲಾಯಿತು ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+