• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡ್ರಗ್ಸ್ ಪ್ರಕರಣ: ವಾಟ್ಸಾಪ್ ಚಾಟ್‌ಗಳು ಸುರಕ್ಷಿತವಾಗಿಲ್ಲವೇ?

|

ನವದೆಹಲಿ, ಸೆಪ್ಟೆಂಬರ್ 25: ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಡ್ರಗ್ಸ್ ವಿವಾದವು ವಾಟ್ಸಾಪ್ ಚಾಟ್‌ಗಳ ಸುರಕ್ಷತೆಯ ಕುರಿತಾದ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ವಾಟ್ಸಾಪ್ ಸಂದೇಶಗಳು ಬಹಳ ಸುರಕ್ಷಿತವಾಗಿದ್ದು, ಯಾವುದೇ ಮೂರನೇ ವ್ಯಕ್ತಿ ಅದನ್ನು ತೆರೆಯಲು ಸಾಧ್ಯವೇ ಇಲ್ಲ ಎಂದು ಸಾಮಾಜಿಕ ಸಂದೇಶ ವಿನಿಮಯ ವೇದಿಕೆಯಾದ ವಾಟ್ಸಾಪ್ ಪುನರುಚ್ಚರಿಸಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ತೆರೆದುಕೊಂಡ ಬಾಲಿವುಡ್ ಡ್ರಗ್ ಜಾಲದ ಕುರಿತಾದ ತನಿಖೆ ನಡೆಸುತ್ತಿರುವ ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ವಾಟ್ಸಾಪ್‌ನಲ್ಲಿ ಹಳೆಯ ಮೆಸೇಜ್‌ಗಳನ್ನು ಮರಳಿ ಪಡೆದುಕೊಳ್ಳಲು ಹೇಗೆ ಸಾಧ್ಯವಾಗಿದೆ ಎನ್ನುವ ಪ್ರಶ್ನೆಗಳು ವ್ಯಕ್ತವಾಗಿರುವ ಬೆನ್ನಲ್ಲೇ ವಾಟ್ಸಾಪ್ ಈ ಹೇಳಿಕೆ ನೀಡಿದೆ.

ಫೇಸ್‌ಬುಕ್-ಬಿಜೆಪಿ ನಂಟು: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ

ಟ್ಯಾಲೆಂಟ್ ಏಜೆಂಟ್ ಜಯಾ ಸಾಹಾ ಅವರ ಫೋನ್‌ನಿಂದ ಸಂಗ್ರಹಿಸಿದ 2017ರ ವಾಟ್ಸಾಪ್ ಚಾಟ್‌ಗಳ ಆಧಾರದಲ್ಲಿ ದೀಪಿಕಾ ಪಡುಕೋಣೆ ಮತ್ತು ಶ್ರದ್ಧಾ ಕಪೂರ್ ಅವರನ್ನು ವಿಚಾರಣೆಗೆ ಬರುವಂತೆ ಕೇಂದ್ರ ಸಂಸ್ಥೆ ಸಮನ್ಸ್ ನೀಡಿದೆ. ಜಯಾ ಸಾಹಾ ಅವರು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಟ್ಯಾಲೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಮುಂದೆ ಓದಿ...

ನಿಮ್ಮ ಕಂಟೆಂಟ್ ಭದ್ರವಾಗಿದೆ

ನಿಮ್ಮ ಕಂಟೆಂಟ್ ಭದ್ರವಾಗಿದೆ

'ಎಂಡ್ ಟು ಎಂಡ್ ಗೂಢಲಿಪೀಕರಣದ ಮೂಲಕ ವಾಟ್ಸಾಪ್ ನಿಮ್ಮ ಸಂದೇಶಗಳನ್ನು ಸಂರಕ್ಷಿಸುತ್ತದೆ. ನೀವು ಕಳುಹಿಸಿದ ಸಂದೇಶಗಳನ್ನು ನೀವು ಮತ್ತು ಅದನ್ನು ಸ್ವೀಕರಿಸಿದವರು ಮಾತ್ರ ಓದಬಹುದು. ಅದರ ನಡುವೆ ಬೇರೆ ಯಾರಿಗೂ ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ವಾಟ್ಸಾಪ್ ಸಂಸ್ಥೆಗೂ ಅದು ಸಾಧ್ಯವಾಗುವುದಿಲ್ಲ. ಜನರು ತಮ್ಮ ಫೋನ್ ನಂಬರ್ ಮೂಲಕ ಮಾತ್ರವೇ ವಾಟ್ಸಾಪ್‌ಗೆ ಸೈನ್ ಅಪ್ ಆಗುತ್ತಾರೆ ಎನ್ನುವುದನ್ನು ನೆನಪಿಡಬೇಕು. ಹಾಗೆಯೇ ವಾಟ್ಸಾಪ್ ನಿಮ್ಮ ಮೆಸೇಜ್‌ನ ಕಂಟೆಂಟ್‌ಗಳನ್ನು ವೀಕ್ಷಿಸಲು ಅವಕಾಶ ಹೊಂದಿಲ್ಲ' ಎಂದು ವಾಟ್ಸಾಪ್‌ನ ವಕ್ತಾರರು ತಿಳಿಸಿದ್ದಾರೆ.

ಮೂರನೇ ವ್ಯಕ್ತಿಗಳಿಗೆ ಸಾಧ್ಯವಿಲ್ಲ

ಮೂರನೇ ವ್ಯಕ್ತಿಗಳಿಗೆ ಸಾಧ್ಯವಿಲ್ಲ

ಆಪರೇಟಿಂಗ್ ಸಿಸ್ಟಮ್ ಮ್ಯಾನುಫ್ಯಾಕ್ಚರರ್ ಒದಗಿಸಿರುವ ಮಾರ್ಗಸೂಚಿಗಳನ್ನು ವಾಟ್ಸಾಪ್ ಅನುಸರಿಸುತ್ತದೆ. ಆಪರೇಟಿಂಗ್ ಸಿಸ್ಟಮ್ ಒದಗಿಸಿರುವ ಕಠಿಣ ಪಾಸ್‌ವರ್ಡ್‌ಗಳು ಅಥವಾ ಬಯೋಮೆಟ್ರಿಕ್ ಐಡಿಗಳಂತಹ ಎಲ್ಲ ಭದ್ರತಾ ಫೀಚರ್‌ಗಳನ್ನು ಸಮರ್ಪಕವಾಗಿ ಬಳಸುವಂತೆ ಜನರನ್ನು ನಾವು ಉತ್ತೇಜಿಸುತ್ತೇವೆ. ಇದರಿಂದ ಮೊಬೈಲ್ ಸಾಧನದಲ್ಲಿ ದಾಖಲಾದ ಅಂಶಗಳಿಗೆ ಮೂರನೇ ವ್ಯಕ್ತಿ ಪ್ರವೇಶಿಸಲು ಸಾಧ್ಯವಾಗುವುದಿಲ್ಲ' ಎಂದು ಅವರು ತಿಳಿಸಿದ್ದಾರೆ.

ಬಳಕೆದಾರರ ಡೇಟಾವನ್ನು ಹಾಂಕಾಂಗ್‌ಗೆ ಸದ್ಯಕ್ಕೆ ನೀಡಲ್ಲ ಎಂದಿರುವ ಫೇಸ್‌ಬುಕ್, ವಾಟ್ಸಾಪ್

ಹಳೆಯ ಮೆಸೇಜ್ ತೆಗೆಯಬಹುದು

ಹಳೆಯ ಮೆಸೇಜ್ ತೆಗೆಯಬಹುದು

2005ರಿಂದಲೂ ಮೊಬೈಲ್ ಫೋನ್ ಕ್ಲೋನಿಂಗ್ ತಂತ್ರಜ್ಞಾನ ಬಳಸಿ ಮೆಸೇಜ್‌ಗಳನ್ನು ಅಕ್ರಮವಾಗಿ ವೀಕ್ಷಿಸುವ ಕಾರ್ಯ ನಡೆಯುತ್ತಿದೆ. ಫೋನ್‌ನ ಭದ್ರತಾ ಅಂಶಗಳನ್ನು ಕ್ಲೋನಿಂಗ್ ತಂತ್ರಜ್ಞಾನದಿಂದ ನಕಲು ಮಾಡುವ ಮೂಲಕ ಗೂಢಲಿಪಿ ಹೊಂದಿಲ್ಲದ ವಾಟ್ಸಾಪ್ ಬ್ಯಾಕ್ ಅಪ್ ಚಾಟ್‌ಗಳನ್ನು ಅವುಗಳ ಸಂಗ್ರಹಾಗಾರದಿಂದ ಅಂದರೆ ಗೂಗಲ್ ಡ್ರೈವ್ ಅಥವಾ ಐಕ್ಲೌಡ್‌ನಿಂದ ಪಡೆದುಕೊಳ್ಳಬಹುದು ಎಂದು ಅನೇಕರು ನಂಬಿದ್ದಾರೆ.

ಕ್ಲೋನಿಂಗ್ ತಂತ್ರಜ್ಞಾನದ ನೆರವು

ಕ್ಲೋನಿಂಗ್ ತಂತ್ರಜ್ಞಾನದ ನೆರವು

ಕ್ಲೋನಿಂಗ್ ತಂತ್ರಜ್ಞಾನವು ಒಂದು ಫೋನ್‌ನಿಂದ ಹೊಸ ಫೋನ್‌ಗೆ ಡೇಟಾ ಹಾಗೂ ಸೆಲ್ಯುಲಾರ್ ಐಡೆಂಟಿಟಿಯನ್ನು ವರ್ಗಾಯಿಸಲು ನೆರವು ನೀಡುತ್ತದೆ. ಪ್ರಸ್ತುತ ಅದನ್ನು ಟಾರ್ಗೆಟ್ ಫೋನ್ ಅನ್ನು ಬಳಸದೆಯೂ ಆಪ್ ಮೂಲಕ ಮಾಡಬಹುದು. ಏಕಸ್ವರೂಪದ್ದಾಗಿರುವ ಅಂತಾರಾಷ್ಟ್ರೀಯ ಮೊಬೈಲ್ ಸ್ಟೇಷನ್ ಎಕ್ವಿಪ್‌ಮೆಂಟ್ ಐಡೆಂಟಿಟಿ (ಇಎಂಇಐ) ಸಂಖ್ಯೆಯ ವರ್ಗಾವಣೆಗೆ ಈ ಪ್ರಕ್ರಿಯೆಯು ಅವಕಾಶ ನೀಡುತ್ತದೆ.

ದೀಪಿಕಾ ಪಡುಕೋಣೆ, ಡ್ರಗ್ಸ್ ಮತ್ತು ಜೆಎನ್‌ಯು ಪ್ರತಿಭಟನೆ: ವಿವಾದದ ಹೊಸ ಬೆಸುಗೆ

ತನಿಖಾ ಸಂಸ್ಥೆಗಳಿಗೆ ಅನುಮತಿ

ತನಿಖಾ ಸಂಸ್ಥೆಗಳಿಗೆ ಅನುಮತಿ

ಇದನ್ನು ಯಾವುದೇ ವ್ಯಕ್ತಿ ನಿಭಾಯಿಸಲು ಕಾನೂನಿನ ಪ್ರಕಾರ ಅವಕಾಶವಿಲ್ಲ. ಆದರೆ ಫೋನ್‌ನಲ್ಲಿರುವ ಡೇಟಾಗಳನ್ನು ಪಡೆಯಲು ಕಾನೂನಾತ್ಮಕ ಅವಕಾಶ ಹೊಂದಿರುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ತನಿಖೆಯು ಅನೇಕ ಸೆಲೆಬ್ರಿಟಿಗಳ ಹಳೆಯ ವಾಟ್ಸಾಪ್ ಚಾಟ್‌ಗಳನ್ನು ಕೆದಕಲು ಸಾಧ್ಯವಾಗಿದೆ. ಆದರೆ ವಾಟ್ಸಾಪ್ ಸಂಸ್ಥೆ ಹೇಳುವ ಪ್ರಕಾರ ಅಳಿಸಿದ ಹಾಗೂ ಸ್ಟೋರ್ ಮಾಡಲಾದ ಸಂದೇಶಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಹಾಗಾದರೆ ತನಿಖಾ ಸಂಸ್ಥೆ ಯಾವ ಮಾರ್ಗದಿಂದ ಈ ವಾಟ್ಸಾಪ್ ಚಾಟ್‌ಗಳ ವಿವರಗಳನ್ನು ಕಲೆ ಹಾಕಿದೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.

English summary
Whatsapp has defended its end to end encryption security over leaked chats related to probe of bollywood drugs case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X