ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿರುವ ರಿಷಿ ಕಪೂರ್ ಪೂರ್ವಜರ ಮನೆ ಆಗಲಿದೆ ಮ್ಯೂಸಿಯಂ

|
Google Oneindia Kannada News

ಬಾಲಿವುಡ್ ನಟ ರಿಷಿ ಕಪೂರ್ ನ ಪೂರ್ವಜರ ಮನೆಯನ್ನು ಸಂಗ್ರಹಾಲಯವಾಗಿ ಮಾರ್ಪಡಿಸಲು ಯೋಜನೆ ರೂಪಿಸಿದೆ. ಅಲ್ಲಿನ ಖಿಸಾ ಖ್ವಾನಿ ಬಜಾರ್ ಮನೆಯನ್ನು ಸಂಗ್ರಹಾಲಯವಾಗಿ ಬದಲಿಸಲು ರಿಷಿ ಕಪೂರ್ ಮನವಿ ಮಾಡಿದ್ದರು. ಭಾರತೀಯ ಪತ್ರಕರ್ತರ ಜತೆ ಬುಧವಾರ ರಾತ್ರಿ ಈ ಬಗ್ಗೆ ಪಾಕ್ ವಿದೇಶಾಂಗ ಸಚಿವ ಷಾ ಮಹ್ಮೂದ್ ಖುರೇಷಿ ಮಾತನಾಡಿದ್ದಾರೆ.

ಆ ಮನೆಯನ್ನು ಸಂಗ್ರಹಾಲಯ ಅಥವಾ ಒಂದು ಸಂಸ್ಥೆಯನ್ನಾಗಿ ಮಾಡಿ ಎಂದು ರಿಷಿ ಕಪೂರ್ ಕೇಳಿಕೊಂಡಿದ್ದರು. ನಾವದನ್ನು ಸಂಗ್ರಹಾಲಯವಾಗಿ ಮಾಡ್ತೀವಿ ಅಂತ ತಿಳಿಸಿ ಎಂದು ಅಲ್ಲಿನ ಸಚಿವ ಹೇಳಿದ್ದಾರೆ.

ಕಪೂರ್ ಕುಟುಂಬದ ಆರ್ ಕೆ ಸ್ಟುಡಿಯೋ ಗೋದ್ರೇಜ್ ಸಂಸ್ಥೆ ಪಾಲುಕಪೂರ್ ಕುಟುಂಬದ ಆರ್ ಕೆ ಸ್ಟುಡಿಯೋ ಗೋದ್ರೇಜ್ ಸಂಸ್ಥೆ ಪಾಲು

ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಜಕೀಯ ವ್ಯವಹಾರಗಳ ವಿಶೇಷ ಸಹಾಯಕ ನಯಿಮುಲ್ ಹಕ್ ಮಾತನಾಡಿ, ಪೇಶಾವರದ ಇತಿಹಾಸ, ಪರಂಪರೆ ಕಾಪಾಡಿಕೊಳ್ಳುವಲ್ಲಿ ಪ್ರಧಾನಿಗಳಿಗೆ ವಿಶೇಷ ಕಾಳಜಿ ಇದೆ. ಈ ಸ್ಥಳಗಳನ್ನು ಮತ್ತೆ ಹಳೆ ವೈಭವಕ್ಕೆ ತರುವುದು ಅವರ ಗುರಿ. ಆದ್ದರಿಂದ ರಿಷಿ ಕಪೂರ್ ಅವರ ಮನವಿಯನ್ನು ಸಕಾರಾತ್ಮಕವಾಗಿ ಪೂರೈಸಲಾಗುವುದು ಎಂದಿದ್ದಾರೆ.

ಸಚಿವ ಶೆಹರ್ಯಾರ್ ಖಾನ್ ಅಫ್ರಿದಿ ಮಾತನಾಡಿ, 2016ರಲ್ಲಿ ನಾನು ಜೈಪುರ್ ಗೆ ಭೇಟಿ ನೀಡಿದಾಗ ಆ ಮನೆ ಬಗ್ಗೆ ರಿಷಿ ಕಪೂರ್ ಕರೆ ಮಾಡಿದ್ದರು ಎಂದಿದ್ದಾರೆ. ಆ ಸಂದರ್ಭದಲ್ಲಿ ಅಫ್ರಿದಿ ಅವರು ಖೈಬರ್-ಪಂಖ್ತುವಾ ಪ್ರಾಂತ್ಯದ ಸಂಸದ ಆಗಿದ್ದರು. ಮತ್ತು ಇಮ್ರಾನ್ ಖಾನ್ ರ ತೆಹ್ರೀಕ್ ಇ ಇನ್ಸಾಫ್ ಪಕ್ಷ ವಿರೋಧ ಪಕ್ಷವಾಗಿತ್ತು.

ಪೃಥ್ವಿರಾಜ್ ಕಪೂರ್ ರ ತಂದೆ ನಿರ್ಮಿಸಿದ ಮನೆ

ಪೃಥ್ವಿರಾಜ್ ಕಪೂರ್ ರ ತಂದೆ ನಿರ್ಮಿಸಿದ ಮನೆ

"ರಿಷಿ ಕಪೂರ್ ಕರೆ ಮಾಡಿದ್ದರು. ಅವರ ಪೂರ್ವಜರ ಮನೆಯನ್ನು ಸಂಗ್ರಹಾಲಯ ಮಾಡುವ ಬಗ್ಗೆ ಮಾತನಾಡಿದರು. ಇದೀಗ ಕೇಂದ್ರ ಹಾಗೂ ಪ್ರಾಂತ್ಯದ ಸರಕಾರವು ಇದನ್ನು ಪೂರ್ಣಗೊಳಿಸಲು ಕೆಲಸ ಮಾಡುತ್ತಿವೆ" ಎಂದು ಅಫ್ರಿದಿ ಹೇಳಿದ್ದಾರೆ. ಪಾಕಿಸ್ತಾನದ ಖಿಸಾ ಖ್ವಾನಿ ಬಜಾರ್ ನಲ್ಲಿ ಬಶೇರ್ ನಾಥ್ ಕಪೂರ್ ಮನೆಯನ್ನು ನಿರ್ಮಿಸಿದ್ದರು. ಅವರು ಪೃಥ್ವಿರಾಜ್ ಕಪೂರ್ ರ ತಂದೆ.

ರಾಜ್ ಕಪೂರ್ ಜನಿಸಿದ್ದು ಅದೇ ಮನೆಯಲ್ಲಿ

ರಾಜ್ ಕಪೂರ್ ಜನಿಸಿದ್ದು ಅದೇ ಮನೆಯಲ್ಲಿ

ಅದೇ ಮನೆಯಲ್ಲಿ ಪೃಥ್ಚಿರಾಜ್ ಕಪೂರ್ ರ ಮಗ ರಾಜ್ ಕಪೂರ್ 1924ರಲ್ಲಿ ಜನಿಸಿದ್ದರು. ಐದು ಅಂತಸ್ತಿನ ಈ ಮನೆ ದಖಿ ನಲ್ ಬಂದಿ, ಪೇಶಾವರದ ಅತಿ ಎತ್ತರದ ಜಾಗ ಕೆಲ ವರ್ಷಗಳ ಹಿಂದೆ ಕುಸಿದಿದೆ. ಆದರೆ ಈಗಲೂ ಅರವತ್ತು ಕೋಣೆಗಳು ಹಾಗೇ ಉಳಿದಿವೆ. ಭಾರತ-ಪಾಕಿಸ್ತಾನ ವಿಭಜನೆಯ ನಂತರ ಕಪೂರ್ ಕುಟುಂಬದವರು ಪೇಶಾವರ್ ಬಿಟ್ಟು ಭಾರತಕ್ಕೆ ಬಂದರು. ಆ ಮನೆಯ ಒಡೆತನ ಹಲವರ ಕೈ ಬದಲಾಗಿದೆ.

ಸಾಯುವ ಮುನ್ನ ಪಾಕಿಸ್ತಾನ ನೋಡಬೇಕು ಎಂದ ಸ್ಟಾರ್ ನಟ!ಸಾಯುವ ಮುನ್ನ ಪಾಕಿಸ್ತಾನ ನೋಡಬೇಕು ಎಂದ ಸ್ಟಾರ್ ನಟ!

ದಿಲೀಪ್ ಕುಮಾರ್ ರ ಮನೆಯೂ ಅಲ್ಲಿದೆ

ದಿಲೀಪ್ ಕುಮಾರ್ ರ ಮನೆಯೂ ಅಲ್ಲಿದೆ

ಬಾಲಿವುಡ್ ನ ಮತ್ತೊಬ್ಬ ದಿಗ್ಗಜ ದಿಲೀಪ್ ಕುಮಾರ್ ರ ಪೂರ್ವಜರ ಮನೆ ಕೂಡ ಖಿಸಾ ಖ್ವಾನಿ ಬಜಾರ್ ಹತ್ತಿರದಲ್ಲೇ ಇದೆ. ಆ ಕಟ್ಟಡವನ್ನು ವಶಕ್ಕೆ ಪಡೆದು, ರಾಷ್ಟ್ರೀಯ ಪಾರಂಪರಿಕ ತಾಣವಾಗಿ ಮಾಡಲು ಪಾಕಿಸ್ತಾನದ ಅಧಿಕಾರಿಗಳು ಬಹಳ ಪ್ರಯತ್ನ ಪಟ್ಟರು. ಆದರೆ ಕಾನೂನು ತೊಡಕುಗಳ ಕಾರಣದಿಂದಾಗಿ ಅದು ಸಾಧ್ಯವಾಗಲಿಲ್ಲ.

ಶಾರೂಕ್ ಖಾನ್ ನ ಸಂಬಂಧಿಕರು ಪೇಶಾವರದಲ್ಲಿ ಇದ್ದಾರೆ

ಶಾರೂಕ್ ಖಾನ್ ನ ಸಂಬಂಧಿಕರು ಪೇಶಾವರದಲ್ಲಿ ಇದ್ದಾರೆ

ದಿಲೀಪ್ ಕುಮಾರ್ ರ ಮನೆಯು ಖುದಾಬಾದ್ ಮೊಹಲ್ಲಾದ ಡೋಮಾ ಗಲಿಯಲ್ಲಿದೆ. ದಿಲೀಪ್ ಕುಮಾರ್ ಮೂಲ ಹೆಸರು ಮುಹಮ್ಮದ್ ಯುಸೂಫ್ ಖಾನ್. ಅಲ್ಲೇ ಡಿಸೆಂಬರ್ 11, 1922ರಲ್ಲಿ ಜನಿಸಿದರು. ಅವರ ಬಾಲ್ಯದ ಕೆಲ ವರ್ಷಗಳು ಖಿಸಾ ಖ್ವಾನಿ ಬಜಾರ್ ನಲ್ಲಿ ಕಳೆದಿದ್ದರು. ಬಾಲಿವುಡ್ ನಟ ಶಾರುಕ್ ಖಾನ್ ಕೆಲ ಸಂಬಂಧಿಕರು ಈಗಲೂ ಪೇಶಾವರದ ಶಾ ವಲೀ ಕತಾಲ್ ಪ್ರದೇಶದಲ್ಲೇ ಇದ್ದಾರೆ.

English summary
The Pakistan government plans to make Rishi Kapoor’s ancestral home in the fabled Qissa Khwani Bazar into a museum in keeping with a request from the Bollywood star. Foreign minister Shah Mahmood Qureshi spoke about the government’s plans during an interaction with visiting Indian journalists late on Wednesday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X