Manoj Kumar Death: ನಟ-ನಿರ್ದೇಶಕ ಮನೋಜ್ ಕುಮಾರ್ ನಿಧನ: ಮೋದಿ ಸಂತಾಪ

ಬಾಲಿವುಡ್‌ನ ಖ್ಯಾತ ಹಿರಿಯ ನಟ ಹಾಗೂ ನಿರ್ದೇಶಕ ಮನೋಜ್ ಕುಮಾರ್ (87) ಇಂದು ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಶುಕ್ರವಾರ ಬೆಳಿಗ್ಗೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.

ಮನೋಜ್ ಕುಮಾರ್ ದೀರ್ಘಕಾಲದವರೆಗೆ ಡಿಕಂಪೆನ್ಸೇಟೆಡ್ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದರು. ಅವರ ಸ್ಥಿತಿ ಹದಗೆಟ್ಟ ನಂತರ ಫೆಬ್ರವರಿ 21ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅವರ ಆರೋಗ್ಯ ಸುಧಾರಿಸಲೇ ಇಲ್ಲ. ಹೀಗಾಗಿ ಅವರು ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳಿದ್ದಿದ್ದಾರೆ. ಪುತ್ರ ಕುನಾಲ್ ಗೋಸ್ವಾಮಿ ಅವರ ಮಾಹಿತಿಯಂತೆ ಮನೋಜ್ ಕುಮಾರ್ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ.

bollywood actor-director manoj kumar no more

ಮನೋಜ್ ಕುಮಾರ್ ಅವರು ವಿಶೇಷವಾಗಿ ದೇಶಭಕ್ತಿ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದರು. ಹೀಗಾಗಿ ಅವರನ್ನು ಭರತ್ ಕುಮಾರ್ ಎಂದೂ ಕರೆಯಲಾಗುತ್ತದೆ. ಉಪಕಾರ್, ಪೂರ್ವ-ಪಶ್ಚಿಮ್, ಕ್ರಾಂತಿ, ರೋಟಿ-ಕಪ್ಡಾ ಔರ್ ಮಕಾನ್ ಅವರ ಯಶಸ್ವಿ ಚಿತ್ರಗಳು.

ಮನೋಜ್ ಕುಮಾರ್ 7 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮೊದಲ ಫಿಲ್ಮ್‌ಫೇರ್ ಪ್ರಶಸ್ತಿಯನ್ನು 1968 ರಲ್ಲಿ ಉಪಕಾರ್ ಚಿತ್ರಕ್ಕಾಗಿ ನೀಡಲಾಯಿತು. ಉಪಕಾರ್ ಸಿನಿಮಾ ಅತ್ಯುತ್ತಮ ಚಿತ್ರ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಕಥೆ ಮತ್ತು ಅತ್ಯುತ್ತಮ ಸಂಭಾಷಣೆಗಾಗಿ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅಲ್ಲದೆ ಮನೋಜ್ ಕುಮಾರ್ ಅವರಿಗೆ 1992 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. 2016 ರಲ್ಲಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ನೀಡಲಾಗಿದೆ.

bollywood actor-director manoj kumar no more

ನರೇಂದ್ರ ಮೋದಿ ಸಂತಾಪ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನೋಜ್ ಕುಮಾರ್ ಅವರ ನಿಧನಕ್ಕೆ ಸಂಪಾತ ಸೂಚಿಸಿದ್ದಾರೆ. 'ದಿ ಲೆಜೆಂಡರಿ ನಟ ಮತ್ತು ಚಲನಚಿತ್ರ ನಿರ್ಮಾಪಕ ಶ್ರೀ ಮನೋಜ್ ಕುಮಾರ್ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಭಾರತೀಯ ಚಿತ್ರರಂಗದ ಪ್ರತಿಮೆಯಾಗಿದ್ದರು, ವಿಶೇಷವಾಗಿ ಅವರ ದೇಶಭಕ್ತಿಯ ಉತ್ಸಾಹಕ್ಕಾಗಿ ಸ್ಮರಣೀಯರಾಗಿದ್ದರು, ಅದು ಅವರ ಚಲನಚಿತ್ರಗಳಲ್ಲಿ ಪ್ರತಿಫಲಿಸಿತು. ಮನೋಜ್ ಜಿ ಅವರ ಕೆಲಸವು ರಾಷ್ಟ್ರೀಯ ಹೆಮ್ಮೆಯ ಭಾವವನ್ನು ಹೊತ್ತಿಸಿದೆ ಮತ್ತು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ನಾನು ಇದ್ದೇನೆ. ಓಂ ಶಾಂತಿ' ಎಂದು 'ಎಕ್ಸ್' ನಲ್ಲಿ ಪ್ರಧಾನಿ ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+