ಸ್ವಿಸ್ ಸರ್ಕಾರದಿಂದ ಕಪ್ಪು ಹಣದ ಮಾಹಿತಿ ರವಾನೆಗೆ ಕ್ರಮ
ಸ್ವಿಜರ್ಲೆಂಡ್ ನ ಬ್ಯಾಂಕುಗಳಲ್ಲಿ ಕಪ್ಪು ಹಣವಿಟ್ಟವರ ಮಾಹಿತಿ ಶೀಘ್ರವೇ ಬಹಿರಂಗಗೊಳಿಸುವುದಾಗಿ ಸ್ವಿಜರ್ಲೆಂಡ್ ಸರ್ಕಾರ ಹೇಳಿದೆ.
ನವದೆಹಲಿ, ಜೂನ್ 16: ಸ್ವಿಜರ್ಲೆಂಡ್ ನಲ್ಲಿ ಕಪ್ಪು ಹಣ ಇಟ್ಟಿರುವ ಭಾರತೀಯರ ಪತ್ತೆಗೆ ಕೇಂದ್ರ ಸರ್ಕಾರ ನಡೆಸುತ್ತಿದ್ದ ಪ್ರಯತ್ನಕ್ಕೆ ಯಶಸ್ಸು ಸಿಗುವ ಕಾಲ ಬಂದಿದೆ.
ಸ್ವಿಜರ್ಲೆಂಡ್ ನ ನಾನಾ ಬ್ಯಾಂಕುಗಳಲ್ಲಿ ಅಡಗಿಸಿಟ್ಟಿರುವ ಭಾರತೀಯ ಕಪ್ಪು ಹಣದ ಬಗ್ಗೆ ಇನ್ನು ಭಾರತ ಸರ್ಕಾರದೊಂದಿಗೆ ಮಾಹಿತಿ ಹಂಚಿಕೊಳ್ಳುವುದಾಗಿ ಸ್ವಿಜರ್ಲೆಂಡ್ ಸರ್ಕಾರ ಹೇಳಿದೆ.

ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ದೇಶದೇಶಗಳ ನಡುವೆ ಮಾಹಿತಿ ವಿನಿಯಮಕ್ಕೆ ಅನುಕೂಲವಾಗುವಂತೆ ಎಐಒಐ ಎಂಬ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಇದರಲ್ಲಿ ಜಗತ್ತಿನ ಎಲ್ಲಾ ದೇಶಗಳೂ ಸ್ವಯಂ ಪ್ರೇರಿತವಾಗಿ ಸದಸ್ಯತ್ವ ಪಡೆಯಲಿವೆ.
2018ರಿಂದ ಇದು ಅಸ್ತಿತ್ವಕ್ಕೆ ಬರಲಿದ್ದು, 2019ರಿಂದ ಮಾಹಿತಿ ವಿನಿಮಯ ಎಗ್ಗಿಲ್ಲದಂತೆ ಸಾಗಲಿದೆ ಎಂದು ಸ್ವಿಜರ್ಲೆಂಡ್ ಸರ್ಕಾರ ತಿಳಿಸಿದೆ.












Click it and Unblock the Notifications