ಅರುಣ್ ಜೇಟ್ಲಿ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ಸಿಗರು
ನವದೆಹಲಿ, ಅ.22: ವಿದೇಶದಲ್ಲಿರುವ ಬ್ಯಾಂಕುಗಳಲ್ಲಿ ಅಕ್ರಮವಾಗಿ ಹಣ ಇಟ್ಟಿರುವವರ ಹೆಸರು ಬಹಿರಂಗವಾದರೆ ಕಾಂಗ್ರೆಸ್ ಮುಜುಗರಪಟ್ಟುಕೊಳ್ಳುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ತಿರುಗಿಬಿದ್ದಿದ್ದು, ವಾಕ್ ಪ್ರಹಾರ ನಡೆಸಿದ್ದಾರೆ.
ಕಾಂಗ್ರೆಸ್ ಮುಖಂಡ ಅಜಯ್ ಮಾಕೆನ್, ದಿಗ್ವಿಜಯ್ ಸಿಂಗ್, ಯುವ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಸೇರಿದಂತೆ ಅನೇಕ ನಾಯಕರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಬಳಸಿಕೊಂಡು ಅರುಣ್ ಜೇಟ್ಲಿ ಹಾಗೂ ಮೋದಿ ಸರ್ಕಾರದ ವಿರುದ್ಧ ಚುಚ್ಚು ನುಡಿಗಳನ್ನಾಡಿದ್ದಾರೆ. ನಿಮಗೆ ತಾಕತ್ತಿದ್ದರೆ ಕಪ್ಪು ಹಣ ಹೊಂದಿರುವ ಖಾತೆದಾರರ ಪೂರ್ಣ ವಿವರ ಬಹಿರಂಗಗೊಳಿಸಿ, ಈ ದೇಶದಲ್ಲಿ ಸರ್ಕಾರ ಇದೆ ಎಂದು ತೋರಿಸಲಿ.
ಕೇವಲ 136 ಜನರ ಹೆಸರನ್ನ ಮಾತ್ರ ಬಹಿರಂಗಪಡಿಸುವುದಕ್ಕೆ ಸೀಮಿತವಾಗುವುದು ಬೇಡ. ಅರ್ಧಸತ್ಯ ಎಂದಿಗೂ ಸತ್ಯವಾಗದು ಎಂಬುದು ಪ್ರಧಾನಿಗೆ ಗೊತ್ತಿರಲಿ, ಮೋದಿ ಅವರೇ ಕಪ್ಪು ಹಣ ಆದಷ್ಟು ಬೇಗ ಭಾರತಕ್ಕೆ ತಂದು ತಲಾ 15 ಲಕ್ಷ ರು ಯಾವಾಗ ಹಂಚುತ್ತೀರಾ? ಎಂದು ಮಾಜಿ ಕೇಂದ್ರ ಸಚಿವ ಅಜಯ್ ಮಾಕೆನ್ ಪ್ರಶ್ನಿಸಿದ್ದಾರೆ.

ಹೇಳಿದ ಮಾತಿಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ಸಿಗೆ ಯಾವುದೇ ಪಕ್ಷಭೇದ ಇಲ್ಲ. ಸರ್ಕಾರಕ್ಕೆ ಧಮ್ಮಿದ್ದರೆ ಕಪ್ಪು ಹಣ ಹೊಂದಿದ ಎಲ್ಲರ ಹೆಸರುಗಳನ್ನೂ ಬಹಿರಂಗಪಡಿಸಲಿ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
Why only 136 names out of 800? Why the half truth? We want the complete truth: Ajay Maken on Black money issue pic.twitter.com/g4KVqdCKr2
— ANI (@ANI_news) October 22, 2014 ಕಾಂಗ್ರೆಸ್ ಪಕ್ಷದ ಮೇಲೆ ಯಾವ ಬೆದರಿಕೆಯೂ ಕೆಲಸ ಮಾಡದು. ಕಾಂಗ್ರೆಸ್ ಪಕ್ಷ ವ್ಯಕ್ತಿಗಿಂತ ದೊಡ್ಡದು. ಕಪ್ಪು ಹಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಜಯ್ ಹೇಳಿದ್ದಾರೆ.
"ಮೋಸಗಾರ ಮೋಸಗಾರನೇ, ಅವನು ಕಾಂಗ್ರೆಸ್ಸಿಗನೂ ಅಲ್ಲ ಬಿಜೆಪಿ ಯವನೂ ಅಲ್ಲ. ಈ ಮೋಸಗಾರರ ಹೆಸರನ್ನು ಬಹಿರಂಗಪಡಿಸಲು ಜೇಟ್ಲಿಯವರಿಗೆ ತಡೆಯುತ್ತಿರುವುದೇನು? ಎಂದು ಪ್ರಶ್ನಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಸತವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Modi Ji entire nation is waiting for you to fulfill your promise of bringing back black money and give 15 lakh to all: Ajay Maken, Cong
— ANI (@ANI_news) October 22, 2014 ಎಐಸಿಸಿ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ತಮ್ಮ ಟ್ವೀಟ್ ನಲ್ಲಿ "ಜನ ಧನ ಯೋಜನೆಯಡಿ ಇದು ದೀಪಾವಳಿಯ ಕೊಡುಗೆಯೂ ಅಥವಾ 2019ರವರೆಗೆ ಇನ್ನೂ ಕಾಯಬೇಕೋ! ಇದು ಅದ್ಭುತ ಫೇಕುಯಿಸಮ್(FEKUISM)" ಎಂದು ಕುಹಕವಾಡಿದ್ದಾರೆ. ಹಣಕಾಸು ಮಂತ್ರಿ ಜನರಗೆ ಸುಳ್ಳು ಹೇಳುವುದನ್ನ ನಿಲ್ಲಿಸಿ, ಮೋದಿ ತಮ್ಮ ಪ್ರಚಾರ ಸಭೆಗಳಲ್ಲಿ ವಚನ ಕೊಟ್ಟಂತೆ ಎಲ್ಲ ನಾಗರಿಕರ ಅಕೌಂಟ್ ನಲ್ಲಿ 3 ಲಕ್ಷ ಯಾವಾಗ ಜಮಾಯಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. (ಪಿಟಿಐ)
FM instead of bluffing people should tell us when he is depositing 3 L in a/c of every citizen as promised by Modi in his campaign speeches.
— digvijaya singh (@digvijaya_28) October 22, 2014 -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications