ನೇಣುಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ

ಕೋಲ್ಕತಾ, ಜೂನ್ 2: ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಬಲರಾಮಪುರ ಎಂಬಲ್ಲಿ ವಿದ್ಯುತ್ ಕಂಬವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆಯಾಗಿದೆ.

ಬಿಜೆಪಿ ಆಯೋಜಿಸಿದ್ದ ಥಾಣಾ ಘೆರಾವೊ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಆತನನ್ನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಕಾರ್ಯಕರ್ತನನ್ನು ದುಲಾಲ್ ಕುಮಾರ್ (32) ಎಂದು ಗುರುತಿಸಲಾಗಿದೆ. ಘಟನೆಯ ತನಿಖೆಯ ಹೊಣೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.

bjp worker found dead in west bengal; party accused murder by tmc

'ಈ ಹೀನ ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ. ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಯಬೇಕು. ಈ ಘೋರ ಕೃತ್ಯ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಜಾರ್ಖಂಡ್ ಗಡಿಯಲ್ಲಿನ ಪಾತ್ರವೇನು, ಬಜರಂಗ ದಳ, ಮಾವೊವಾದಿಗಳು ಅಥವಾ ಬಿಜೆಪಿ ಭಾಗಿಯಾಗಿರುವ ಸಂಗತಿಗಳಾವುವು. ಇವೆಲ್ಲವುಗಳ ಸತ್ಯ ಹೊರಬರಬೇಕು' ಎಂದು ಟಿಎಂಸಿ ಮುಖಂಡ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.

ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿದೆ ಎನ್ನಲಾದ ಆರೋಪ ಕೇಳಿಬಂದಿರುವುದು ಇದು ಎರಡನೆಯ ಪ್ರಕರಣವಾಗಿದೆ.

ಮೇ 30ರಂದು ತ್ರಿಲೋಚನ್ ಮಹತೋ (18) ಎಂಬಾತನ ಶವ ಮರವೊಂದಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

18ರ ವಯಸ್ಸಿನಲ್ಲಿಯೇ ಬಿಜೆಪಿಯೊಂದಿಗೆ ರಾಜಕೀಯದಲ್ಲಿ ಗುರುತಿಸಿಕೊಂಡಿರುವುದು ನಿನ್ನ ಜೀವವನ್ನು ಬಲಿ ತೆಗೆದುಕೊಂಡಿದೆ. ಚುನಾವಣೆ ಸಮಯದಿಂದಲೂ ನಿನಗಾಗಿ ಹುಡುಕಾಡುತ್ತಿದ್ದೆ. ಮತ್ತೀಗ ನೀನು ಸತ್ತುಹೋಗಿದ್ದಿ ಎಂದು ಆತನ ದೇಹದ ಹಿಂಭಾಗದಲ್ಲಿ ಅಂಟಿಸಿದ್ದ ಪೋಸ್ಟರ್‌ನಲ್ಲಿ ಬರೆಯಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+