ಸಮೀಕ್ಷೆ: ಉತ್ತರಾಖಂಡ ಬಿಜೆಪಿಗೆ, ಉಪ್ರ, ಪಂಜಾಬ್, ಗೋವಾ ಅತಂತ್ರ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜನವರಿ 27: ಉತ್ತರಾಖಂಡದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರಿ ಜಯ ಗಳಿಸಲಿದೆ. ಗೋವಾ, ಉತ್ತರ ಪ್ರದೇಶ ಮತ್ತು ಪಂಜಾಬ್ ನಲ್ಲಿ ಅತಂತ್ರ ವಿಧಾನಸಭೆ ಆಗಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಉತ್ತರ ಪದೇಶದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹಂಸ ರೀಸರ್ಚ್ ಭವಿಷ್ಯ ನುಡಿದಿದೆ.

ಗೋವಾದಲ್ಲೂ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಲಭಿಸಲಿವೆ. ಪಂಜಾಬ್ ನಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನದಲ್ಲಿ ಜಯಗಳಿಸಲಿದೆ ಎಂದು ಕೂಡ ಹೇಳಲಾಗಿದೆ. ಉತ್ತರ ಪ್ರದೇಶದಲ್ಲಿ 403 ಸ್ಥಾನಗಳ ಪೈಕಿ ಬಿಜೆಪಿ 192-196, ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿ ಕೂಟ 178-182, ಬಹುಜನ ಸಮಾಜ ಪಕ್ಷ 20-24, ಇತರರು 5-9 ಸ್ಥಾನಗಳನ್ನು ಗಳಿಸಲಿದ್ದಾರೆ ಎಂದು ಹೇಳಲಾಗಿದೆ.[ಉಪ್ರ ಚುನಾವಣೆಯಲ್ಲಿ ಪ್ರಿಯಾಂಕಾ ಚಮತ್ಕಾರ ತೋರಬಲ್ಲರೆ?]

BJP will win in Uttarakhand, hung assembly in Goa, Punjab, UP

117 ಸಂಖ್ಯಾಬಲದ ಪಂಜಾಬ್ ನಲ್ಲಿ ಕಾಂಗ್ರೆಸ್ 49-51, ಆಮ್ ಆದ್ಮಿ ಪಕ್ಷ 33-55, ಎಸ್ ಎಡಿ-ಬಿಜೆಪಿ ಮೈತ್ರಿ ಕೂಟ 28-30 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಉತ್ತರಾಖಂಡದಲ್ಲಿ 70 ಸ್ಥಾನಗಳ ಪೈಕಿ ಬಿಜೆಪಿ 37-39, ಕಾಂಗ್ರೆಸ್ 27-29, ಬಿಎಸ್ ಪಿ 1-3 ಸ್ಥಾನಗಳಲ್ಲಿ ವಿಜಯಿಯಾಗಬಹುದು ಎಂಬುದು ಸಮೀಕ್ಷೆ ಫಲಿತಾಂಶ.

ಇನ್ನು ಗೋವಾದಲ್ಲಿ ಆಮ್ ಆದ್ಮಿ ಪಕ್ಷ 2-4, ಬಿಜೆಪಿ 17-19, ಕಾಂಗ್ರೆಸ್ 11-13, ಮಹಾರಾಷ್ಟ್ರ ಗೋಮಂತಕ್ ಪಾರ್ಟಿ 3-5, ಇತರರು ಎರಡು ಸ್ಥಾನಗಳಲ್ಲಿ ಜಯ ಗಳಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
An opinion poll has predicted that the BJP would win big in Uttarakhand, but in the states of Goa, Uttar Pradesh and Punjab it would be a hung assembly. The BJP will emerge as the single largest party in the Uttar Pradesh Assembly elections 2017, an opinion poll by the Week-Hansa Research has predicted.
Please Wait while comments are loading...