ರಾಜ್ಯಸಭಾ ಚುನಾವಣೆ: 14 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಜೆಪಿ; ನಾರಾಯಣಸಾ ಭಾಂಡಗೆ ರಾಜ್ಯದಿಂದ ಸ್ಪರ್ಧೆ
ಮುಂಬರುವ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದಿಂದ ಸುಧಾಂಶು ತ್ರಿವೇದಿ ಮತ್ತು ಆರ್‌ಪಿಎನ್ ಸಿಂಗ್ ಅವರ ಹೆಸರನ್ನು ಘೋಷಣೆ ಮಾಡಿದೆ. ಹರಿಯಾಣ ಬಿಜೆಪಿಯ ಮಾಜಿ ಮುಖ್ಯಸ್ಥ ಸುಭಾಷ್ ಬರಾಲ ಅವರನ್ನು ಹರಿಯಾಣದಿಂದ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಬಿಹಾರ, ಛತ್ತೀಸ್‌ಗಢ, ಕರ್ನಾಟಕ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದ ಅಭ್ಯರ್ಥಿಗಳನ್ನೂ ಘೋಷಿಸಲಾಗಿದೆ. ರಾಜ್ಯಸಭೆಯ 56 ಸ್ಥಾನಗಳಿಗೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ. ಕರ್ನಾಟಕ ರಾಜ್ಯಸಭೆಯಿಂದ ನಾರಾಯಣಸಾ ಭಾಂಡಗೆ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ನಾರಾಯಣಸಾ ಭಾಂಡಗೆ ಅವರು ಬಾಗಲಕೋಟೆಯವರಾಗಿದ್ದು ಮಾಜಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ
ಕರ್ನಾಟಕ: ನಾರಾಯಣಸಾ ಭಾಂಡಗೆ
ಬಿಹಾರ: ಡಾ ಧರ್ಮಶೀಲಾ ಗುಪ್ತಾ, ಡಾ ಭೀಮ್ ಸಿಂಗ್
ಛತ್ತೀಸ್‌ಗಢ: ರಾಜಾ ದೇವೇಂದ್ರ ಪ್ರತಾಪ್ ಸಿಂಗ್
ಹರಿಯಾಣ: ಸುಭಾಷ್ ಬರಾಲಾ
ಉತ್ತರ ಪ್ರದೇಶ: ಸುಧಾಂಶು ತ್ರಿವೇದಿ, ಆರ್‌ಪಿಎನ್ ಸಿಂಗ್, ಚೌಧರಿ ತೇಜ್‌ವೀರ್ ಸಿಂಗ್, ಸಾಧನಾ ಸಿಂಗ್, ಅಮರ್‌ಪಾಲ್ ಮೌರ್ಯ, ಸಂಗೀತಾ ಬಲ್ವಂತ್, ನವೀನ್ ಜೈನ್
ಉತ್ತರಾಖಂಡ: ಮಹೇಂದ್ರ ಭಟ್
ಪಶ್ಚಿಮ ಬಂಗಾಳ: ಸಾಮಿಕ್ ಭಟ್ಟಾಚಾರ್ಯ
ಟಿಎಂಸಿ ಅಭ್ಯರ್ಥಿಗಳ ಪಟ್ಟಿ
ರಾಜ್ಯದಿಂದ ಮುಂಬರುವ ರಾಜ್ಯಸಭಾ ಚುನಾವಣೆಗೆ ಪತ್ರಕರ್ತೆ ಸಾಗರಿಕಾ ಘೋಷ್, ಪಕ್ಷದ ನಾಯಕಿ ಸುಶ್ಮಿತಾ ದೇವ್ ಮತ್ತು ಇತರ ಇಬ್ಬರ ಹೆಸರನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಭಾನುವಾರ ಪ್ರಕಟಿಸಿದೆ. ಪಶ್ಚಿಮ ಬಂಗಾಳದಿಂದ ಐದು ರಾಜ್ಯಸಭಾ ಸ್ಥಾನಗಳಿಗೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ.












Click it and Unblock the Notifications