ಲೋಕಸಭೆ ಚುನಾವಣೆಯಲ್ಲಿ ಮತಗಳ ಕಬ್ಜಾಗೆ ಬಿಜೆಪಿ ಸರ್ಜಿಕಲ್ ಸ್ಟ್ರೈಕ್: ಅಚ್ಚರಿಯ ಸಿಎಂಗಳ ಆಯ್ಕೆ- ಇದರ ಹಿಂದಿನ ತಂತ್ರವೇನು?
ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಹೆಸರು ನಿರ್ಧಾರವಾದ ನಂತರ ಎಲ್ಲರ ಕಣ್ಣು ರಾಜಸ್ಥಾನದತ್ತ ನೆಟ್ಟಿತ್ತು. ಎರಡೂ ರಾಜ್ಯಗಳಲ್ಲಿ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕಿತ್ತು. ಹೀಗಾಗಿ ರಾಜಸ್ಥಾನದಲ್ಲಿ ಬಿಜೆಪಿ ಯಾವ ತಂತ್ರವನ್ನು ಅನುಸರಿಸುತ್ತದೆ ಎಂಬ ಬಗ್ಗೆ ಎಲ್ಲರ ಚಿತ್ತ ನೆಟ್ಟಿತ್ತು. ಈ ಪ್ರಶ್ನೆಗೂ ಮಂಗಳವಾರ ಮಧ್ಯಾಹ್ನಾ ಬಿಜೆಪಿ ಹೈಕಮಾಂಡ್ ಉತ್ತರ ನೀಡಿದೆ.
ಬಿಜೆಪಿ ಅಳೆದು ತೂಗಿ ಸಿಎಂ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. 2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮಾಸ್ಟರ್ ಸ್ಟ್ರೋಕ್ ನೀಡಿದೆ. ಯಾರೂ ಊಹೆ ಮಾಡದ ರೀತಿ ಮುಖ್ಯಮಂತ್ರಿ ಅಭ್ಯರ್ಥಿಗಳ ಘೋಷಣೆ ಮಾಡಿರುವ ಕಮಲ ಪಡೆ, ಯುವಕರ ಚಿತ್ತವನ್ನು ತನ್ನತ್ತ ಹಿಡಿದಿಟ್ಟುಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ.

ಮಧ್ಯಪ್ರದೇಶದಲ್ಲಿ ಒಬಿಸಿ ಮತದಾರ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಕೈ ಹಿಡಿದಿದ್ದಾನೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಬಾವುಟ ಹಾರಿಸಲು ಇದು ಸಹ ಮುಖ್ಯ ಅಂಶವಾಗಿದೆ. ಹೀಗಾಗಿಯೇ ಬಿಜೆಪಿ ಈ ಬಾರಿ ಅಳೆದು ತೂಗಿ ಮುಖ್ಯಮಂತ್ರಿ ಸಿಂಹಾಸನವನ್ನು ಘೋಷಿಸಿದೆ. ಸಿಎಂ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಜ್ಯೋತಿರಾದಿತ್ಯ ಸಿಂಧ್ಯ, ಸೇರಿದಂತೆ ಹಲವು ನಾಯಕರ ಹೆಸರುಗಳು ಈ ರೇಸ್‌ನಲ್ಲಿ ಕೇಳಿ ಬಂದಿತ್ತು. ಆದರೆ ಬಿಜೆಪಿ, ಸಿಎಂ ರೇಸ್‌ನಲ್ಲಿರುವ ನಾಯಕರಿಗಿಂತ ಭಿನ್ನವಾಗಿ, ಮಾಜಿ ಶಿಕ್ಷಣ ಸಚಿವ ಮೋಹನ್ ಯಾದವ್‌ಗೆ ರಾಜ್ಯದ ಅಧಿಕಾರವನ್ನು ನೀಡಿ ಅಚ್ಚರಿ ಮೂಡಿಸಿತು.
ಸಿಎಂ ಸ್ಥಾನಕ್ಕಾಗಿ ಅವರ ಹೆಸರು ಎಲ್ಲಿಯೂ ಚರ್ಚೆಯಾಗಿರಲಿಲ್ಲ. ಮೋಹನ್ ಯಾದವ್ ಮಧ್ಯಪ್ರದೇಶದಲ್ಲಿ ಬಿಜೆಪಿಯ ಒಬಿಸಿ ಮುಖಂಡ. ಒಬಿಸಿ ಮತದಾರರನ್ನು 2024ರ ಲೋಕಸಭೆ ಚುನಾವಣೆಯಲ್ಲಿ ಸೆಳೆಯಲು ಈ ನಿರ್ಧಾರ ಕೈಗೊಂಡಿದೆ.
ಉತ್ತರ ಭಾರತದಲ್ಲಿ ಜಾತಿ ಮತಗಳ ಪಾತ್ರ ಪ್ರಮುಖವಾಗಿದೆ. ಹೀಗಿರುವಾಗ ಮೋಹನ್ ಯಾದವ್ ಗೆ ಮಧ್ಯಪ್ರದೇಶದ ಕಮಾಂಡ್ ನೀಡಿ ಒಬಿಸಿ ಮತದಾರರಿಗೆ ಸಂದೇಶ ರವಾನಿಸುವ ಬಿಜೆಪಿ ಛತ್ತೀಸ್ ಗಢದಲ್ಲಿ ವಿಷ್ಣು ದೇವ್ ಸಾಯಿ ಅವರನ್ನು ಸಿಎಂ ಮಾಡುವ ಮೂಲಕ ದೇಶಾದ್ಯಂತ ಪರಿಶಿಷ್ಟ ಪಂಗಡದ ಮತದಾರರ ಓಲೈಕೆಗೆ ಯತ್ನಿಸಿದೆ. ಯುಪಿ, ಮಧ್ಯಪ್ರದೇಶ, ಬಿಹಾರ, ಹರಿಯಾಣಗಳಲ್ಲಿ ಒಬಿಸಿ ಮತದಾರರು ಚುನಾವಣೆಯ ದಿಕ್ಕನ್ನು ನಿರ್ಧರಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾರೆ.

ಮೋಹನ್ ಯಾದವ್ ಆಯ್ಕೆ ಏಕೆ?
ಯುಪಿಯಲ್ಲಿ ಒಬಿಸಿ ಮತದಾರರ ಸಂಖ್ಯೆ ಶೇಕಡಾ 54 ರಷ್ಟಿದ್ದರೆ, ಯಾದವರ ಸಂಖ್ಯೆ ಶೇಕಡಾ 10 ರಷ್ಟಿದೆ. ಬಿಹಾರದಲ್ಲಿ 63.13 ಪ್ರತಿಶತ ಒಬಿಸಿ ಮತದಾರರು ಮತ್ತು 14.26 ಪ್ರತಿಶತ ಯಾದವ ಮತದಾರರಿದ್ದಾರೆ. ಮಧ್ಯಪ್ರದೇಶದಲ್ಲಿ ಶೇ.42ರಷ್ಟು ಒಬಿಸಿ ಮತದಾರರಿದ್ದರೆ, ಯಾದವ ಮತದಾರರ ಸಂಖ್ಯೆ ಶೇ.12ರಿಂದ 14ರಷ್ಟಿದೆ. ಹರಿಯಾಣದಲ್ಲಿ 28.3 ಪ್ರತಿಶತ ಒಬಿಸಿ ಮತದಾರರು ಅದರಲ್ಲಿ 10 ಪ್ರತಿಶತ ಯಾದವರು ಇದ್ದಾರೆ. ಒಬಿಸಿ ಪ್ಲಸ್ ಯಾದವ್ ಮುಖವನ್ನು ಮಧ್ಯಪ್ರದೇಶದಲ್ಲಿ ಸಿಎಂ ಎಂದು ಘೋಷಿಸುವ ಮೂಲಕ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕ್ರಮವಾಗಿ ಅಖಿಲೇಶ್ ಯಾದವ್ ಮತ್ತು ಬಿಹಾರದಲ್ಲಿ ಲಾಲು ಯಾದವ್ ಅವರ ಮತ ಬುಟ್ಟಿಗೆ ಬಿಜೆಪಿ ಕೈ ಹಾಕಿದೆ.
ಛತ್ತಿಸ್‌ಗಡ್ ದಲ್ಲಿ ಚುನಾವಣಾ ಪೂರ್ವದಲ್ಲಿ ಹಾಕಿಕೊಂಡ ಯೋಜನೆಯನ್ನೇ ಬಿಜೆಪಿ ಕಾರ್ಯಕರ್ತರು ಅಖಾಡದಲ್ಲಿ ಅಚ್ಚು ಕಟ್ಟಾಗಿ ನಿಭಾಯಿಸಿದರು. ಪರಿಣಾಮ 90 ಸ್ಥಾನಗಳಲ್ಲಿ ಬಿಜೆಪಿ 54 ರಲ್ಲಿ ಜಯ ಸಾಧಿಸಿ ಮತ್ತೊಮ್ಮೆ ಗದ್ದುಗೆ ಏರಲು ತಯಾರಿ ನಡೆಸಿತು. ಚುನಾವಣೆಯಲ್ಲಿ ಗೆದ್ದ ನಂತರ ರಮಣ್ ಸಿಂಗ್ ಅವರ ಇಂಗಿತ ಮತ್ತು ಆತ್ಮವಿಶ್ವಾಸ ನೋಡಿ ರಮಣ್ ಸಿಂಗ್ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬಹುದು ಎಂದು ರಾಜಕೀಯ ವಲಯದಲ್ಲಿ ಊಹಿಸಲಾಗಿತ್ತು. ಆದರೆ ಈ ಲೆಕ್ಕಾಚಾರವನ್ನು ಬಿಜೆಪಿ ಹೈಕಮಾಂಡ್ ಉಲ್ಟಾ ಮಾಡಿತು.
ವಿಷ್ಣು ದೇವ್ ಸಾಯಿ ಆಯ್ಕೆ ಏಕೆ?
ಛತ್ತೀಸ್‌ಗಢ ರಾಜ್ಯದಲ್ಲಿ ಬುಡಕಟ್ಟು ಸಮುದಾಯವು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಮತ್ತು ವಿಷ್ಣು ದೇವ್ ಸಾಯಿ ಈ ಸಮುದಾಯವನ್ನು ಪ್ರತಿನಿಧಿಸುತ್ತಾರೆ. ವಿಷ್ಣು ದೇವ್ ಸಾಯಿ ರಮಣ್ ಸಿಂಗ್ ಅವರಿಗೆ ಆಪ್ತರು. ಇದಲ್ಲದೇ ಸಂಘಕ್ಕೆ ನಿಕಟವಾಗಿರುವ ನಾಯಕ. ಸಿಎಂ ಸ್ಥಾನಕ್ಕೆ ಬಂದ ನಂತರ ವಿಷ್ಣು ದೇವ್ ಹೆಸರು ಹೊಸ ಮುಖದಂತೆ ಕಾಣಿಸಬಹುದು, ಆದರೆ ಅವರ ಹಿರಿಯ ಹಾಗೂ ನುರಿತ ರಾಜಕಾರಣಿ..

ಛತ್ತೀಸ್‌ಗಢ ಬುಡಕಟ್ಟು ಜನಾಂಗದ ರಾಜ್ಯ. ರಾಜ್ಯದಲ್ಲಿ ಶೇ.32ರಷ್ಟು ಬುಡಕಟ್ಟು ಸಮುದಾಯವಿದೆ. ವಿಧಾನಸಭೆಯ 29 ಸ್ಥಾನಗಳೂ ಎಸ್‌ಟಿಗೆ ಮೀಸಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರ ರಚಿಸಲು ರಾಜಕೀಯ ಪಕ್ಷಗಳಿಗೆ ಆದಿವಾಸಿಗಳ ವಿಶ್ವಾಸವೂ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಛತ್ತೀಸ್‌ಗಢದ ಮೊದಲ ಬುಡಕಟ್ಟು ಮುಖ್ಯಮಂತ್ರಿಯನ್ನು ಘೋಷಿಸಿದೆ. ವಿಷ್ಣುದೇವ್ ಸಾಯಿ ರಾಜ್ಯದ ಮೊದಲ ಅಧಿಕೃತ ಬುಡಕಟ್ಟು ಮುಖ್ಯಮಂತ್ರಿ. ಉತ್ತರ ಭಾರತದಲ್ಲಿ ಬುಡಕಟ್ಟು ಜನಾಂಗದ ಮತಗಳು ಲೋಕಸಭಾ ಚುನಾವಣೆಗಳಲ್ಲಿ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಬಿಜೆಪಿ ಅಚ್ಚರಿಯ ಮುಖ್ಯಮಂತ್ರಿಯನ್ನು ಘೋಷಿಸಿದೆ.
ಭಜನಲಾಲ್ ಶರ್ಮಾ ರಾಜಸ್ಥಾನದ ನೂತನ ರಾಜ
ಬಿಜೆಪಿ ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡ್‌ದಲ್ಲಿ ಮಾಡಿದಂತೆ ರಾಜಸ್ಥಾನದಲ್ಲಿ ಅಚ್ಚರಿಯ ಅಭ್ಯರ್ಥಿಯ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ರಾಜಸ್ಥಾನದಲ್ಲಿ ಜನಪರ ಮಹಿಳಾ ಯೋಜನೆಗಳನ್ನು ಘೋಷಿಸಿ ಮಹಿಳೆಯರ ಚಿತ್ತವನ್ನು ಬಿಜೆಪಿ ಕದ್ದಿತ್ತು. ಹೀಗಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಮಹಿಳೆ ಕುಡುತ್ತಾಳೆ ಎಂದೇ ಎಲ್ಲರೂ ಲೆಕ್ಕಾಚಾರವನ್ನು ಹಾಕಿದ್ದರು. ಆದರೆ, ಬಿಜೆಪಿ ತನ್ನ ಲೋಕಸಭಾ ಚುನಾವಣೆಯ ರಣತಂತ್ರವನ್ನು ಮತ್ತೊಮ್ಮೆ ಪ್ರಯೋಗಿಸಿತು.

ಒಬಿಸಿ ಹಾಗೂ ಬುಡಕಟ್ಟು ಜನಾಂಗದ ಮತಗಳನ್ನು ಸೆಳೆಯಲು ಬಿಜೆಪಿ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಸಾಂಪ್ರದಾಯಕ ಮತಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಲು ಬಿಜೆಪಿ ರಾಜಸ್ಥಾನದಲ್ಲೂ ಮೈಂಡ್ ಗೇಮ್ ಮಾಡಿತು. ರಾಜಸ್ಥಾನದ ಗದ್ದುಗೆಯನ್ನು ಭಜನಲಾಲ್ ಶರ್ಮಾಗೆ ನೀಡಿ ಬ್ರಾಹ್ಮಣರ ಮತಗಳನ್ನು ಬೇರೆ ಕಡೆ ಹೋಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಭಜನಲಾಲ್ ಶರ್ಮಾ ಯಾರು?
- ಭಜನಲಾಲ್ ಶರ್ಮಾ ಭರತ್‌ಪುರದವಾಗಿದ್ದು, ಈ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಗದ ಕಾರಣ, ಕ್ಷೇತ್ರ ಬದಲಿಸಿ ಗೆಲುವಿನ ನಗೆ ಬೀರಿದ್ದಾರೆ.
- ಭಜನಲಾಲ್ ಶರ್ಮಾ ಸಂಘಟನಾತ್ಮಕ ವ್ಯಕ್ತಿ.. ರಾಜ್ಯದಲ್ಲಿ ಬಹುವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಇನ್ನು ಕಾಂಗ್ರೆಸ್ ಆಡಳಿತದ ವಿರುದ್ಧವೂ ಇವರು ಧ್ವನಿ ಎತ್ತಿದ್ದರು.
- ಭಜನಲಾಲ್ ಶರ್ಮಾ ಎಬಿವಿಪಿಯಲ್ಲಿ ಕೆಲಸ ಮಾಡಿದ ಅನುಭವ ಹಾಗೂ ಆರ್‌ಎಸ್‌ಎಸ್ ಅಂಗಳದಲ್ಲಿ ಬೆಳೆದವರು.
- ಜನರೊಂದಿಗೆ ಬೆಳೆಯುವ ಕಲೆಯನ್ನು ಭಜನಲಾಲ್ ಶರ್ಮಾ ಕರಗತ ಮಾಡಿಕೊಂಡಿದ್ದಾರೆ.
- ಭಜನಲಾಲ್ ಶರ್ಮಾ 56 ವರ್ಷದವರಾಗಿದ್ದು, ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. 1.5 ಕೋಟಿ ಆಸ್ತಿಯನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
-
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications