• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜು.4ರಂದು ಮೋದಿ ಜೊತೆ ಬಿಜೆಪಿ ರಾಜ್ಯ ಘಟಕಗಳ ಸಭೆ!

|
Google Oneindia Kannada News

ನವದೆಹಲಿ, ಜುಲೈ 03 : ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಮಾಡಿರುವ ಕಾರ್ಯಗಳ ಬಗ್ಗೆ ರಾಜ್ಯ ಘಟಕಗಳು ಮಾಹಿತಿ ನೀಡಬೇಕಿದೆ.

   15 BBMP workers tested corona positive ಬಿಬಿಎಂಪಿ 15 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು|Oneindia Kannada

   ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. ಶನಿವಾರ ಸಂಜೆ 4 ಗಂಟೆಗೆ ನರೇಂದ್ರ ಮೋದಿ ಜೊತೆಗೆ ಬಿಜೆಪಿ ರಾಜ್ಯ ಘಟಕಗಳ ಸಭೆ ಆರಂಭವಾಗಲಿದೆ. ಪಕ್ಷದ ಹಿರಿಯ ನಾಯಕರು ಸಹ ಸಭೆಯಲ್ಲಿ ಇರುತ್ತಾರೆ.

   ಕರ್ನಾಟಕದ ಕಥೆ: ಲಾಕ್ ಡೌನ್ ವೇಳೆ ಪ್ರತಿನಿತ್ಯ ಒಬ್ಬ ರೈತ ಆತ್ಮಹತ್ಯೆ! ಕರ್ನಾಟಕದ ಕಥೆ: ಲಾಕ್ ಡೌನ್ ವೇಳೆ ಪ್ರತಿನಿತ್ಯ ಒಬ್ಬ ರೈತ ಆತ್ಮಹತ್ಯೆ!

   ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಭೆಯು ನಮೋ ಅಪ್ಲಿಕೇಶನ್ ಸೇರಿದಂತೆ ಪಕ್ಷದ ವಿವಿಧ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಪ್ರಸಾರವಾಗಲಿದೆ. ಬಿಜೆಪಿ ಘಟಕಗಳು ಪ್ರಧಾನಿ ಮುಂದೆ ವಿವರ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿವೆ.

   ಮತ್ತೆ ಲಾಕ್ ಡೌನ್ ಸುಳಿವು; ನಗರ ಬಿಟ್ಟು ಹೊರಟ ಜನರು ಮತ್ತೆ ಲಾಕ್ ಡೌನ್ ಸುಳಿವು; ನಗರ ಬಿಟ್ಟು ಹೊರಟ ಜನರು

   ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಲಾಕ್ ಡೌನ್ ಅವಧಿಯಲ್ಲಿ ಬಿಜೆಪಿ ಘಟಕಗಳು ಮಾಡಿದ ಕಾರ್ಯಗಳು, ಜನರಿಗೆ ನೆರವಾದ ರೀತಿ ಮುಂತಾದವುಗಳ ಕುರಿತು ವಿವರಣೆ ನೀಡಬೇಕಿದೆ.

   ಬೆಂಗಳೂರು; ಮಲ್ಲೇಶ್ವರದಲ್ಲಿ ವ್ಯಾಪಾರಿಗಳಿಂದ ಲಾಕ್ ಡೌನ್ ಬೆಂಗಳೂರು; ಮಲ್ಲೇಶ್ವರದಲ್ಲಿ ವ್ಯಾಪಾರಿಗಳಿಂದ ಲಾಕ್ ಡೌನ್

   ನರೇಂದ್ರ ಮೋದಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಮನೆ-ಮನೆಗೆ ಮೋದಿ ಸಾಧನೆಯನ್ನು ತಲುಪಿಸುವ ಕಾರ್ಯಕ್ರಮವನ್ನು ರಾಜ್ಯ ಘಟಕಗಳು ಆಯೋಜಿಸಿದ್ದವು. ಈ ಕುರಿತು ಸಹ ವಿವರಣೆ ನೀಡಲಿವೆ.

   ದೇಶದ ಹಲವಾರು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವೇ ಇದೆ. ಲಾಕ್ ಡೌನ್ ಸಮಯದಲ್ಲಿ ಬಿಜೆಪಿ ರಾಜ್ಯ ಘಟಕಗಳು ಜನರಿಗೆ ಆಹಾರ ವಿತರಣೆ ಸೇರಿದಂತೆ ಹಲವಾರು ಕೆಲಸಗಳನ್ನು ಮಾಡಿವೆ. ಒಟ್ಟಾರೆ ರಾಜ್ಯ ಘಟಕದ ಕಾರ್ಯಗಳ ಕುರಿತು ವಿವರಣೆಗಳನ್ನು ನಾಯಕರು ಕೊಡಲಿದ್ದಾರೆ.

   English summary
   BJP state units will give detailed presentation on work done by them during loc kdown. All our senior leaders including Narendra Modi will join meeting.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X