ಬಿಎಲ್ ಸಂತೋಷ್ 'ವಾಂಟೆಡ್': ಹೈದರಾಬಾದ್‌ನಾದ್ಯಂತ ಕಂಡುಬಂದ ಪೋಸ್ಟರ್‌ಗಳು- ಸುಳಿವು ನೀಡಿದವರಿಗೆ ಬಹುಮಾನವೂ ಘೋಷಣೆ
ಹೈದರಾಬಾದ್ ನಗರದಾದ್ಯಂತ ಬಿಜೆಪಿ ನಾಯಕ ಬಿಎಲ್ ಸಂತೋಷ್ ಅವರ 'ವಾಂಟೆಟ್' ಪೋಸ್ಟರ್‌ಗಳನ್ನು ಗೋಡೆಗಳ ಮೇಲೆ ಅಂಟಿಸಲಾಗಿದೆ.
ಹೈದರಾಬಾದ್, ಮಾರ್ಚ್ 16: ತೆಲಂಗಾಣದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವಿನ ಪೋಸ್ಟರ್ ವಾರ್ ಮುಂದುವರಿದಿದೆ. ಇಂದು ಎರಡನೇ ಬಾರಿಗೆ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಮತ್ತು ಎಂಎಲ್‌ಸಿ ಕೆ ಕವಿತಾ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ನಗರದಾದ್ಯಂತ ಬಿಜೆಪಿ ನಾಯಕ ಬಿಎಲ್ ಸಂತೋಷ್ ಅವರ 'ವಾಂಟೆಟ್' ಪೋಸ್ಟರ್‌ಗಳನ್ನು ಗೋಡೆಗಳ ಮೇಲೆ ಅಂಟಿಸಲಾಗಿದೆ.
ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಹೈದರಾಬಾದ್‌ನ ವಿಭಿನ್ನ ಸ್ಥಳಗಳಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಒಳಗೊಂಡಿರುವ ಪೋಸ್ಟರ್‌ಗಳು 'ವಾಂಟೆಡ್' ಚಿಹ್ನೆಯೊಂದಿಗೆ ಕಾಣಿಸಿಕೊಂಡಿವೆ.

ಪೋಸ್ಟರ್‌ನಲ್ಲಿ ಸಂತೋಷ್‌ಗೆ 'ಎಂಎಲ್‌ಎ ಖರೀದಿ ಪ್ರಕರಣದ ಪ್ರತಿಭೆ' ಎಂದು ತೋರಿಸಲಾಗಿದೆ. ಅವರ ಸುಳಿವು ನೀಡದವರಿಗೆ ಬಹುಮಾನವಾಗಿ 'ಮೋದಿಯವರ ₹ 15,00,000 ಭರವಸೆಯ ಮಂಜೂರಾತಿ' ಎಂದು ಬರೆಯಲಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೇಲಿ ಮಾಡಲಾಗದೆ.
Hyderabad,Telangana | BRS-BJP poster war: Ahead of ED questioning MLC K Kavitha now posters have come up in Hyderabad. In the posters BL Santosh, BJP National General Secretary has been shown as a criminal & 'Wanted'. Posters were seen at two different places in Hyderabad (14.3) pic.twitter.com/xxY7rZKlaL
— ANI (@ANI) March 15, 2023
ದೆಹಲಿ ಮದ್ಯ ನೀತಿ ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯದಿಂದ ಕವಿತಾ ಅವರ ವಿಚಾರಣೆ ನಡೆಯಿತು. ಅದರ ನಂತರ ಕೇಂದ್ರೀಯ ಸಂಸ್ಥೆಗಳ ದುರ್ಬಳಕೆಯ ಆರೋಪದ ಮೇಲೆ ಕೇಂದ್ರವನ್ನು ಟೀಕಿಸಲು ಪೋಸ್ಟರ್‌ಗಳನ್ನು ಒಂದು ಸಾಧನವಾಗಿ ಬಳಸುವುದು ಪ್ರಾರಂಭವಾಯಿತು. ಬಿಆರ್‌ಎಸ್ ಜೊತೆಗೆ ಆಮ್ ಆದ್ಮಿ ಪಾರ್ಟಿ (ಎಎಪಿ) ಕೂಡ ಪೋಸ್ಟರ್ ವಾರ್‌ನಲ್ಲಿ ಭಾಗವಹಿಸಿದೆ.

ಸಿಐಎಸ್‌ಎಫ್ ರೈಸಿಂಗ್ ಡೇ ಸಮಾರಂಭಕ್ಕೆ ಹಾಜರಾಗಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೈದರಾಬಾದ್‌ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರನ್ನು ವ್ಯಂಗ್ಯ ಮಾಡಲಾಗಿತ್ತು. ಟೀಕಾತ್ಮಕವಾದ ಪೋಸ್ಟರ್‌ಗಳಿಂದ ಅವರನ್ನು ಸ್ವಾತಿಸಲಾಗಿತು. ಬೇರೆ ಬೇರೆ ಪಕ್ಷಗಳಿಂದ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡ ಬಿಜೆಪಿ ನಾಯಕರನ್ನು ಒಳಗೊಂಡ ಪೋಸ್ಟರ್ ಅನ್ನು ಹಾಕಲಾಗಿತು. ಈ ಮೊದಲು ಅವರು ವಿವಿಧ ಹಗರಣಗಳಲ್ಲಿ ಭಾಗಿಯಾಗಿದ್ದರು. ಬಿಜೆಪಿ ಸೇರಿದ ಮೇಲೆ ಅವರ ಮೇಲಿನ ಆರೋಪಗಳೆಲ್ಲವೂ ತೊಳೆದುಹೋಗಿವೆ ಎಂಬ ಪೋಸ್ಟರ್‌ಗಳು ರಾರಾಜಿಸಿದ್ದವು. ಬಿಆರ್‌ಎಸ್ ಬಿಜೆಪಿಯನ್ನು 'ಡಿಟರ್ಜೆಂಟ್ ಪೌಡರ್ ಬ್ರಾಂಡ್ ನಿರ್ಮಾ' ಜೊತೆ ಹೋಲಿಸಿತ್ತು
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರು. ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ತೆರಳಿದ ನಂತರ ಅವರು ಸ್ವಚ್ಛವಾದರು ಎಂದು ಹೇಳಲಾದ 'ರೇಡ್ ಡಿಟರ್ಜೆಂಟ್'ಗಳನ್ನು ಉಲ್ಲೇಖಿಸುವ ಪೋಸ್ಟರ್‌ಗಳು ಹೈದರಾಬಾದ್‌ನಾದ್ಯಂತ ಕಂಡುಬಂದವು. ಡಿಟರ್ಜೆಂಟ್ ಬಳಸಿದ ನಂತರ ನಾಯಕರ ಕೊಳಕು ಬಿಳಿ ಟಿ-ಶರ್ಟ್‌ಗಳಿಗೆ ಕೇಸರಿ ಬಣ್ಣ ಹಾಕಲಾಗಿದೆ ಎಂದು ಪೋಸ್ಟರ್ ತೋರಿಸಿದೆ.
ಈ ಹಿಂದೆ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕವಿತಾ ಅವರನ್ನು ಇಡಿ ವಿಚಾರಣೆ ನಡೆಸಿತ್ತು. ಯಾವುದೇ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ತನ್ನ ಹೆಸರು ಕಾಣಿಸಿಕೊಂಡಿಲ್ಲ. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕೆಲವು ವ್ಯಕ್ತಿಗಳ ಕೆಲವು ಹೇಳಿಕೆಗಳ ಆಧಾರದ ಮೇಲೆ ತಮ್ಮನ್ನು ಉಲ್ಲೇಖಿಸಲಾಗಿದೆ ಎಂದು ಕವಿತಾ ಆರೋಪಿಸಿದ್ದಾರೆ. ನಂತರ ಆಕೆ ಇಡಿ ನೀಡಿದ ಸಮನ್ಸ್ ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ತಿರಸ್ಕರಿಸಲ್ಪಟ್ಟಿತು.
ತಮ್ಮ ನಿವಾಸದಲ್ಲಿ ತಮ್ಮನ್ನು ಪ್ರಶ್ನಿಸಲು ಇಡಿ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು. ಈ ವಿಚಾರಣೆಯ ವಿಡಿಯೊಗ್ರಫಿಗೆ ಅವಕಾಶ ನೀಡಬೇಕೆಂದು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಪುತ್ರಿ ಕವಿತಾ ಮನವಿ ಮಾಡಿದ್ದಾರೆ.












Click it and Unblock the Notifications