Delhi Election 2025: ನಾಲ್ಕನೇ ಚುನಾವಣೆ ಗೀತೆ ಬಿಡುಗಡೆ ಮಾಡಿದ ಬಿಜೆಪಿ

ಬೆಂಗಳೂರು, ಫೆಬ್ರವರಿ 02: ದೆಹಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಚುನಾವಣೆ ಕಾವು ರಂಗೇರಿದ್ದು, ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಈ ಮಧ್ಯೆ ಫೆಬ್ರವರಿ 5 ರ ದೆಹಲಿ ವಿಧಾನಸಭಾ ಚುನಾವಣೆ ಪ್ರಯುಕ್ತ ಬಿಜೆಪಿಯು ಇಂದು ಭಾನುವಾರ "ದಿಲ್ ವಾಲೋ ಕಿ ದೆಹಲಿ ಕೋ ಅಬ್ ಬಿಜೆಪಿ ಸರ್ಕಾರ್ ಚಾಹಿಯೇ" ಎಂಬ ಹಾಡು ಬಿಡುಗಡೆ ಮಾಡಿದೆ.

ದೆಹಲಿಯ ಎಲ್ಲ 70 ಸೀಟುಗಳಿಗೆ ಒಂದೇ ಹಂತದಲ್ಲಿ ಫೆಬ್ರವರಿ 5 ರಂದು ಮತದಾನ ನಡೆಯಲಿದೆ. ಕಣದಲ್ಲಿ ಎಎಪಿ, ಕಾಂಗ್ರೆಸ್ ವಿರುದ್ಧ ಬಿಜೆಪಿ ಸ್ಪರ್ಧಿಸುತ್ತಿದೆ. ಚುನಾವಣೆ ಕುರಿತ ಹಾಡನ್ನು ಬಿಜೆಪಿಯ ಮಾಜಿ ಸಂಸದ ದಿನೇಶ್ ಲಾಲ್ ಯಾದವ್ ಅಲಿಯಾಸ್ ನಿರಾಹುವಾ ಅವರು ಹಾಡಿದ್ದಾರೆ. ಅದನ್ನು ಬಿಜೆಪಿ ಬಿಡುಗಡೆ ಮಾಡಿ ತಾನೇ ದೆಹಲಿಯಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದೆ.

BJP Releases Poll Song for Delhi Assembly Election 2025

ಬಿಜೆಪಿ ಮಾಜಿ ಸಂಸದ ದಿನೇಶ್ ಲಾಲ್ ಯಾದವ್ ಹಾಡಿರುವ ಈ ಹಾಡು ಪಕ್ಷದ ಚುನಾವಣಾ ಪ್ರಚಾರದ ನಾಲ್ಕನೇ ಪ್ರಚಾರ ಗೀತೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಮಾಹಿತಿ ನೀಡಿದರು. ಅಲ್ಲದೇ ನೆನ್ನೆ ಶನಿವಾರ (ಫೆಬ್ರವರಿ 01) ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಇದೊಂದು "ಸುವರ್ಣ ಬಜೆಟ್" ಎಂದು ಅವರು ಬಣ್ಣಿಸಿದ್ದಾರೆ.

ಕೇಂದ್ರ ಸರ್ಕಾರ ಬೆಜಟ್ ಇದು 'ಅಮೃತ್ ಕಾಲದ ಸುವರ್ಣ ಬಜೆಟ್' ಆಗಿದೆ. ಎಲ್ಲರೂ ಸಂತೋಷವಾಗಿದ್ದಾರೆ ಮತ್ತು ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಅಭಿನಂದಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಎಲ್ಲ ರಂಗಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಿದ್ದರೆ. ಈವರೆಗಿನ ನನ್ನ ರಾಜಕೀಯ ಜೀವನದಲ್ಲಿ ಎಲ್ಲ ವಲಯಕ್ಕೂ ಇಷ್ಟೊಂದು ಯೋಜನೆ ನೀಡಿದ ಬಜೆಟ್ ನೋಡಿಲ್ಲ ಎಂದು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಕೇಂದ್ರ ಬಜೆಟ್ ಅನ್ನು ಬಿಜೆಪಿ ಸಂಸದ ಮನೋಜ್ ತಿವಾರಿ ಸಹ ಶ್ಲಾಘಿಸಿದ್ದಾರೆ. ₹12 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸದೇ ಮಧ್ಯಮ ವರ್ಗಕ್ಕೆ ದೊಡ್ಡ ಸಹಾಯ ಮಾಡಲಾಗಿದೆ. ಬಡವರಿಗೆ ಯೋಜನೆಗಳು, ಮಹಿಳೆಯರಿಗೆ ಮಾಸಿಕ ಕಂತಿನಂತೆ ಹಣ ನೀಡದಾಗಲೂ ಮಧ್ಯಮ ವರ್ಗದವರು ತಮಗೇನು ಲಾಭ ಎಂದು ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಮಧ್ಯಮ ವರ್ಗದವರು ವಾರ್ಷಿಕವಾಗಿ ಗಳಿಸುವ ರೂ.12 ಲಕ್ಷದವರೆಗಿನ ಆದಾಯದವರೆಗೆ ಯಾವುದೇ ತೆರಿಗೆ ಕಟ್ಟುವಂತಿಲ್ಲ ಎಂದು ಘೋಷಿಸಲಾಗಿದೆ. ಇದು ಮಧ್ಯಮ ವರ್ಗಕ್ಕೆ ದೊಡ್ಡ ಸಹಾಯವಾಗುತ್ತದೆ. ಇದು ಕಚೇರಿಗೆ ಉದ್ಯೋಗಿಗಳಿಗೆ, ಕಷ್ಟಪಟ್ಟು ದುಡಿಯುವವರಿಗೆ ಸಂತಸದ ಸುದ್ದಿಯಾಗಿದೆ ಎಂದು ಅವರು ವಿವರಿಸಿದರು.

ಫೆ.5ರಂದು ಮತದಾನ

ದೆಹಲಿಯಲ್ಲಿ ಒಟ್ಟು 70 ಸೀಟುಗಳಿಗೆ ಒಟ್ಟು 1040 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇವುಗಳನ್ನು ಪರಿಶೀಲಿಸಿದ ಕೇಂದ್ರ ಚುನಾವಣೆ ಆಯೋಗದ ಅಧಿಕಾರಿಗಳು ಒಟ್ಟು 699 ಉಮೇದುವಾರಿಕೆಗಳನ್ನು ಮಾತ್ರವೇ ಅಂತಿಮಗೊಳಿಸಿದರು. ಸದ್ಯ ಕಣದಲ್ಲಿ ಇಷ್ಟು ಮಂದಿ ಸ್ಪರ್ಧಿಸಿದ್ದು, ಇವರಲ್ಲಿ 96 ಮಂದಿ ಮಹಿಳೆಯರು ಸ್ಪರ್ಧೆ ಮಾಡುತ್ತಿದ್ದಾರೆ.

ಇದೇ ಫೆಬ್ರವರಿ 05ಕ್ಕೆ ಚುನಾವಣೆ ನಡೆಯಲಿದ್ದು, 1.5 ಕೋಟಿಗೂ ಅಧಿಕ ದೆಹಲಿ ಮತದಾರರು ಅಂದು 70 ವಿಧಾನಸಭಾ ಕ್ಷೇತ್ರಗಳ ರಾಜಕೀಯ ನಾಯಕರನ್ನು ಆಯ್ಕೆ ಮಾಡಲಿದ್ದಾರೆ. ಇದರ ಫಲಿತಾಂಶವು ಫೆಬ್ರವರಿ 08 ರಂದು ಬಿಡುಗಡೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+