Kangana Ranaut: ಬಿಜೆಪಿ - ಕಾಂಗ್ರೆಸ್‌ ರಾಜಕೀಯ "ಗೆಳತನದ ಗುಟ್ಟುರಟ್ಟು" ಮಾಡಿದ ಬಿಜೆಪಿ ಸಂಸದೆ ಕಂಗನಾ ರಣಾವತ್!

ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಬಾಲಿವುಡ್‌ನ ಹಲವು ವಿಷಯಗಳನ್ನು ತೆರೆದಿಟ್ಟಿದ್ದರು. ಇದೀಗ ಅವರು ರಾಜಕೀಯದಲ್ಲಿನ ಹುಳುಕು ಹಾಗೂ ರಹಸ್ಯಗಳನ್ನು ತೆರೆದಿಡುತ್ತಿದ್ದಾರೆ. ಕಂಗನಾ ರಣಾವತ್ ಅವರ ಮಾತುಗಳು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಂಗನಾ ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಕಂಗನಾ ಅವರ ನೇರವಾಗಿ ಹೇಳುವ ಹಲವು ಮಾತುಗಳು ಟ್ರೋಲ್‌ ಹಾಗೂ ಚರ್ಚೆಗೆ ಕಾರಣವಾಗಿದೆ.

ಅದೇ ರೀತಿ ಇದೀಗ ಕಂಗನಾ ಅವರು ರಾಜಕೀಯದಲ್ಲಿ ಫ್ರೆಂಡ್‌ಶಿಫ್ ಬಗ್ಗೆ ಮಾತನಾಡಿದ್ದಾರೆ. ರಾಜ್ ಶಮಾನಿ ಕ್ಲಿಪ್ಸ್ ಪಾಡ್‌ಕಾಸ್ಟ್‌ನಲ್ಲಿ ಅವರು ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ನೀವು ಬಾಲಿವುಡ್‌ನಲ್ಲಿ ಫ್ರೆಂಡ್ಸ್‌ ಆಗೋದಕ್ಕೆ ಆಗಲ್ಲ ಅಂತ ಹೇಳಿದ್ದೀರಿ. ಹಾಗಾದರೆ ರಾಜಕೀಯದಲ್ಲಿ ಫ್ರೆಂಡ್‌ಶಿಫ್ ಯಾವ ರೀತಿ ಇರುತ್ತೆ ಎನ್ನುವ ಬಗ್ಗೆ ಕಂಗನಾ ಮಜವಾದ ಉತ್ತರವನ್ನೇ ಕೊಟ್ಟಿದ್ದಾರೆ.

BJP MP Kangana Ranaut Shocking Statement About Friendship in Politics

ಬಾಲಿವುಡ್‌ನಲ್ಲಿ ಕಂಗನಾ ಹವಾ ಸೃಷ್ಟಿ ಮಾಡಿದ್ದರು. ಒಂದಷ್ಟು ವಿವಾದವನ್ನೂ ಸೃಷ್ಟಿ ಮಾಡಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ. ಲೋಕಸಭೆ ಪ್ರವೇಶ ಮಾಡಿದ್ದಾರೆ. ಸಿನಿಮಾದಿಂದ ರಾಜಕೀಯ ಪ್ರವೇಶ ಮಾಡಿರುವ ಅವರು ರಾಜಕೀಯದಲ್ಲೂ ಒಳ್ಳೆಯ ಹವಾ ಸೃಷ್ಟಿ ಮಾಡಿದ್ದಾರೆ.

ಕಂಗನಾ ರಾಜಕೀಯವಾಗಿ ನೀಡುತ್ತಿರುವ ಹೇಳಿಕೆಗಳು ಹಾಗೂ ಪ್ರಸ್ತಾಪಿಸುತ್ತಿರುವ ವಿಷಯಗಳು ದೇಶದಾದ್ಯಂತ ಚರ್ಚೆಯಾಗುತ್ತಿವೆ. ಈಚೆಗೆ ಅವರು ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್‌ ಅವರ ಕೇಸ್‌ನ ಬಗ್ಗೆ ಮಾತನಾಡಿದ್ದು. ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅವರು ರಾಜಕೀಯದ ಒಳಗುಟ್ಟುಗಳನ್ನು ರಟ್ಟು ಮಾಡುತ್ತಿದ್ದು. ಇದು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಹೌದು ಅದು ಯಾಕೆ ಎನ್ನುವ ವಿವರ ಇಲ್ಲಿದೆ.

BJP MP Kangana Ranaut Shocking Statement About Friendship in Politics

ಸಂಸತ್‌ನಲ್ಲಿ ಭಾರೀ ಗದ್ದಲವಿರುತ್ತೆ. ಬೇಡಿಕೆಗಳ ಸುರಿಮಳೆಯನ್ನೇ ಸುರಿಸಲಾಗುತ್ತೆ. ಸಂಸದರು ಅವರವರ ಲೋಕಸಭಾ ಕ್ಷೇತ್ರದಲ್ಲಿ ಏನಾಗಬೇಕು ಹಾಗೂ ಏನಾಗುತ್ತಿದೆ ಎನ್ನುವ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಸಿಕ್ಕಾಪಟ್ಟೆ ಡಿಮ್ಯಾಂಡ್, ಬೈಗುಳ ಹಾಗೂ ಕಿರುಚಾಟ ಸಿಕ್ಕಾಪಟ್ಟೆ ಜೋರಾಗಿಯೇ ಇರುತ್ತದೆ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರ ಇರುತ್ತೆ. ಒಂದು ಸಲ ನೀವು ಸಂಸತ್‌ನಿಂದ ಹೊರಗೆ ಬಂದರೆ ಅಂದರೆ ಸಂಸತ್‌ನ ಹಾಲ್‌ನಿಂದ ಹೊರಗೆ ಬಂದ ಕೂಡಲೇ ಕ್ಯಾಂಟೀನ್‌ನಲ್ಲಿ ಇಡೀ ಸೀನ್‌ ಪೂರ್ತಿ ಚೇಂಜ್‌ ಆಗಿ ಬಿಡುತ್ತೆ ಅಂತ ಕಂಗನಾ ಹೇಳಿದ್ದಾರೆ.

ಆಡಳಿತ - ಪ್ರತಿಪಕ್ಷ ಅಂತ ನೋಡದೆ ಎಲ್ಲಾ ಸಂಸದರು ನಗ್ತಾ ಇರ್ತಾರೆ. ಎಲ್ಲರೂ ಸೇರಿ ಊಟ ಮಾಡೋದು, ಕಾಫಿ - ಟೀ ಕುಡಿಯೋದು ಇಲ್ಲ ತಿಂಡಿ ತಿನ್ನೋದು ಮಾಡ್ತಿರ್ತಾರೆ. ಎಲ್ಲರೂ ಅಲ್ಲಿ ಗೆಳಯರೇ ಅಂತ ಹೇಳಿದ್ದಾರೆ. ಹಿರಿಯ ನಾಯಕರು ಕ್ಯಾಂಟೀನ್‌ನಲ್ಲಿ ಕಾಣಿಸಿಕೊಳ್ಳಲ್ಲ. ಆದರೆ ಉಳಿದಂತೆ ಎಲ್ಲರೂ ಚಿಲ್ಡ್‌ (ಕೂಲ್‌) ಆಗಿರುತ್ತಾರೆ.

BJP MP Kangana Ranaut Shocking Statement About Friendship in Politics

ಫೋಟೋಗಳಲ್ಲಿ ಬೇಕಾದರೆ ನೋಡಿ ಅಂತ ಕಂಗನಾ ಹೇಳಿದ್ದಾರೆ. ವಿವಿಧ ಪಕ್ಷಗಳು ಸಹ ಆಹ್ವಾನ ಮಾಡುತ್ತಾರೆ. ಸಂಸತ್‌ನಲ್ಲಿ ಇಬ್ಬರು ರಾಜಕೀಯ ನಾಯಕರು ಗಂಟಲು ಕಿರುಚಿಕೊಂಡು, ಕಣ್ಣು ಮುಖವನ್ನೆಲ್ಲ ಕೆಂಪಗೆ ಮಾಡಿಕೊಂಡು ಕಿರುಚುತ್ತಿರುತ್ತಾರೆ. ಅವರೇ ಹೊರಗೆ ಬಂದು ನೋಡಿದರೆ ಗಹಗಹಿಸಿ ನಗ್ತಾ ಇರ್ತಾರೆ ಅಂತ ಕಂಗನಾ ನಗುತ್ತಲ್ಲೇ ಹೇಳಿದ್ದಾರೆ.

ರಾಜಕೀಯದಲ್ಲಿ ಎಲ್ಲರೂ ಗೆಳಯರೇ. ಅಲ್ಲದೆ ಅಲ್ಲಿ ಪಕ್ಷದಿಂದ ಪಕ್ಷಕ್ಕೆ ಬದಲಾದವರು ಈ ಹಿಂದೆ ಗೆಳಯರಾಗಿದ್ದವರು ಎಲ್ಲರೂ ಇದ್ದಾರೆ. ಜನರಿಗೆ ಒಳ್ಳೆಯದನ್ನು ಮಾಡಬೇಕು ಎನ್ನುವುದು ಪ್ರತಿ ಸಂಸದರ ಆಸೆಯಾಗಿದೆ ಎನ್ನುವುದಂತೂ ನಿಜ ಅಂತ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+