ಅಲ್ವಾರ್ ಬಿಜೆಪಿ ಸಂಸದರ ನಿಧನಕ್ಕೆ ಮೋದಿ ಸಂತಾಪ

Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 17: ರಾಜಸ್ಥಾನದ ಅಲ್ವಾರ್ ನ ಹಾಲಿ ಬಿಜೆಪಿ ಸಂಸದ ಮಹಂತ್ ಚಂದನಾಥ್ ಇಂದು ಬೆಳಿಗ್ಗೆ ದೆಹಲಿಯ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.

ಮಹಂತ್ ಚಂದನಾಥ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಸಂಸದರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, "ತಮ್ಮ ಶ್ರೀಮಂತ ಸಾಮಾಜಿಕ ಕಾರ್ಯಗಳಿಂದ ಮಹಾಂತ್ ಚಂದನಾಥ್ ಯಾವತ್ತೂ ನೆನಪಿನಲ್ಲಿ ಉಳಿಯುತ್ತಾರೆ. ಅವರ ನಿಧನಕ್ಕೆ ತೀವ್ರ ಸಂತಾಪಗಳು," ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಇದೇ ವರ್ಷದ ಆರಂಭದಲ್ಲಿ ಮಹಾಂತ್ ಚಂದನಾಥ್ ಒಂದು ವರ್ಷದ ಜೈಲು ಶಿಕ್ಷೆಗೆ ಗುರಿಯಾಗದ್ದರು. ಭೂ ಹಗಣವೊಂದರಲ್ಲಿ ಚಂದನಾಥ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

BJP MP from Alwar, Mahant Chandnath passes away

2014ರಲ್ಲಿ ಅಲ್ವರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಜಿ ಸಚಿವ ಜಿತೇಂದ್ರ ಸಿಂಗ್ ಅವರನ್ನು ಸೋಲಿಸಿ ಚಂದನಾಥ್ ಸಂಸತ್ ಪ್ರವೇಶಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP MP from Alwar, Mahant Chandnath passes away at the age of 61 at a hospital in Delhi on Sunday morning.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ