ಕರ್ನಾಟಕದ ಬಿಜೆಪಿ ಶಾಸಕರಂತೆ ತ್ರಿಪುರಾ ವಿಧಾನಸಭೆಯಲ್ಲಿ ಪೋರ್ನ್‌ ವೀಕ್ಷಿಸುತ್ತಿರುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ

ಗುವಾಹಟಿ, ಮಾರ್ಚ್‌ 30: ರಾಜ್ಯ ವಿಧಾನಸಭೆಯ ಅಧಿವೇಶನದ ವೇಳೆ ತ್ರಿಪುರಾದ ಬಿಜೆಪಿ ಶಾಸಕರೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಪೋರ್ನ್ ವೀಕ್ಷಿಸುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ದೇಶದಾದ್ಯಂತ ಆಕ್ರೋಶ ಮತ್ತು ಟೀಕೆಗೆ ಒಳಗಾಗಿದೆ. ಶಾಸಕ ಜಾದವ್ ಲಾಲ್ ನಾಥ್ ಅವರು ಈಶಾನ್ಯ ರಾಜ್ಯದ ಬಾಗ್ಬಸ್ಸಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ರಾಜ್ಯ ಬಜೆಟ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿರುವಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಜಾದವ್ ಲಾಲ್ ನಾಥ್ ಅವರ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬರು ಸೆರೆಹಿಡಿದಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

BJP MLA caught watching obscene video on mobile during Tripura Assembly session

ಸ್ಪೀಕರ್ ಮತ್ತು ಇತರ ಶಾಸಕರು ಮಾತನಾಡುತ್ತಿದ್ದ ಸಮಯದಲ್ಲಿ ಜಾದವ್‌ ಲಾಲ್‌ ನಾಥ್‌ ಅವರು ತಮ್ಮ ಫೋನ್‌ನಲ್ಲಿ ಅಶ್ಲೀಲ ವಿಡಿಯೊವನ್ನು ವೀಕ್ಷಿಸಿದ್ದಾರೆ. ವಿಡಿಯೊ ಕ್ಲಿಪ್ ಅನ್ನು ತಡೆದು ನಿಧಾನವಾಗಿ ಮತ್ತೆ ಮತ್ತೆ ನೋಡುತ್ತಿರುವುದು ಕಂಡುಬಂದಿದೆ. ವಿಡಿಯೊ ಕ್ಲಿಪ್‌ಗಳನ್ನು ಫೀಡ್ ಮೂಲಕ ಸ್ಕ್ರಾಲ್ ಮಾಡುವುದನ್ನೂ ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

ಬಿಜೆಪಿ ವರಿಷ್ಠ ನಾಯಕರು ಈ ಶಾಸಕನಿಂದ ವಿವರಣೆ ಕೇಳಿದೆ. ತಮ್ಮ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ತಿಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜಾದವ್‌ ಲಾಲ್‌ ನಾಥ್ ಅವರು ಪೋರ್ನ್‌ ವೀಕ್ಷಣೆ ಆರೋಪ ಮತ್ತು ಘಟನೆ ಕುರಿತು ಈ ವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಧಿವೇಶನ ಮುಗಿದ ಕೂಡಲೇ ಅವರು ಸಭಾಂಗಣದಿಂದ ನಿರ್ಗಮಿಸಿದರು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ನಾಯಕರೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಪೋರ್ನ್ ವೀಕ್ಷಿಸಿ ಸಿಕ್ಕಿಬಿದ್ದಿರುವುದು ಇದೇ ಮೊದಲಲ್ಲ. 2012 ರಲ್ಲಿ, ಕರ್ನಾಟಕದ ಬಿಜೆಪಿ ಸರ್ಕಾರದ ಇಬ್ಬರು ಸಚಿವರು ರಾಜ್ಯ ವಿಧಾನ ಸಭೆಯೊಳಗೆ ತಮ್ಮ ಫೋನ್‌ಗಳಲ್ಲಿ ಪೋರ್ನ್ ಕ್ಲಿಪ್‌ಗಳನ್ನು ವೀಕ್ಷಿಸಿ ಸಿಕ್ಕಿ ಬಿದ್ದಿದ್ದರು. ಇದು ಮಾಧ್ಯಮಗಳಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕಾಯಿತು. ಸಚಿವರಾದ ಲಕ್ಷ್ಮಣ ಸವದಿ ಮತ್ತು ಸಿ ಸಿ ಪಾಟೀಲ್ ಅವರು ಪೋರ್ನ್‌ ವಿಡಿಯೊ ವಿಕ್ಷೀಸಿದ್ದಾರೆಂಬ ಆರೋಪಗಳು ಕೇಳಿಬಂದಿದ್ದವು.

ವಿಡಿಯೊ ಹಂಚಿಕೊಂಡಿರುವ ಟ್ವಿಟರ್‌ ಬಳಕೆದಾರರೊಬ್ಬರು, 'ತ್ರಿಪುರಾದ ಬಾಗ್ಬಾಸಾ ಕ್ಷೇತ್ರದ ಬಿಜೆಪಿ ಶಾಸಕ ಜದಾಬ್ ಲಾಲ್ ನಾಥ್ ಅವರು ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಪೋರ್ನ್ ವೀಕ್ಷಿಸುವಾಗ ಸಿಕ್ಕಿಬಿದ್ದಿದ್ದಾರೆ. ಕರ್ನಾಟಕ ಬಿಜೆಪಿ ಶಾಸಕ ಲಕ್ಷ್ಮಣ್ ಸವದಿ ಅಸೆಂಬ್ಲಿಯಲ್ಲಿ ಪೋರ್ನ್ ವೀಕ್ಷಿಸಿ ಸಿಕ್ಕಿಬಿದ್ದಿದ್ದರು. ಆ ನಂತರ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಬಡ್ತಿ ಪಡೆದಿದ್ದರು. ಜಾದಾಬ್ ಲಾಲ್ ಕೂಡ ಶೀಘ್ರದಲ್ಲೇ ಬಡ್ತಿ ಪಡೆಯಬಹುದು' ಎಂದು ಬರೆದುಕೊಂಡಿದ್ದಾರೆ.

'ಇದು ನವ ಭಾರತದ ಮತ್ತೊಂದು ಉದಾಹರಣೆ. ಭಾರತ ಹೆಣ್ಣು ಮಕ್ಕಳಿಗೆ ನಿಜವಾಗಿಯೂ ಸುರಕ್ಷಿತವೇ? ತ್ರಿಪುರಾದ ಬಾಗ್ಬಾಸಾ ಕ್ಷೇತ್ರದ ಬಿಜೆಪಿ ಶಾಸಕ ಜದಬ್ ಲಾಲ್ ನಾಥ್ ಅವರು ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಪೋರ್ನ್ ವೀಕ್ಷಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ' ಎಂಬುದಾಗಿ ಇನ್ನೊಬ್ಬ ಟ್ವೀಟಿಗರು ತಿಳಿಸಿದ್ದಾರೆ.

'ಶಾಸಕರು ವಿಧಾನಸಭೆಯ ಅಧಿವೇಶನದಲ್ಲಿ ಪೋರ್ನ್ ನೋಡುವ ಪರಂಪರೆಯನ್ನು ಮುಂದುವರಿಸಿದ್ದಾರೆ. ಇದೀಗ ಉತ್ತರ ತ್ರಿಪುರದ ಬಾಗ್ಬಸ್ಸಾದ ಬಿಜೆಪಿ ಶಾಸಕ ಜದಬ್ ಲಾಲ್ ನಾಥ್ ಅವರು ತ್ರಿಪುರಾ ವಿಧಾನಸಭೆಯ ಅಧಿವೇಶನದ ವೇಳೆ ಪೋರ್ನ್ ವೀಕ್ಷಿಸುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ' ಎಂದು ಇನ್ನೊಬ್ಬರು ಟ್ವೀಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+